2023ರಲ್ಲಿ ಜಗತ್ತಿನ ‘ವಾಸಯೋಗ್ಯ ನಗರ’ ಯಾವುದು..? ಭಾರತದ ಯಾವ ನಗರಕ್ಕೆ ಎಷ್ಟನೇ ಸ್ಥಾನ? | Most liveable cities in the world 2023 and Indian cities

India

oi-Malathesha M

|

Google Oneindia Kannada News

ವಾಷಿಂಗ್ಟನ್: ಜನ ಜೀವನ ನಡೆಸಲು ನೀರು, ರಸ್ತೆ, ಆರೋಗ್ಯ ಸೇರಿ ಮೂಲ ಸೌಕರ್ಯ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು. ಜೊತೆಗೆ ಭದ್ರತೆ ಕೂಡ ಮುಖ್ಯ. ಹೀಗೆ ಈ ಜಗತ್ತಿನಲ್ಲಿ 2023ರಲ್ಲಿ ಅತ್ಯಂತ ‘ವಾಸಯೋಗ್ಯ ನಗರ’ ಯಾವುದು? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಪೈಕಿ ಭಾರತದ ಎಷ್ಟು ನಗರಗಳಿಗೆ ಸ್ಥಾನ ಸಿಕ್ಕಿದೆ ಹೇಳಿ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.

‘ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್’ ಅಂದ್ರೆ ‘ಇಐಯು’ ಸಂಸ್ಥೆ ಜಗತ್ತಿನ 173 ನಗರಗಳ ರ‍್ಯಾಂಕ್‌ ರಿಲೀಸ್ ಮಾಡಿದೆ. ಈ ಪೈಕಿ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ನಗರ ಈ ವಿಶ್ವದ ‘ಅತ್ಯಂತ ವಾಸಯೋಗ್ಯ ನಗರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 2023ರ ‘ವಾಸಯೋಗ್ಯ ನಗರ’ ಎಂಬ ಬಿರುದು ಪಡೆದಿದೆ. ತನ್ನ ವಿಶ್ವಾಸಾರ್ಹ ಮೂಲ ಸೌಕರ್ಯ ವ್ಯವಸ್ಥೆ ಜೊತೆಗೆ ಸಂಸ್ಕೃತಿ ಮತ್ತು ಮನರಂಜನೆ, ಅತ್ಯುತ್ತಮ ಶಿಕ್ಷಣ ಮತ್ತು ಅತ್ಯುತ್ತಮವಾದ ಆರೋಗ್ಯ ಸೇವೆಗೆ ಹೆಸರು ಪಡೆದಿದೆ ವಿಯೆನ್ನಾ. ಈ ಮೂಲಕ ಅತ್ಯಂತ ವಾಸಯೋಗ್ಯ ನಗರ ಎಂಬ ಕಿರೀಟ ತನ್ನದಾಗಿಸಿಕೊಂಡಿದೆ.

Most liveable cities in the world

ಹಾಗಾದರೆ ಟಾಪ್ 10 ವಾಸಯೋಗ್ಯ ನಗರಗಳು ಯಾವುವು?

