16 ತಿಂಗಳ ಹಸುಗೂಸನ್ನು ಒಂಟಿಯಾಗಿ ಬಿಟ್ಟು 10 ದಿನ ಪ್ರವಾಸ ತೆರಳಿದ ತಾಯಿ, ಹಸಿವಿನಿಂದ ಮಗು ಸಾವು | A mother charged with murder after leaving her baby home alone for 10 days to go on vacation

International

oi-Mamatha M

|

Google Oneindia Kannada News

ಕ್ಲೀವ್‌ಲ್ಯಾಂಡ್‌, ಜೂನ್. 27: ಜಗತ್ತಿನಲ್ಲಿ ಕೆಟ್ಟ ಮಕ್ಕಳಿದ್ದರೂ ಕೆಟ್ಟ ತಾಯಿ ಇರುವುದಿಲ್ಲ ಎಂಬ ಮಾತಿದೆ. ಇದಕ್ಕೆ ಕೋಟ್ಯಾಂತರ ತಾಯಂದಿರು ಜೀವಂತ ಸಾಕ್ಷಿಯಾಗಿದ್ದಾರೆ. ಆದರೆ, ಇಲ್ಲೊಂದು ಘಟನೆಯಲ್ಲಿ ಹೆತ್ತ ತಾಯಿಯೇ ತನ್ನ ಹಸುಗೂಸಿನ ಸಾವಿಗೆ ಕಾರಣರಾಗಿದ್ದಾರೆ. ತಾನು ಪ್ರವಾಸ ಮಾಡಬೇಕು ಎನ್ನುವ ಕಾರಣದಿಂದ ಮಗುವನ್ನು ಸಾವಿನ ದವಡೆಗೆ ನೂಕಿದ್ದಾರೆ.

ಕ್ಲೀವ್‌ಲ್ಯಾಂಡ್‌ನ ಓಹಿಯೋ ನಗರದ ತಾಯಿಯೊಬ್ಬರು ತನ್ನ 16 ತಿಂಗಳ ಮಗು ಮಗಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು 10 ದಿನಗಳ ಕಾಲ ರಜೆಯ ಮೇಲೆ ಪ್ರವಾಸಕ್ಕೆ ತೆರಳಿದ್ದಾರೆ. ಮನೆಯಲ್ಲಿ ಒಬ್ಬಂಟಿಯಾಗಿ ಮಗುವನ್ನು ಬಿಟ್ಟು ಹೋಗಿದ್ದರಿಂದ ಹಸಿವು, ಬಾಯಾರಿಕೆಯಿಂದ ಮಗು ಸಾವನ್ನಪ್ಪಿದೆ. ಹೀಗಾಗಿ ತಾಯಿಯ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.

A mother charged with murder after leaving her baby home alone for 10 days to go on vacation

ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ಎಂಬ 31 ವರ್ಷ ಮಹಿಳೆ ತನ್ನ 16 ತಿಂಗಳ ಹೆಣ್ಣು ಮಗು ಜೈಲಿನ್ ಅವರನ್ನು ಕ್ಲೀವ್‌ಲ್ಯಾಂಡ್ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗಿರುವ ಕಾರಣ ಅವರ ಮೇಲೆ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯುಯಾಹೋಗಾ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿಯ ಪ್ರಕಾರ, “ಮಗುವಿನ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ. ಮಗುವನ್ನು ಸುಮಾರು 10 ದಿನಗಳ ಕಾಲ ಏಕಾಂಗಿಯಾಗಿ ಬಿಡಲಾಗಿತ್ತು ಮತ್ತು ನಂತರ ಅದು ಸಾವನ್ನಪ್ಪಿದೆ” ಎಂದು ಹೇಳಿದ್ದಾರೆ.

