ಹುಷಾರ್.. ಕಾಲಿಟ್ಟರೆ ಢಮಾರ್: ಹೆಜ್ಜೆ ಹೆಜ್ಜೆಗೂ ಕಾದಿದ್ದಾನೆ ಜವರಾಯ! | Landmines in Ukraine killing innocent citizens

International

oi-Malathesha M

|

Google Oneindia Kannada News

ಕೀವ್: ಯುದ್ಧ ಶುರುವಾದರೆ ಅಲ್ಲಿ ಜೀವಕ್ಕೆ ಬೆಲೆಯೇ ಇಲ್ಲ. ಶತ್ರು ಪಡೆ & ಮಿತ್ರ ಪಡೆ ಅಂತಾ ಎರಡು ಭಾಗವಾಗಿ ಕಿತ್ತಾಟ ಶುರುವಾಗುತ್ತೆ. ಆದ್ರೆ ಹೀಗೆ ಇಬ್ಬರ ನಡುವೆ ಪ್ರತಿಷ್ಠೆಗೆ ನಡೆಯುವ ಕದನದಲ್ಲಿ ಅಮಾಯಕರೆ ಬಲಿಯಾಗುತ್ತಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ಕೂಡ ಹೀಗೆ ಲಕ್ಷಾಂತರ ಅಮಾಯಕರನ್ನ ಬಲಿ ಪಡೆದಿದ್ದು, ಈಗ ಹೆಜ್ಜೆ ಇಟ್ಟಕಡೆಯೆಲ್ಲಾ ಬಾಂಬ್‌ಗಳು ಸಿಗುತ್ತಿವೆ.

ಅಂದಹಾಗೆ ರಷ್ಯಾ, ಉಕ್ರೇನ್ ಮಧ್ಯೆ ಗಲಾಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೆಲಬಾಂಬ್ ಅಥವಾ ಲ್ಯಾಂಡ್‌ಮೈನ್ ಇಡಲಾಗಿದೆ. ಉಕ್ರೇನ್‌ನ ಪ್ರಮುಖ ಪ್ರದೇಶದಲ್ಲಿ ಸಾವಿರ ಸಾವಿರ ನೆಲಬಾಂಬ್ ಹುದುಗಿಸಿಟ್ಟಿವೆ ರಷ್ಯಾ & ಉಕ್ರೇನ್ ಪಡೆಗಳು. ಈ ಕಾರಣಕ್ಕೆ ಹೆಜ್ಜೆ ಹೆಜ್ಜೆಗೂ ಅಲ್ಲಿ ಆತಂಕ ಶುರುವಾಗಿದ್ದು, ಜನ ನಡೆದಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಉಕ್ರೇನ್ ನಿಷೇಧಿತ ನೆಲಬಾಂಬ್ ಬಳಸಿದೆ ಎಂದು ರಷ್ಯಾ ಆರೋಪ ಮಾಡಿತ್ತು. ಈ ಬಗ್ಗೆ ಮಾನವ ಹಕ್ಕುಗಳ ಆಯೋಗ ಹೊಸ ಮಾಹಿತಿ ನೀಡಿದ್ದು, ಉಕ್ರೇನ್ ಪಡೆಗಳು ಆಂಟಿಪರ್ಸನಲ್ ಲ್ಯಾಂಡ್‌ಮೈನ್‌ ಬಳಸಿರುವ ಬಗ್ಗೆ ಪುರಾವೆ ಸಿಕ್ಕಿದೆ ಎಂದಿದೆ.

