2 ಕೋಟಿ ರೂಪಾಯಿ ಕೊಟ್ಟು ಟೈಟಾನಿಕ್ ಹಡಗು ಅವಶೇಷ ನೋಡಲು ಹೋದ ಐವರ ದುರಂತ ಅಂತ್ಯ | US Coast Guard Confirms Tragic Death of All Five People Aboard Titanic Submersible

International

oi-Naveen Kumar N

|

Google Oneindia Kannada News

ಅಟ್ಲಾಂಟಿಕ್ ಸಮುದ್ರದಲ್ಲಿ 12,600 ಅಡಿ ಆಳದಲ್ಲಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋದ ಐವರು ಕೋಟ್ಯಧಿಪತಿಗಳು ದುರಂತ ಅಂತ್ಯ ಕಂಡಿದ್ದಾರೆ. ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ನಿರ್ವಹಿಸುವ ಟೈಟಾನ್ ಸಬ್‌ಮರ್ಸಿಬಲ್ ಅಟ್ಲಾಂಟಿಕ್ ಸಾಗರದಲ್ಲಿ ಸ್ಫೋಟಗೊಂಡಿದ್ದು, ಎಲ್ಲಾ ಐವರು ಮೃತಪಟ್ಟಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್ ತಿಳಿಸಿರುವುದಾಗಿ ವರದಿಯಾಗಿದೆ.

ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಸಂಸ್ಥೆ ಅಟ್ಲಾಂಟಿಕ್ ಸಾಗರದ ತಳದಲ್ಲಿ ಮುಳುಗಿರುವ ಟೈಟಾನಿಕ್ ಹಡಗು ನೋಡಲು ಪ್ರಯಾಣವನ್ನು ಆಯೋಜಿಸುತ್ತದೆ. ಟೈಟಾನ್ ಸಬ್‌ಮರ್ಸಿಬಲ್ ಪ್ರಯಾಣಿಕರನ್ನು ಹೊತ್ತು ಸಮುದ್ರಕ್ಕೆ ಆಳಕ್ಕೆ ತೆರಳಿ, ಟೈಟಾನಿಕ್ ಹಡಗಿನ ಅವಶೇಷಗಳನ್ನು ತೋರಿಸಿ ವಾಪಸ್ ಕರೆತರುತ್ತದೆ. ಆದರೆ ಈ ಬಾರಿ ಹೋದವರು ದುರಂತ ಅಂತ್ಯ ಕಂಡಿದ್ದಾರೆ.

Titanic Submersible tragedy

ಜೂನ್ 18 ರಂದು, ಸಬ್‌ಮರ್ಸಿಬಲ್ ನ್ಯೂಫೌಂಡ್‌ಲ್ಯಾಂಡ್‌ನ ಕರಾವಳಿಯಲ್ಲಿ ಮುಳುಗಿದ ಟೈಟಾನಿಕ್ ಅವಶೇಷಗಳನ್ನು ಅನ್ವೇಷಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಜಲಾಂತರ್ಗಾಮಿಯಲ್ಲಿ ಹೆಸರಾಂತ ಟೈಟಾನಿಕ್ ತಜ್ಞ, ವಿಶ್ವ ದಾಖಲೆ ಹೊಂದಿರುವ ಸಾಹಸಿ, ಪಾಕಿಸ್ತಾನದ ಶ್ರೀಮಂತ ಕುಟುಂಬದ ಇಬ್ಬರು ಸದಸ್ಯರು ಮತ್ತು ಕಂಪನಿಯ ಸಿಇಒ, ಈ ಐಷಾರಾಮಿ ಪ್ರಯಾಣದ ಭಾಗವಾಗಿದ್ದರು.

ಯುಎಸ್ ಕೋಸ್ಟ್ ಗಾರ್ಡ್ ಮತ್ತು ಕೆನಡಾ, ಯುಕೆ ಮತ್ತು ಫ್ರಾನ್ಸ್‌ನ ಆಳವಾದ ಸಮುದ್ರದ ನೀರಿನ ತಜ್ಞರು ಜಂಟಿಯಾಗಿ ಟೈಟಾನ್ ಸಬ್‌ಮರ್ಸಿಬಲ್‌ಗಾಗಿ ಭಾನುವಾರ ಜೂನ್ 18 ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಆದರೂ ಐವರು ಪ್ರಯಾಣಿಕರನ್ನು ಉಳಿಸಲು ಸಾಧ್ಯವಾಗಿಲ್ಲ. ಉತ್ತರ ಅಟ್ಲಾಂಟಿಕ್‌ನಲ್ಲಿ ಸಮುದ್ರದ ಆಳದಲ್ಲಿ ಜಲಾಂತರ್ಗಾಮಿ ಸ್ಫೋಟಗೊಂಡಿದ್ದು ಯಾರೊಬ್ಬರೂ ಬದುಕುಳಿದಿಲ್ಲ ಎಂದು ಯುಎಸ್ ಕೋಸ್ಟ್‌ ಗಾರ್ಡ್ ಹೇಳಿದ್ದಾರೆ.