1) ವಿಯೆನ್ನಾ, ಆಸ್ಟ್ರಿಯಾ

2) ಕೋಪನ್ ಹೇಗನ್, ಡೆನ್ಮಾರ್ಕ್

3) ಮೆಲ್ಬೋರ್ನ್, ಆಸ್ಟ್ರೇಲಿಯಾ

4) ಸಿಡ್ನಿ, ಆಸ್ಟ್ರೇಲಿಯಾ

5) ವ್ಯಾಂಕೋವರ್, ಕೆನಡಾ

6) ಜ್ಯೂರಿಚ್, ಸ್ವಿಜರ್ಲ್ಯಾಂಡ್

7) ಕ್ಯಾಲ್ಗರಿ, ಕೆನಡಾ

8) ಜಿನಿವಾ, ಸ್ವಿಜರ್ಲ್ಯಾಂಡ್

9) ಟೊರಾಂಟೊ, ಕೆನಡಾ

10) ಒಸಾಕಾ, ಜಪಾನ್

Most liveable cities in the world

ಭಾರತದ ರಾಜಧಾನಿ ದೆಹಲಿ, ಬೆಂಗಳೂರಿಗೆ…

ಜಗತ್ತಿನ ‘ಅತ್ಯಂತ ವಾಸಯೋಗ್ಯ ನಗರ’ಗಳ ಪೈಕಿ ಭಾರತದ ನಗರಗಳಿಗೆ ಬಹುತೇಕ ಕೊನೇ ಸ್ಥಾನವೇ ಸಿಕ್ಕಿದೆ. ಜಗತ್ತಿನ 173 ‘ಅತ್ಯಂತ ವಾಸಯೋಗ್ಯ ನಗರ’ಗಳ ಪಟ್ಟಿಯಲ್ಲಿ ಭಾರತದ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈ 141ನೇ ಸ್ಥಾನದಲ್ಲಿವೆ. ಇನ್ನುಳಿದಂತೆ ಚೆನ್ನೈ 144ನೇ ಸ್ಥಾನ ಪಡೆದರೆ, ಅಹ್ಮದಾಬಾದ್ 147ನೇ ಸ್ಥಾನ ಹಾಗೂ ಬೆಂಗಳೂರು 148ನೇ ಸ್ಥಾನ ಪಡೆದುಕೊಂಡಿವೆ. ಹಾಗಾದರೆ ‘ಅತ್ಯಂತ ವಾಸಯೋಗ್ಯ ನಗರ’ ಎಂದು ಗುರುತು ಹಿಡಿಯಲು ಯಾವೆಲ್ಲಾ ಅಂಶಗಳನ್ನ ಗಣನೆಗೆ ತೆಗೆದುಕೊಳ್ಳುತ್ತಾರೆ? ಯಾವೆಲ್ಲಾ ಆಧಾರದ ಮೇಲೆ ಈ ಪಟ್ಟಿಯನ್ನು ನಿರ್ಧಾರ ಮಾಡಲಾಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ಭಾರತದ ಟಾಪ್ 30 ಹೈ ಸ್ಟ್ರೀಟ್ ಸ್ಥಳಗಳಲ್ಲಿ ಬೆಂಗಳೂರಿನ ಎಂಜಿ ರಸ್ತೆಗೆ ಮೊದಲ ಸ್ಥಾನ ಭಾರತದ ಟಾಪ್ 30 ಹೈ ಸ್ಟ್ರೀಟ್ ಸ್ಥಳಗಳಲ್ಲಿ ಬೆಂಗಳೂರಿನ ಎಂಜಿ ರಸ್ತೆಗೆ ಮೊದಲ ಸ್ಥಾನ

ಕೆನಡಾ ದೇಶಕ್ಕೆ ಅತಿಹೆಚ್ಚು ಸ್ಥಾನ!

ಅಂದಹಾಗೆ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಸಂಸ್ಥೆ 173 ನಗರಗಳ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಈ ವರದಿ ಆರೋಗ್ಯ ರಕ್ಷಣೆ, ಶಿಕ್ಷಣ, ಸ್ಥಿರತೆ, ಮೂಲಸೌಕರ್ಯ ಮತ್ತು ಪರಿಸರ ಸೇರಿದಂತೆ ಹಲವಾರು ಮಹತ್ವದ ಅಂಶ ಆಧರಿಸಿದೆ. ಆಸ್ಟ್ರೇಲಿಯಾದ 2 ನಗರಗಳಾದ ಮೆಲ್ಬೋರ್ನ್ ಮತ್ತು ಸಿಡ್ನಿ 3 ಮತ್ತು 4ನೇ ಸ್ಥಾನ ಪಡೆದಿವೆ. ಹಾಗೇ ಇನ್ನೊಂದ್ಕಡೆ ಕೆನಡಾದ 3 ನಗರ ಅಂದರೆ ವ್ಯಾಂಕೋವರ್, ಕ್ಯಾಲ್ಗರಿ ಸೇರದಂತೆ ಟೊರೊಂಟೊ ಕ್ರಮವಾಗಿ 5ನೇ, 7ನೇ ಮತ್ತು 9ನೇ ಸ್ಥಾನ ಪಡೆದಿವೆ. ಹಾಗೇ ಸ್ವಿಜರ್ಲ್ಯಾಂಡ್ ದೇಶದ 2 ನಗರಗಳು ಕೂಡ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಯುರೋಪ್‌ನಲ್ಲಿ ಕೊರೊನಾ ಕಾರಣಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಆದರೆ ಇದೀಗ ಡೆಡ್ಲಿ ಕೊರೊನಾ ಆರ್ಭಟ ಕಡಿಮೆ ಆದ ನಂತರ ನಿಧಾನವಾಗಿ ಯುರೋಪ್ ಸುಧಾರಿಸಿಕೊಳ್ತಿದೆ. ಅದೇ ರೀತಿ ಭಾರತೀಯರೇ ಹೆಚ್ಚಾಗಿರುವ ಕೆನಡಾ ಕೂಡ ಇದೀಗ ಜಗತ್ತಿನ ಅತ್ಯುತ್ತಮವಾದ ದೇಶ ಎಂಬ ಹೆಗ್ಗಳಿಕೆ ಪಡೆಯುತ್ತಿದೆ. ಕೆನಡಾದ ಕೆಲವೇ ಪ್ರದೇಶದಲ್ಲಿ ಮನುಷ್ಯರು ವಾಸ ಮಾಡಲು ಸಾಧ್ಯ. ಏಕೆಂದರೆ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರ ಇರುವ ಕೆನಡಾ ದೇಶದಲ್ಲಿ ಸಾಕಷ್ಟು ಚಳಿ ಇರುತ್ತದೆ. ಹೀಗಾಗಿ ಕೆನಡಾದ ದಕ್ಷಿಣ ಭಾಗದಲ್ಲೇ ಪ್ರಮುಖ ನಗರಗಳು ಇವೆ. ಆದರೂ ವಿಶ್ವದ ವಾಸಯೋಗ್ಯ ನಗರಗಳ ಪೈಕಿ ಕೆನಡಾದ 3 ನಗರಗಳು ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಶೇಷ.

English summary

Most liveable cities in the world 2023 and Indian cities.

Story first published: Friday, June 23, 2023, 13:44 [IST]

Source link