ಹೊಸಪೇಟೆ: ಭೀಕರ ಅಪಘಾತ ಪ್ರಕರಣ, ಮೃತರ ಕುಟುಂಬಸ್ಥರಿಗೆ ಸಿಎಂ ಪರಿಹಾರ ನಿಧಿಯಿಂದ 2 ಲಕ್ಷ ರೂ. ಘೋಷಣೆ | Hosapete: Accident case, ₹2 lakh rupees compensation announced for family of deceased

Ballari

lekhaka-Muruli Kanth Rao

By ಬಳ್ಳಾರಿ ಪ್ರತಿನಿಧಿ

|

Google Oneindia Kannada News

ಬಳ್ಳಾರಿ ಜೂನ್‌, 30: ಬಳ್ಳಾರಿ ನಗರದಿಂದ ಹೊಸಪೇಟೆ ಬಳಿಯಿರುವ ತುಂಗಭದ್ರಾ ಜಲಾಶಯ ನೋಡಲು ಆಗಮಿಸಿದ್ದ ಪ್ರವಾಸಿಗರ ಆಟೋಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ 7 ಜನ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಮೃತ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳ ಚಿಕಿತ್ಸೆಗೆ ತಲಾ 50 ಸಾವಿರ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ‌.ನಾಗೇಂದ್ರ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಸಚಿವ ಬಿ‌.ನಾಗೇಂದ್ರ ಸಿಎಂ ಸಿದ್ದರಾಮಯ್ಯಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಇದೇ ವೇಳೆ ಸಿಎಂ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರು ಹಾಗೂ ಗಯಾಳುಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Accident case, ₹2 lakh rupees compensation

ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರಿಡ್ಜ್ ಬಳಿ ಈ ಭೀಕರ ಅಪಘಾತ ನಡೆದಿದೆ. ಎರಡು ಆಟೋಗಳು ಮತ್ತು ಲಾರಿ ನಡುವೆ ಡಿಕ್ಕಿ ಅಪಘಾತ ಸಂಭವಿಸಿದ್ದು, ಒಂದು ಆಟೋ ಡಿಕ್ಕಿಯ ರಭಸಕ್ಕೆ ಹಲವು ಮೀಟರ್ ದೂರ ಹೋಗಿ ಬಿದ್ದಿದೆ. ಇನ್ನು ಈ ಟೋದಲ್ಲಿದ್ದ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ನಂತರ ಘಟನಾ ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಪಘಾತಕ್ಕೀಡಾದ ಎರಡು ಆಟೋಗಳ ಪೈಕಿ ಒಂದು ಬಳ್ಳಾರಿಯಿಂದ ಹೊಸಪೇಟೆಗೆ ಹೊರಟಿತ್ತು. ಈ ವೇಳೆ ಒಂದೇ ಆಟೋದಲ್ಲಿ 20 ಜನರಿದ್ದರು ಎನ್ನಲಾಗಿದೆ. ಈ ಇಪ್ಪತ್ತು ಜನರ ಪೈಕಿ ಶಾಶಮ್ಮ ಎಂಬ ಓರ್ವ ಮಹಿಳೆ ಮೃತಪಟ್ಟಿದ್ದು, ಮತ್ತೊಂದು ಆಟೋದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಇದೀಗ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

 ಬಳ್ಳಾರಿ: ಲಾರಿ ಮತ್ತು ಎರಡು ಆಟೋಗಳ ನಡುವೆ ಭೀಕರ ಅಪಘಾತ, 7 ಜನ ದುರರ್ಮಣ ಬಳ್ಳಾರಿ: ಲಾರಿ ಮತ್ತು ಎರಡು ಆಟೋಗಳ ನಡುವೆ ಭೀಕರ ಅಪಘಾತ, 7 ಜನ ದುರರ್ಮಣ

ಕೆಲವು ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇಬ್ಬರು ತೀವ್ರವಾಗಿ ಗಾಯಗೊಂಡವರನ್ನು ಬಳ್ಳಾರಿಯ ವಿಮ್ಸ್‌ಗೆ ರವಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary

Accident between lorry and 2 autos near Hosapete, 2 lakh rupees compensation announced by cm’s relief fund for family of deceased

Story first published: Friday, June 30, 2023, 18:06 [IST]

Source link