3 ಸಾವಿರಕ್ಕಿಂತ ಹೆಚ್ಚಿನ ಶಾಲೆಗಲ್ಲಿ ವಿದ್ಯಾರ್ಥಿಗಳ ಕೊರತೆ: ಹಲವು ಶಾಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ಲ | Karnataka State Schools Struggle with Low Enrolment and Teacher Shortages: Minister

Karnataka

oi-Naveen Kumar N

|

Google Oneindia Kannada News

ಕರ್ನಾಟಕ ರಾಜ್ಯ ಸರ್ಕಾರಿ ಶಾಲೆಗಳ ಬಗ್ಗೆ ಮಹತ್ವದ ಅಂಕಿ ಅಂಶಗಳು ಬಹಿರಂಗವಾಗಿವೆ. 47 ಸಾವಿರಕ್ಕಿಂತ ಅಧಿಕ ಸರ್ಕಾರಿ ಶಾಲೆಗಳಲ್ಲಿ ಅದರಲ್ಲಿ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ, ಇನ್ನೂ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರ ಪ್ರಕಾರ, ರಾಜ್ಯದಲ್ಲಿ 3,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ, ಅದರಲ್ಲಿ ಹಲವು ಶಾಲೆಗಳಲ್ಲಿ ಸೊನ್ನೆ ದಾಖಲಾತಿ ಹೊಂದಿವೆ. ಶಿಕ್ಷಣ ಸಚಿವರ ಸ್ವಂತ ಕ್ಷೇತ್ರವಾದ ಸೊರಬದಲ್ಲಿ 52 ಶಾಲೆಗಳಲ್ಲಿ ಒಬ್ಬ ಶಿಕ್ಷಕರೂ ಇಲ್ಲ.

 Karnataka State Schools Struggle with Low Enrolment and Teacher Shortages: Minister

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, 3,646 ಶಾಲೆಗಳು 0 ಮತ್ತು 10 ವಿದ್ಯಾರ್ಥಿಗಳ ನಡುವೆ ಮತ್ತು 6,529 ಶಾಲೆಗಳು 100 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಲ್ಲಿ ಒಬ್ಬರೇ ಶಿಕ್ಷಕರು ಇದ್ದಾರೆ.

ಶಿಕ್ಷಣ ತಜ್ಞರು ಹೇಳುವ ಪ್ರಕಾರ, ‘ಶೂನ್ಯ ದಾಖಲಾತಿ’ ಅಥವಾ ‘ಶೂನ್ಯ ಶಿಕ್ಷಕರು’ ಎಂದರೆ ಶಾಲೆಗಳನ್ನು ಮುಚ್ಚಲಾಗುತ್ತದೆ ಅಥವಾ ಬೇರೆ ಶಾಲೆಗಳ ಜೊತೆ ವಿಲೀನ ಮಾಡಲಾಗುತ್ತದೆ. “ಶೂನ್ಯ ವಿದ್ಯಾರ್ಥಿಗಳಿರುವ ಶಾಲೆಗಳು ಅಥವಾ ಶೂನ್ಯ ಶಿಕ್ಷಕರು ಎಂದರೆ ಶಾಲೆಗಳು ಮುಚ್ಚುವ ಹಂತದಲ್ಲಿವೆ” ಎಂದು ಅಭಿವೃದ್ಧಿ ಶಿಕ್ಷಣತಜ್ಞ, ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ.

ಡಿಸಿಎಂ ತವರಿನಲ್ಲೇ ಶಿಕ್ಷಕರ ಕೊರತೆ

10 ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ಕುರಿತು ಇಲಾಖೆಯಿಂದ ವರದಿ ಕೇಳಿರುವುದಾಗಿ ಸಚಿವರು ಹೇಳಿದರು. ಇನ್ನೂ ವಿಶೇಷವೆಂದರೆ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿನಿಧಿಸುವ ಕನಕಪುರ ತಾಲೂಕಿನಲ್ಲಿಯೇ 72 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ.

“ದೂರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಎಂತಹ ಪರಿಸ್ಥಿತಿ ಇದೆ ಎಂದು ಊಹಿಸಬಹುದು. ಶಿಕ್ಷಕರಿಲ್ಲದಿದ್ದರೆ ಅದನ್ನು ಶಾಲೆ ಎಂದು ಹೇಗೆ ಕರೆಯುವುದು? ಇದು ಶಿಕ್ಷಣ ಹಕ್ಕು ಕಾಯಿದೆಯ ಸಂಪೂರ್ಣ ಉಲ್ಲಂಘನೆಯಾಗಿದೆ” ಎಂದು ನಿರಂಜನಾರಾಧ್ಯ ಡಿಹೆಚ್‌ಗೆ ಹೇಳಿರುವುದಾಗಿ ವರದಿ ಮಾಡಿದೆ.

