1000 ಉದ್ಯೋಗಿಗಳನ್ನು ವಜಾ ಮಾಡಿದ ಬೈಜೂಸ್ | BYJU’s Lays off 1,000 Employees Amid Restructuring; Faces Legal Battle with US Lenders

Business

oi-Naveen Kumar N

|

Google Oneindia Kannada News

ಆನ್‌ಲೈನ್ ಶಿಕ್ಷಣ ಕ್ಷೇತ್ರದ ದೈತ್ಯ ಬೈಜೂಸ್ 1000 ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ. ಕಂಪನಿಯ ಪುನರಚನೆಯ ಭಾಗವಾಗಿ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ಹೇಳಿದೆ.

ಅಮೆರಿಕದಲ್ಲಿ ಒಂದು ಶತಕಕೋಟಿ ಡಾಲರ್ ಸಾಲದ ವಿಚಾರವಾಗಿ ಸಾಲದಾತರ ಜೊತೆ ಕಾನೂನು ಹೋರಾಟಕ್ಕೆ ಇಳಿದ ಬೆನ್ನಲ್ಲೇ ಈ ಹೊಸ ಬೆಳವಣಿಗೆ ನಡೆದಿದೆ. 1000 ಉದ್ಯೋಗಿಗಳನ್ನು ವಜಾ ಮಾಡಿದ್ದರೂ, ಸದ್ಯ ಕಂಪನಿ ಇನ್ನೂ 50 ಸಾವಿರ ಉದ್ಯೋಗಿಗಳನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.

BYJUs Lays off 1,000 Employees

ಒಂದು ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದರೂ, ಮತ್ತೆ ಹೊಸ ಉದ್ಯೋಗಿಗಳ ನೇಮಕಾತಿ ಮಾಡಿಕೊಳ್ಳುವ ಸದ್ಯ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ 50 ಸಾವಿರ ಇದೆ ಎಂದು ಪಿಟಿಐ ವರದಿ ಮಾಡಿದೆ.

ಮಾರ್ಚ್ 2023ರ ವೇಳೆಗೆ ಕಂಪನಿ ಲಾಭವನ್ನು ಕಾಣಲು ಯೋಜನೆಗಳನ್ನು ಹಾಕಿಕೊಂಡಿತ್ತು. 2022ರ ಅಕ್ಟೋಬರ್ ತಿಂಗಳಿನಿಂದ ಆರು ತಿಂಗಳವರೆಗೆ ಒಟ್ಟು ಉದ್ಯೋಗಿಗಳಲ್ಲಿ ಶೇಕಡಾ 5ರಷ್ಟು ಅಂದರೆ 2500 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಘೋಷಿಸಿತ್ತು. ಇತ್ತೀಚಿಗೆ ಉದ್ಯೋಗಿಗಳನ್ನು ವಜಾ ಮಾಡುವುದು ಕೂಡ ಕಂಪನಿಯ ಪುನರ್‍ರಚನೆಯ ಭಾಗವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ಹೇಳಿದೆ.

ಈ ಬಗ್ಗೆ ಖಚಿತಪಡಿಸಿಕೊಳ್ಳಲು ಬೈಜೂಸ್‌ ಸಂಸ್ಥೆಯನ್ನು ಇಮೇಲ್ ಮೂಲಕ ಪ್ರಶ್ನೆ ಮಾಡಿದ್ದರೂ, ಯಾವುದೇ ಉತ್ತರ ಬಂದಿಲ್ಲ ಎಂದು ವರದಿ ಮಾಡಿದೆ.

BYJUs Lays off 1,000 Employees

10 ಸಾವಿರ ಕೋಟಿ ಸಾಲ, 330 ಕೋಟಿ ರುಪಾಯಿ ಬಡ್ಡಿ

ಬೈಜೂಸ್ ತೀವ್ರ ಹಣಕಾಸಿನ ಕೊರತೆ ಎದುರಿಸುತ್ತಿದ್ದು 10 ಸಾವಿರ ಕೋಟಿ ರುಪಾಯಿ ಸಾಲದ ಸುಳಿಯಲ್ಲಿ ಸಿಲುಕಿದೆ. ಮೂರು ತಿಂಗಳಿಗೊಮ್ಮೆ 330 ಕೋಟಿ ರುಪಾಯಿ ಬಡ್ಡಿ ಕಟ್ಟಬೇಕಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರಿ ಜನಪ್ರಿಯವಾಗಿದ್ದ ಬೈಜೂಸ್ ನಂತರ ಜನಪ್ರಿಯತೆ ಕಳೆದುಕೊಂಡಿದೆ. ಆನ್‌ಲೈನ್ ಬೋಧನೆ ಕೂಡ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ದೀರ್ಘಾವಧಿ ಸಾಲ ಮರುಪಾವತಿ ಪ್ರಸ್ತಾಪವನ್ನು ಸಾಲದಾತರು ತಳ್ಳಿಹಾಕಿದ್ದು ಶೀಘ್ರದಲ್ಲೇ ಮರುಪಾವತಿ ಮಾಡಲು ಒತ್ತಾಯಿಸಿವೆ ಇದು ಕಂಪನಿಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಕಾನೂನು ಹೋರಾಟಕ್ಕೆ ಮುಂದಾಗಿದೆ.

2011ರಲ್ಲಿ ಬೆಂಗಳೂರಿನಲ್ಲಿ ಶುರುವಾದ ಬೈಜೂಸ್ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. ಒಂದು ಕಾಲದಲ್ಲಿ 22 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿತ್ತು. ಜನರಲ್ ಅಟ್ಲಾಂಟಿಕ್, ಬ್ಲ್ಯಾಕ್‌ರಾಕ್ ಮತ್ತು ಸಿಕ್ವೊಯಾ ಕ್ಯಾಪಿಟಲ್‌ನಂತಹ ಜಾಗತಿಕ ಹೂಡಿಕೆದಾರರು ಇದರಲ್ಲಿ ಹಣ ಹೂಡಿದ್ದಾರೆ.

English summary

BYJU’s, the edtech major, has laid off around 1,000 employees as part of its restructuring efforts. The company is also facing a legal battle with US lenders over a USD 1 billion term loan B.

Story first published: Tuesday, June 20, 2023, 9:35 [IST]

Source link