India
oi-Naveen Kumar N
ಚೆನ್ನೈ, ಜುಲೈ 3: ಬಡವರ ಹೆಸರಿನಲ್ಲಿ ನಕಲಿ ಕಂಪನಿಗಳನ್ನು ಸೃಷ್ಟಿಸಿ ಮತ್ತು ನಕಲಿ ಇನ್‌ವಾಯ್ಸ್‌ಗಳನ್ನು ಸಂಗ್ರಹಿಸುವ ಮೂಲಕ ಸರ್ಕಾರಕ್ಕೆ 176 ಕೋಟಿ ರೂಪಾಯಿ ನಷ್ಟ ಉಂಟು ಮಾಡಿ, ದೇಶವನ್ನು ತೊರಯಲು ಯತ್ನಿಸುತ್ತಿದ್ದ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ದಂಧೆಯ ಮಾಸ್ಟರ್‌ಮೈಂಡ್ 34 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಗುಪ್ತಚರ ಘಟಕದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿ ಮತ್ತು ಆತನ ಸಹಚರರು ಬಡವರಿಗೆ ಬ್ಯಾಂಕ್ ಸಾಲ ನೀಡುವ ಭರವಸೆ ನೀಡಿ ಅವರ ಆಧಾರ್ ಮತ್ತು ಪ್ಯಾನ್ ವಿವರಗಳನ್ನು ಪಡೆದುಕೊಂಡರು ಮತ್ತು ನಂತರ ಅವರ ಹೆಸರಿನಲ್ಲಿ ಅನೇಕ ಕಾಲ್ಪನಿಕ ಕಂಪನಿಗಳನ್ನು ತೆರೆದಿರುವ ಬಗ್ಗೆ ದಾಖಲೆಗಳನ್ನು ಸೃಷ್ಟಿಸಿದ್ದರು.
“ಹಲವು ಕಂಪನಿಗಳು ಈ ಆಪಾದಿತ ಮಾಸ್ಟರ್‌ಮೈಂಡ್ ಅನ್ನು ಬಳಸಿಕೊಂಡಿವೆ, ಅವರು ಕಾಲ್ಪನಿಕ ಕಂಪನಿಗಳನ್ನು ರಚಿಸಿದ್ದಾರೆ ಮತ್ತು 973.64 ಕೋಟಿ ರೂಪಾಯಿ ತೆರಿಗೆಯ ಮೌಲ್ಯಕ್ಕೆ 175.88 ಕೋಟಿ ರೂಪಾಯಿಗಳಷ್ಟು ಇನ್‌ವಾಯ್ಸ್‌ಗಳನ್ನು ಸಂಗ್ರಹಿಸಿದ್ದಾರೆ” ಎಂದು ಚೆನ್ನೈನ ಜಿಎಸ್‌ಟಿ ಗುಪ್ತಚರ ಘಟಕದ ಅಧಿಕಾರಿಯೊಬ್ಬರು ಎನ್‌ಡಿಟಿವಿ ತಿಳಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ
ಜೂನ್ 22 ರಂದು ವ್ಯಕ್ತಿಯ ಸಹಚರನನ್ನು ಬಂಧಿಸಲಾಗಿತ್ತು ಮತ್ತು ಆತನ ವಿಚಾರಣೆಯ ಸಮಯದಲ್ಲಿ ನೀಡಿದ ಮಾಹಿತಿಯ ಆಧಾರದ ಮೇಲೆ, ಮರುದಿನ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಮುಖ ಆರೋಪಿ, ಮಾಸ್ಟರ್ ಮೈಂಡ್ ದೇಶದಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಯಿತು.
ವಂಚಕರು ಬಹಳ ಜಾಗರೂಕರಾಗಿದ್ದರು ಮತ್ತು ವಂಚನೆ ಮಾಡಲು ರಿಮೋಟ್ ಆಕ್ಸೆಸ್ ಸಾಫ್ಟ್‌ವೇರ್, ವಿದೇಶಿ ಸಿಮ್ ಕಾರ್ಡ್‌ಗಳು ಮತ್ತು ವಿಶೇಷ ಫೋನ್‌ಗಳನ್ನು ಬಳಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಕೂಡ, ಗುಪ್ತಚರ ಘಟಕ, ಐಪಿ ವಿಳಾಸ ಟ್ರ್ಯಾಕಿಂಗ್, ರಹಸ್ಯ ವ್ಯಾಟ್ಸಾಪ್ ಚಾಟ್‌ಗಳ ವಿಶ್ಲೇಷಣೆ ಮತ್ತು ಅವುಗಳನ್ನು ಹಿಡಿಯಲು ಅನೇಕ ಸ್ಥಳಗಳಲ್ಲಿ ಏಕಕಾಲದಲ್ಲಿ ಹುಡುಕಾಟ ನಡೆಸಿ ಈ ಪ್ರಕರಣವನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ.
ಸದ್ಯ 25 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ, 20 ಜಿಎಸ್‌ಟಿ ನೋಂದಣಿಗಳನ್ನು ರದ್ದುಪಡಿಸಲಾಗಿದೆ ಮತ್ತು ಮೊಬೈಲ್ ಫೋನ್‌ಗಳು, ಮೋಡೆಮ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಗುಪ್ತಚರ ಇಲಾಖೆ ತಿಳಿಸಿದೆ.
English summary
Alleged mastermind of ₹176 crore fake tax credit racket arrested while attempting to flee, involved exploitation of identities of poor individuals for fictitious companies.
Story first published: Monday, July 3, 2023, 19:01 [IST]