“10 ರಿಂದ 20 ವರ್ಷಗಳ ಕಾಲ ಒಂದೇ ತಾಲೂಕಿನಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಆಯ್ಕೆಯಿಂದ ಹೊರಗುಳಿಯಲು ಸರ್ಕಾರ ಅನುಮತಿ ನೀಡಿರುವುದರಿಂದ, ಅವರಲ್ಲಿ ಹೆಚ್ಚಿನವರು ವರ್ಗಾವಣೆಯನ್ನು ತೆಗೆದುಕೊಂಡಿದ್ದಾರೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಹೊರಗೆ ಹೋಗುವವರನ್ನು ಬದಲಿಸಲು ಯಾವುದೇ ಹೊಸ ನೇಮಕಾತಿ ಮಾಡುತ್ತಿಲ್ಲ.

“ಈ ಪೋಸ್ಟ್‌ಗಳನ್ನು ಈಗ ನೇಮಕಾತಿ ಮೂಲಕ ಭರ್ತಿ ಮಾಡಬೇಕು ಅಥವಾ ನಾವು ಅತಿಥಿ ಶಿಕ್ಷಕರೊಂದಿಗೆ ನಿರ್ವಹಿಸಬೇಕಾಗುತ್ತದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಕನಕಪುರ ತಾಲೂಕಿನಲ್ಲಿರುವ ಶಾಲೆಗಳು ಅರಣ್ಯ ಗಡಿಯ ಸಮೀಪದಲ್ಲಿರುವುದರಿಂದ ಮತ್ತು ಸೊರಬದಲ್ಲಿ ಜಲಾನಯನ ಪ್ರದೇಶಗಳಲ್ಲಿರುವುದರಿಂದ ಮತ್ತು ಜಿಲ್ಲಾ ಕೇಂದ್ರದಿಂದ ದೂರದಲ್ಲಿರುವುದರಿಂದ ಕೆಲವು ಶಿಕ್ಷಕರು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ” ಎಂದು ಅಧಿಕಾರಿ ಹೇಳಿದರು.

ಕನಕಪುರದಲ್ಲಿ ಶಿಕ್ಷಕರನ್ನು ರಿಲೀವ್ ಮಾಡಲು ತಾಲೂಕು ಮಟ್ಟದ ಅಧಿಕಾರಿಗಳು ನಿರಾಕರಿಸಿದ್ದು, ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜಿಲ್ಲೆ/ತಾಲೂಕಿನಿಂದ ವರ್ಗಾವಣೆಗೊಂಡಿರುವ 177 ಶಿಕ್ಷಕರನ್ನು ರಿಲೀವ್ ಮಾಡಿದರೆ 72 ಶಾಲೆಗಳಲ್ಲಿ ಶಿಕ್ಷಕರೇ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನಕಪುರ ತಾಲೂಕಿನಲ್ಲಿಯೇ ಮಂಜೂರಾದ 1,100 ಹುದ್ದೆಗಳಲ್ಲಿ 700 ಶಿಕ್ಷಕರು ಕೆಲಸ ಮಾಡುತ್ತಿದ್ದು, ಈಗಾಗಲೇ 400 ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಈಗ 177 ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅಂಕಿಅಂಶಗಳು ಹೇಳಿವೆ.

ರಾಜ್ಯದಾದ್ಯಂತ, 6,529 ಕ್ಕೂ ಹೆಚ್ಚು ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರು ಇದ್ದಾರೆ. ಅದರಲ್ಲಿ ಹಾಸನ ಜಿಲ್ಲೆಯಲ್ಲಿ 386, ಶಿವಮೊಗ್ಗದಲ್ಲಿ 306, ಬೆಂಗಳೂರು ದಕ್ಷಿಣದಲ್ಲಿ 144 ಮತ್ತು ಗದಗದಲ್ಲಿ 30 ಶಾಲೆಗಳು ಇವೆ.

“ಶೂನ್ಯ ದಾಖಲಾತಿಗೆ ಎರಡು ಕಾರಣಗಳಿವೆ, ಒಂದು ಪೋಷಕರು ಖಾಸಗಿ ಶಾಲೆಗಳಿಗೆ ಬದಲಾಗುತ್ತಿದ್ದಾರೆ ಮತ್ತು ಇನ್ನೊಂದು ಕರ್ನಾಟಕದಲ್ಲಿ ಫಲವತ್ತತೆ ದರ ಕಡಿಮೆಯಾಗುತ್ತಿದೆ.” ಎಂದು ತಜ್ಞರು ಹೇಳಿದ್ದಾರೆ.

English summary

School Education and Literacy Minister Madhu Bangarappa reveals the state’s educational crisis: Over 3,000 government-run schools have less than 10 students, with some having zero enrolment.

Story first published: Friday, July 28, 2023, 9:30 [IST]

Source link