International
oi-Malathesha M
ಲಾಹೋರ್: ಭ್ರಷ್ಟಾಚಾರ ಹಗರಣದಲ್ಲಿ ಲಾಕ್ ಆದವರು ಒಂದೋ ಜೈಲು ಸೇರಿ ಕಂಬಿ ಎಣಿಸುತ್ತಾರೆ, ಇಲ್ಲ ದೇಶಬಿಟ್ಟು ಓಡಿ ಹೋಗ್ತಾರೆ. ಆದರೆ ಈ ಮಾಜಿ ಪ್ರಧಾನಿ ಎರಡನ್ನೂ ಮಾಡಿದ್ದ. ಭ್ರಷ್ಟಾಚಾರ ಹಗರಣದಲ್ಲಿ ಜೈಲು ಸೇರಿ ಬಿಡುಗಡೆ ಆಗಿದ್ದ ಮಾಜಿ ಪ್ರಧಾನಿಗೆ ಇದೀಗ ರಿಲೀಫ್ ಸಿಕ್ಕಿದೆ. 37 ವರ್ಷ ಹಳೆಯ ಭ್ರಷ್ಟಾಚಾರ ಹಗರಣದಲ್ಲಿ ಮಾಜಿ ಪ್ರಧಾನಿ ಖುಲಾಸೆಯಾಗಿದ್ದಾರೆ. ಅಷ್ಟಕ್ಕೂ ಯಾರು ಆ ಮಾಜಿ ಪ್ರಧಾನಿ? ಇಲ್ಲಿದೆ ಮಾಹಿತಿ.
ಹೌದು, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಅಲ್ಲಿ ಪಾಕಿಸ್ತಾನ ಸೇನೆಯದ್ದೇ ಆಟ, ಭ್ರಷ್ಟ ರಾಜಕಾರಣಿಗಳು ಮಾಡಿದ್ದೇ ರೂಲ್ಸ್. ಅದ್ರಲ್ಲೂ ಭ್ರಷ್ಟಾಚಾರದ ಪ್ರಕರಣದಲ್ಲಿ ಬಚಾವ್ ಆಗಲು ಪಾಕ್ ಸರ್ಕಾರ ಮತ್ತು ರಾಜಕಾರಣಿಗಳು ಎಲ್ಲಾ ರೀತಿಯಲ್ಲಿ ಕುತಂತ್ರ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆ ತಾನೆ ಪಾಕ್‌ನ ಚುನಾಯಿತ ಸದಸ್ಯರ ಅನರ್ಹತೆ ಅವಧಿಯನ್ನು ಗರಿಷ್ಠ 5 ವರ್ಷಕ್ಕೆ ಸೀಮಿತಗೊಳಿಸುವ ಮಸೂದೆಯನ್ನ ಪಾಕಿಸ್ತಾನದ ಸಂಸತ್ ಅಂಗೀಕರಿಸಿತ್ತು. ಈಗ ನೋಡಿದರೆ ಮಾಜಿ ಪ್ರಧಾನಿ ವಿರುದ್ಧದ 37 ವರ್ಷಗಳಷ್ಟು ಹಳೆಯ ಭ್ರಷ್ಟಾಚಾರ ಹಗರಣ ಖುಲಾಸೆಯಾಗಿದೆ. ಹಾಗಾದ್ರೆ ಯಾರು ಆ ಮಾಜಿ ಪ್ರಧಾನಿ? ಬನ್ನಿ ತಿಳಿಯೋಣ.
ಇಮ್ರಾನ್ ಖಾನ್ ಶತ್ರುಗೆ ರಿಲೀಫ್!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬದ್ಧ ಶತ್ರು & ಪಾಕಿಸ್ತಾನದ ಮತ್ತೊಬ್ಬ ಮಾಜಿ ಪಿಎಂ ನವಾಜ್ ಷರೀಫ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಭ್ರಷ್ಟಾಚಾರ ಹಗರಣಗಳ ಸರದಾರನೆಂಬ ಆರೋಪ ಎದುರಿಸ್ತಿದ್ದ ನವಾಜ್ ಈಗಾಗಲೇ ಜೈಲೂಟ ತಿಂದು ಹೊರಬಂದವರು. ಅಲ್ಲದೆ ಪಾಕಿಸ್ತಾನ ಬಿಟ್ಟು ಹೋಗಿದ್ದ ನವಾಜ್ ಷರೀಫ್‌ಗೆ ಹೊಸ ಆಸೆಯೂ ಚಿಗುರಿದೆ. ಅದರಲ್ಲೂ ಮತ್ತೆ ಪಾಕ್ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮಾಜಿ ಪಿಎಂ ನವಾಜ್ ಷರೀಫ್ ಪ್ರಯತ್ನಿಸುತ್ತಿದ್ದು ಈಗ ಹಾಲು ಕುಡಿದಷ್ಟು ಸಂತೋಷ ತರುವ ಸುದ್ದಿ ಸಿಕ್ಕಿದೆ. 37 ವರ್ಷ ಹಳೆಯದಾದ ಪ್ರಕರಣದಲ್ಲಿ ಖುಲಾಸೆಯಾಗಿ ನಿಟ್ಟುಸಿರು ಬಿಟ್ಟಿರುವ ನವಾಜ್ ಷರೀಫ್ ಈಗ ಯಾವ ನಿರ್ಧಾರ ಕೈಗೊಳ್ಳಬಹುದು? ಮುಂದಿನ ನಡೆ ಏನಿರಬಹುದು? ಮುಂದೆ ಓದಿ.
ಪಾಕಿಸ್ತಾನ ಈಗ ಭ್ರಷ್ಟರ ಸ್ವರ್ಗ?