Landmines in Ukraine killing innocent citizens

ಲಕ್ಷಾಂತರ ಅಮಾಯಕರು ಯುದ್ಧಕ್ಕೆ ಬಲಿ

ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ ಇನ್ನೇನು 500 ದಿನ ಪೂರೈಸಲಿದೆ. ಈ ಹೊತ್ತಲ್ಲೇ ಜಗತ್ತಿನ ವಿವಿಧ ದೇಶಗಳು ಉಕ್ರೇನ್‌ಗೆ ಸಾಂತ್ವನ ಹೇಳಿವೆ. ಎರಡೂ ಕಡೆ ಸೈನಿಕರು ಸೇರಿ ಲಕ್ಷಾಂತರ ಜನರು ಉಸಿರು ಚೆಲ್ಲಿದ್ದಾರೆ. ಆದರೂ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ ಯುದ್ಧವು ತಣ್ಣಗಾಗುತ್ತಿಲ್ಲ. ಇದೇ ಹೊತ್ತಲ್ಲೇ ನಿಷೇಧಿತ ಲ್ಯಾಂಡ್‌ಮೈನ್ ಬಳಕೆ ಯುದ್ಧದ ಭೀಕರತೆ ಇನ್ನಷ್ಟು ಪ್ರಬಲವಾಗಿಸಿದೆ. ಏನು ಮಾಡಬೇಕು ಎಂಬುದು ತಿಳಿಯದೆ ಉಕ್ರೇನ್ ಜನ ನಿತ್ಯ ಪರದಾಡುತ್ತಿದ್ದಾರೆ. ಅದ್ರಲ್ಲೂ ರಷ್ಯಾ ವಶದಲ್ಲಿರುವ ಉಕ್ರೇನ್ ಪ್ರದೇಶಗಳಲ್ಲಿ ನೆಲಬಾಂಬ್ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತಿರುವ ಆರೋಪ ಇದೆ. ಇದಕ್ಕೆ ಉಕ್ರೇನ್ ಪಡೆ ಕಾರಣ ಎಂದು ರಷ್ಯಾ ಆರೋಪ ಮಾಡುತ್ತಿದ್ದರೆ ಇದು ರಷ್ಯಾ ಸೈನಿಕರ ಕೆಲಸ ಅಂತಿದೆ ಉಕ್ರೇನ್.

ಪ್ರಧಾನಿ ಮೋದಿ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ ಗಂಭೀರ ಮಾತಿದು! ಪ್ರಧಾನಿ ಮೋದಿ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ ಗಂಭೀರ ಮಾತಿದು!

ಉಕ್ರೇನ್‌ಗೆ 12 ಸಾವಿರ ಕೋಟಿ ರೂಪಾಯಿ ಸಾಲ!

ಮೊನ್ನೆ ಅಮೆರಿಕ ತನ್ನ ಸ್ನೇಹಿತ ಉಕ್ರೇನ್‌ಗೆ ಸುಮಾರು 4 ಸಾವಿರ ಕೋಟಿ ರೂ. ಗಿಫ್ಟ್ ಕೊಟ್ಟಿತ್ತು. ಇದೀಗ ವಿಶ್ವಬ್ಯಾಂಕ್ ಕೂಡ ಸಹಾಯ ಹಸ್ತ ಚಾಚಿದ್ದು ಉಕ್ರೇನ್‌ಗೆ ಸುಮಾರು 12 ಸಾವಿರ ಕೋಟಿ ರೂಪಾಯಿ ಸಾಲ ನೀಡಿದೆ. ಉಕ್ರೇನ್ ತನ್ನ ಬಜೆಟ್ ಘೋಷಣೆಗಳನ್ನ ಪೂರ್ಣಗೊಳಿಸಲು ಈ ಸಹಾಯ ಮಾಡುತ್ತಿರುವ ಬಗ್ಗೆ ವಿಶ್ವಬ್ಯಾಂಕ್ ಹೇಳಿದೆ. ಈಗಾಗಲೇ ಸುಮಾರು 3 ಬಿಲಿಯನ್ ಡಾಲರ್ ಹಣ ಬಜೆಟ್ ಪೂರೈಕೆಗಾಗಿ ಉಕ್ರೇನ್‌ಗೆ ಹರಿದುಬಂದಿದೆ. ಅತ್ತ ಅಮೆರಿಕ ಮಿಲಿಟರಿ ಸಹಾಯ ಮಾಡುತ್ತಿದ್ದು, ಇದುವರೆಗೂ ಉಕ್ರೇನ್‌ಗೆ ಸುಮಾರು 3 ಲಕ್ಷ ಕೋಟಿ ರೂಪಾಯಿ ಕೊಟ್ಟಿದೆ ಅಮೆರಿಕ.