ಟೈಟಾನಿಕ್ ಹಡಗಿನ ಅವಶೇಷದ ಒಳಗೆ ದೆವ್ವಗಳ ಕಾಟ? ಹಡಗು ನೋಡಲು ಹೋದವರು ಸತ್ತೇ ಹೋದರಾ?ಟೈಟಾನಿಕ್ ಹಡಗಿನ ಅವಶೇಷದ ಒಳಗೆ ದೆವ್ವಗಳ ಕಾಟ? ಹಡಗು ನೋಡಲು ಹೋದವರು ಸತ್ತೇ ಹೋದರಾ?

ಮೃತಪಟ್ಟ ಐವರು ಶ್ರೀಮಂತರ ವಿವರ

ಇನ್ನು ಈ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡುವುದಕ್ಕೆ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ. ಜಗತ್ತಿನ ಶ್ರೀಮಂತರಷ್ಟೆ ಇದನ್ನು ನೋಡಲು ಸಾಧ್ಯ, ಏಕೆಂದರೆ ಒಮ್ಮೆ ನೀವು ಕಡಲಿನ ಆಳಕ್ಕೆ ಹೋಗಿ ಟೈಟಾನಿಕ್ ಅವಶೇಷ ನೋಡಿ ಬರಲು ಕೋಟ್ಯಂತರ ಹಣ ಖರ್ಚು ಮಾಡಬೇಕಾಗುತ್ತದೆ. ಹೌದು ಒಂದು ಟಿಕೆಟ್ ಬೆಲೆ 2.5 ಲಕ್ಷ ಅಮೆರಿಕನ್ ಡಾಲರ್, ಅಂದರೆ ಬರೊಬ್ಬರಿ 2 ಕೋಟಿ ರುಪಾಯಿ.

ಇನ್ನು ಸ್ಫೋಟಗೊಂಡಿರುವ ನೌಕೆಯಲ್ಲಿ ಪಾಕಿಸ್ತಾನದ ರಾಜಮನೆತನದ ಶ್ರೀಮಂತ ಉದ್ಯಮಿ ಮತ್ತು ಅವರ ಮಗ ಕೂಡ ಇದ್ದರು. ಎಲ್ಲ ಐವರ ವಿವರ ಹೀಗಿದೆ.

1) ಸ್ಟಾಕ್ಟನ್ ರಶ್ : ಸ್ಟಾಕ್‌ಟನ್ ರಶ್ ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್‌ನ ಮುಖ್ಯ ಕಾರ್ಯನಿರ್ವಾಹಕರಾಗಿದ್ದರು, ಇದು ವಾಷಿಂಗ್ಟನ್ ರಾಜ್ಯದ ಮೂಲದ ಕಂಪನಿಯಾಗಿದ್ದು, ಇದು ಪ್ರವಾಸಿ ಡೈವ್‌ಗಳನ್ನು ನಿರ್ವಹಿಸುತ್ತದೆ ಮತ್ತು 2009 ರಲ್ಲಿ ಸ್ಥಾಪಿಸಲಾಯಿತು.

2) ಪಾಲ್-ಹೆನ್ರಿ ನರ್ಜಿಯೊಲೆಟ್: “ಮಿಸ್ಟರ್ ಟೈಟಾನಿಕ್” ಎಂಬ ಅಡ್ಡಹೆಸರು, ಫ್ರೆಂಚ್ ಜಲಾಂತರ್ಗಾಮಿ ಆಪರೇಟರ್ ಪಾಲ್-ಹೆನ್ರಿ ನಾರ್ಜಿಯೊಲೆಟ್ ಹಡಗಿನ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು. 25 ವರ್ಷಗಳ ಕಾಲ ಫ್ರೆಂಚ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು.

3) ಹಮಿಶ್ ಹಾರ್ಡಿಂಗ್: 58 ವರ್ಷದ ಹಮಿಶ್ ಹಾರ್ಡಿಂಗ್, ಮೂರು ಗಿನ್ನೆಸ್ ವಿಶ್ವ ದಾಖಲೆಗಳೊಂದಿಗೆ ಬ್ರಿಟಿಷ್ ವಾಯುಯಾನ ಉದ್ಯಮಿಯಾಗಿದ್ದರು ಮತ್ತು ರೋಮಾಂಚಕ ಸಾಹಸಗಳ ಇತಿಹಾಸವನ್ನು ಹೊಂದಿದ್ದರು. ಒಂದು ವರ್ಷದ ಹಿಂದೆ, ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ ಕಂಪನಿಯ ಮೂಲಕ ಬಾಹ್ಯಾಕಾಶ ಪ್ರವಾಸ ಮಾಡಿದ್ದರು.

4&5) ಶಹಜಾದಾ ಮತ್ತು ಸುಲೇಮಾನ್ ದಾವೂದ್: ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದಾ ದಾವೂದ್, 48, ಕರಾಚಿಯ ಪ್ರಧಾನ ಕಚೇರಿಯ ಸಂಘಟಿತ ಎಂಗ್ರೋದ ಉಪಾಧ್ಯಕ್ಷರಾಗಿದ್ದರು. ಅವರ ಮಗ ಸುಲೇಮಾನ್, 19, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು ಮತ್ತು ಇಬ್ಬರೂ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದರು.

English summary

According to a recent CNN report, US Coast Guard Rear Adm. John Mauger confirmed that the submersible exploring the Titanic wreck, which had previously gone missing with five people on board, has now been declared to have experienced a catastrophic implosion resulting in the loss of all lives.

Source link