2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಬಿಎಸ್‌ಪಿ ಸಭೆ | BSP Mayawati Held Meeting About Prepaid To Lok Sabha Election 2024

India

oi-Shankrappa Parangi

|

Google Oneindia Kannada News

ಲಕ್ನೋ, ಜೂನ್ 21: ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮಾಯಾವತಿ ಅವರು ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ನಡೆಸುವಂತೆ ಸಂಬಂಧ ಎಲ್ಲಾ ವಿಭಾಗೀಯ ಮತ್ತು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದರು.

ಬುಧವಾರ ಬೆಳಗ್ಗೆ 10.30ಕ್ಕೆ ಲಕ್ನೋದ ಬಿಎಸ್‌ಪಿ ಪಕ್ಷದ ಕಚೇರಿಯಲ್ಲಿ ಸಭೆ ನಡೆದ ಮಾಯಾವತಿ ಅವರು, ಅಧಿಕಾರಿಗಳಿಗೆ 2024ರ ಚುನಾವಣೆಗೆ ಮುನ್ನ ಮುಂಬರುವ ಕಾರ್ಯತಂತ್ರದ ಕುರಿತು ಮಾರ್ಗಸೂಚಿಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

BSP Mayawati Held Meeting About Prepaid To Lok Sabha Election 2024

ಈ ನಡುವೆ ಬಹುಜನ ಸಮಾಜವಾದಿ ಪಕ್ಷದ ಮಿತ್ರ ಪಕ್ಷ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ಪ್ರತಿಕ್ರಿಯಿಸಿ ‘ಪಿಡಿಎ’ ಎಂಬುದು “ಪಿಚ್ರೆ” (ಹಿಂದುಳಿದ) ಮತ್ತು ದಲಿತರ ಶೋಷಣೆ ಮತ್ತು ದಬ್ಬಾಳಿಕೆಯ ವಿರುದ್ಧ ಹಂಚಿಕೆಯ ಪ್ರಜ್ಞೆ ಮತ್ತು ಭಾವನೆಯಿಂದ ಹುಟ್ಟಿದ ಏಕತೆಯ ಹೆಸರು ಎಂದು ತಿಳಿಸಿದ್ದಾರೆ.

ಪಿಡಿಎ ಮೂಲತಃ ‘ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರ’ ಶೋಷಣೆ, ದಬ್ಬಾಳಿಕೆ ವಿರುದ್ಧ ಸಾಮಾನ್ಯ ಭಾವನೆಯಿಂದ ಹುಟ್ಟಿದ ಹೆಸರಿನ ಬಗ್ಗೆ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿ ಅರ್ಥ ಒದಗಿಸಿದ್ದಾರೆ. ನಮ್ಮ ಹೋರಾಟದಲ್ಲಿ ಎಲ್ಲಾ ವರ್ಗದ ಜನರು ಅನ್ಯಾಯದ ವಿರುದ್ಧ ಮತ್ತು ಮಾನವೀಯತೆ ಜೊತೆ ನಿಲ್ಲುತ್ತಾರೆ ಎಂಬ ನಂಬಿಕೆ ನಮಗಿದೆ. ರಾಜಕಾರಣ ಬದಿಗೊತ್ತಿ ಜನರು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ: ಭವಿಷ್ಯ

ಇತ್ತೀಚೆಗಷ್ಟೇ ಲಕ್ನೋದಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿದ್ದ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ಭವಿಷ್ಯ ನುಡಿದಿದ್ದಾರೆ. 2024ರ ಚುನಾವಣೆಯಲ್ಲಿ ಕೇಂದ್ರ ಬಿಜೆಪಿಯನ್ನು ಸೋಲಿಸುವಲ್ಲಿ ಪಿಡಿಎ ಪಿಚ್ಲೆ, ದಲಿತ, ಅಲ್ಪಸಂಖ್ಯಾತರು ಯಶಸ್ವಿಯಾಗಲಿದ್ದಾರೆ. ಈ ಮೂಲಕ ಆಡಳಿತಾರೂಢ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದಿದ್ದರು.

BSP Mayawati Held Meeting About Prepaid To Lok Sabha Election 2024

ಇತ್ತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2024 ರ ಲೋಕಸಭೆ ಚುನಾವಣೆಗೆ ಮೊದಲೇ ಸಿದ್ಧತೆ ಆರಂಭಿಸಿದ್ದಾರೆ. ಬಿಜೆಪಿ ವಿರುದ್ಧ ಮಹಾಮೈತ್ರಿಕೂಟವನ್ನು ಒಂದೆಡೆ ಕಟ್ಟಿಹಾಕವು ಪ್ರಯತ್ನದಲ್ಲಿದ್ದಾರೆ. ಈ ಸಂಬಂಧ ಶುಕ್ರವಾರ ಪಾಟ್ನಾದಲ್ಲಿ ಉನ್ನತ ವಿರೋಧ ಪಕ್ಷದ ನಾಯಕರ ಸಭೆ ಆಹ್ವಾನಿಸಿದ್ದಾರೆ.

ಬಿಹಾಸ್ ಸಿಎಂ ನಿತೀಶ್ ಕುಮಾರ್ ಅವರು ಇತ್ತೀಚೆಷ್ಟೇ ಆಮ್ ಆದ್ಮಿ ಪಕ್ಷದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಲೋಕಸಭಾ ಚುನಾವಣೆ ಸಿದ್ಧತೆ, ಬಿಜೆಪಿ ವಿರುದ್ಧ ವಿಪಕ್ಷಗಳ ಸಂಘಟನೆ ಬಗ್ಗೆ ಜೂನ್ 23ರ ಪಾಟ್ನಾ ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

English summary

BSP chief Mayawati held meeting about prepaid to Lok Sabha Election 2024 At Lucknow,

Story first published: Wednesday, June 21, 2023, 23:21 [IST]

Source link