ಚಿಂತಾಮಣಿ: ಪತ್ನಿಯೊಂದಿಗೆ ಸಂಬಂಧ ಆರೋಪದಲ್ಲಿ ಸ್ನೇಹಿತನ ಕತ್ತು ಸೀಳಿ, ರಕ್ತ ಕುಡಿದ ಪತಿಯ ಬಂಧನಚಿಂತಾಮಣಿ: ಪತ್ನಿಯೊಂದಿಗೆ ಸಂಬಂಧ ಆರೋಪದಲ್ಲಿ ಸ್ನೇಹಿತನ ಕತ್ತು ಸೀಳಿ, ರಕ್ತ ಕುಡಿದ ಪತಿಯ ಬಂಧನ

ಡಿಟೆಕ್ಟಿವ್ ಥೆಲೆಮನ್ ಪೊವೆಲ್ ಜೂನಿಯರ್ ಅಫಿಡವಿಟ್‌ನಲ್ಲಿ ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ಅವರು ತಮ್ಮ ಮಗಳನ್ನು ಮನೆಯಲ್ಲಿ ಏಕಾಂಗಿಯಾಗಿ ಮತ್ತು ಗಮನಿಸದೆ ಬಿಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ತನಿಖಾಧಿಕಾರಿಗಳು ಮತ್ತು ಅಕ್ಕ ಪಕ್ಕಷ ಶಂಕಿತರು ಅವರು ಮನೆಗೆ ಬಂದಾಗ ಅವರು ಹಸುಗೂಸು “ಅತ್ಯಂತ ನಿರ್ಜಲೀಕರಣಗೊಂಡಿದ್ದಾರೆ” ಎಂದು ಹೇಳಿದ್ದಾರೆ

ಮಗುವಿನ ಹಾಸಿಗೆಗಳು ಕೋಳಕಾಗಿದ್ದವು. ಹೊದಿಕೆಗಳು ಮೂತ್ರ ಮತ್ತು ಮಲದಿಂದ ತುಂಬಿದ್ದವು. ಮಗು ಊಟ, ನೀರಿಲ್ಲದೆ ಅತ್ತೂ ಅತ್ತೂ ಸಾವನ್ನಪ್ಪಿದೆ ಎಂದು ಡಿಟೆಕ್ಟಿವ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಆರೋಪಿ ತಾಯಿ ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ಅವರನ್ನು 1 ಮಿಲಿಯನ್ ಡಾಲರ್ ಬಾಂಡ್‌ನಲ್ಲಿ ಕ್ಯುಯಾಹೋಗಾ ಕೌಂಟಿ ಜೈಲಿನಲ್ಲಿ ಇರಿಸಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸಿವೆ.

ಆರೋಪಿ ನವೆಂಬರ್ 2022 ರಿಂದ ಕ್ಲೀವ್‌ಲ್ಯಾಂಡ್‌ನ ಪ್ರಾಥಮಿಕ ಶಾಲೆಯಾದ ಸಿಟಿಜನ್ಸ್ ಅಕಾಡೆಮಿ ಗ್ಲೆನ್‌ವಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಸದ್ಯ ಆಕೆಯನ್ನು ಶಾಲೆಯಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ.

ಆಕೆ ಪ್ರವಾಸಕ್ಕೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಕೊಂಡಿದ್ದೇವು. ಆಕೆ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆಂದು ನಮಗೆ ನಂಬಲಾಗಲಿಲ್ಲ. ಆ ಮಗು ಯಾವಾಗಲೂ ನಗುತ್ತಿರುವ,ಕುತೂಹಲದಿಂದ ಕೂಡಿದ್ದ ಅದ್ಭುತ ಮಗು ಎಂದು ನೆರೆ ಹೊರೆಯವರು ಹೇಳಿದ್ದಾರೆ. ಇನ್ನೊಬ್ಬರು ಮಗುವನ್ನು ಆಕೆ ಒಬ್ಬಂಟಿಯಾಗಿ ಬಿಟ್ಟಿರುವುದು ಇದೇ ಮೊದಲಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

English summary

A Cleveland mother charged with murder after leaving her baby home alone for 10 days to go on vacation. know more.

Story first published: Tuesday, June 27, 2023, 14:19 [IST]

Source link