ಅಂದಹಾಗೆ ನವಾಜ್ ಷರೀಫ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಎಂ ಆಗಿದ್ದಾಗ ಅಪಾರ ಮೌಲ್ಯದ 6.75 ಎಕರೆ ಸರ್ಕಾರಿ ಜಮೀನು, ಅಕ್ರಮವಾಗಿ ಮಾಧ್ಯಮವೊಂದರ ಮಾಲೀಕರಿಗೆ ಪರಭಾರೆ ಮಾಡಿದ್ದಾರೆ ಎಂಬ ಆರೋಪ ಹೊತ್ತಿದ್ದರು. ನವಾಜ್ ಷರೀಫ್ ಮಾಡಿದ್ದ ಕೆಲಸ, ಸರ್ಕಾರಿ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದೆ ಅನ್ನೋ ಆರೋಪವಿತ್ತು. ಈ ಮಧ್ಯೆ ಭೂಮಿ ಪರಭಾರೆಗೆ ಲಂಚ ಪಡೆಯಲಾಗಿದೆ ಅನ್ನೋ ಆರೋಪವೂ ಕೇಳಿಬಂದಿತ್ತು. ಹೀಗೆ ಪಾಕಿಸ್ತಾನ ರಾಷ್ಟ್ರೀಯ ಭ್ರಷ್ಟಾಚಾರ ತಡೆ ಸಂಸ್ಥೆ ನವಾಜ್ ವಿರುದ್ಧ ಮುಗಿಬಿದ್ದಿತ್ತು. ಆದರೆ ಈಗ ಭ್ರಷ್ಟಾಚಾರ ಪ್ರಕರಣದಿಂದಲೇ ನವಾಜ್ ಷರೀಫ್‌ಗೆ ಸಂಪೂರ್ಣ ಮುಕ್ತಿ ಸಿಕ್ಕಿದೆ.
ಪನಾಮ ಪೇಪರ್ ಪ್ರಕರಣದಲ್ಲಿ ಲಾಕ್
ಇನ್ನು 2018ರಲ್ಲಿ ಪನಾಮ ಪೇಪರ್ ಪ್ರಕರಣದಲ್ಲಿ ನವಾಜ್ ಷರೀಫ್ ದೋಷಿಯೆಂದು ಪಾಕ್ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಹೀಗಾಗಿ ನವಾಜ್ ಷರೀಫ್ ಪಾಕಿಸ್ತಾನ ಬಿಟ್ಟಿದ್ದಾರೆ. ಆದರೆ ಅವರದ್ದೇ ಪಕ್ಷದ ನಾಯಕರು ಪಾಕಿಸ್ತಾನದಲ್ಲಿ ಈಗ ಅಧಿಕಾರಿದಲ್ಲಿದ್ದು ಮತ್ತೊಮ್ಮೆ ನವಾಜ್ ಷರೀಫ್ ಕರೆತರಲು ಯತ್ನಿಸುತ್ತಿದ್ದಾರೆ. ಈ ಪ್ರಯತ್ನಲ್ಲಿ ಒಂದೊಂದೇ ಗೆಲುವನ್ನು ಸಾಧಿಸುತ್ತಿದ್ದಾರೆ ನವಾಜ್ ಷರೀಫ್ ಬೆಂಬಲಿಗರು. ಆದರೆ ಈ ಬೆಳವಣಿಗೆ ವಿರುದ್ಧ ಇದೀಗ ಇಮ್ರಾನ್ ಖಾನ್ ಬೆಂಬಲಿಗರು ರೊಚ್ಚಿಗೆದ್ದಿದ್ದಾರೆ.
ಇಮ್ರಾನ್ & ನವಾಜ್ ಹಾವು-ಮುಂಗುಸಿ!
ಶತ್ರುಗಳಂತೆ ಕಚ್ಚಾಡಿದ್ದ ಇಮ್ರಾನ್ ಹಾಗೂ ನವಾಜ್ ಶರೀಫ್ ಪಾಕ್ ರಾಜಕೀಯದಲ್ಲಿ ಬದ್ಧ ವೈರಿಗಳು. ದೇಶಬಿಟ್ಟು ಹೊರಗಿರುವ ನವಾಜ್ ಈಗ ಮತ್ತೆ ಪಾಕಿಸ್ತಾನಕ್ಕೆ ಎಂಟ್ರಿ ಕೊಡೋದು ಗ್ಯಾರಂಟಿ ಆಗಿದೆ. ಪಕ್ಷದ ಮುಂದಾಳತ್ವ ವಹಿಸಲು ಹಿರಿಯ ಸಹೋದರ ನವಾಜ್ ಶರೀಫ್ ದೇಶಕ್ಕೆ ಮರಳುವುದನ್ನ ಕಾಯುತ್ತಿದ್ದೇನೆ ಎಂದು ಖುದ್ದು ಪಾಕ್ ಹಾಲಿ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದರು. ಈ ಮೂಲಕ ಪಾಕಿಸ್ತಾನದಲ್ಲಿ ಮತ್ತೆ ಇಮ್ರಾನ್ ಖಾನ್ ಅರೆಸ್ಟ್ ಆಗೋದು ಪಕ್ಕಾ ಎನ್ನಲಾಗ್ತಿದೆ (Imran Khan Arrest). ಇದಕ್ಕೆ ಪುಷ್ಟಿ ನೀಡುವಂತೆ ಇಮ್ರಾನ್‌ರ ವಿರೋಧಿಗಳು ಒಂದಾಗುತ್ತಿದ್ದಾರೆ.
English summary
Pakistan former PM Nawaz Sharif got relief from 37 year old corruption case.
Story first published: Monday, June 26, 2023, 19:50 [IST]