ರಷ್ಯಾ ವಿರುದ್ಧ ದೀರ್ಘಕಾಲದ ಯುದ್ಧ!

ಅಷ್ಟಕ್ಕು ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಅಮೆರಿಕ 50ಕ್ಕೂ ಹೆಚ್ಚು ಶಸ್ತ್ರಾಸ್ತ್ರ ವಾಹನ ಸೇರಿದಂತೆ, ವೈಮಾನಿಕ ರಕ್ಷಣಾ ವ್ಯವಸ್ಥೆಗೆ ಅಗತ್ಯ ಪರಿಕರ ಕಳುಹಿಸಲು ಮೊನ್ನೆ ನಿರ್ಧಾರ ಕೈಗೊಂಡಿತ್ತು. ಉಕ್ರೇನ್ ಮೇಲೆ ರಷ್ಯಾ ಪಡೆ ಆಕ್ರಮಣ ಆರಂಭಿಸಿದ ನಂತರ ಅಮೆರಿಕ ಈವರೆಗೆ 41ನೇ ಬಾರಿ ಉಕ್ರೇನ್‌ಗೆ ನೆರವು ನೀಡಿದಂತಾಗಿದೆ. ಅಮೆರಿಕ & ನ್ಯಾಟೋ ಪಡೆ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ. ಈವರೆಗೂ ಸುಮಾರು 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಹಾಯವನ್ನ ಉಕ್ರೇನ್ ಸೇನೆಗೆ ಮಾಡಿದೆ ದೊಡ್ಡಣ್ಣ ಅಮೆರಿಕ. ಇದೀಗ ವಿಶ್ವಬ್ಯಾಂಕ್ ಉಕ್ರೇನ್ ಸರ್ಕಾರಕ್ಕೆ ದೊಡ್ಡ ಗಿಫ್ಟ್ ಘೋಷಿಸಿದೆ.

Landmines in Ukraine killing innocent citizens

ಒಟ್ನಲ್ಲಿ ಈಗಿನ ಪರಿಸ್ಥಿತಿ ನೋಡಿದರೆ ಉಕ್ರೇನ್ ಮತ್ತು ರಷ್ಯಾ ಕಿತ್ತಾಟ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ಉಕ್ರೇನ್ ಪರವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಗಟ್ಟಿ ನಿಲುವನ್ನು ತೆಗೆದುಕೊಂಡಿವೆ. ಇದು ಕೂಡ ರಷ್ಯಾ ಕೋಪ ನೆತ್ತಿಗೇರುವಂತೆ ಮಾಡಿದೆ. ಯುದ್ಧ ಇಂದು ನಿಲ್ಲುತ್ತೆ, ನಾಳೆ ಕೊನೆಯಾಗುತ್ತೆ ಅಂತಾ ಕಾದಿದ್ದೇ ಬಂತು. ನೋಡ ನೋಡುತ್ತಲೇ 500 ದಿನ ಪೂರೈಸಿದೆ ರಷ್ಯಾ ಮತ್ತು ಉಕ್ರೇನ್ ಬಡಿದಾಟ. ಇನ್ನೂ ಅದೆಷ್ಟು ದಿನ ಈ ಯುದ್ಧ ಮುಂದುವರಿದು, ಇನ್ನೆಷ್ಟು ಅಮಾಯಕರ ಜೀವ ಬಲಿಪಡಿಯುತ್ತೋ ಕಾದು ನೋಡಬೇಕು.

English summary

Landmines in Ukraine killing innocent citizens.

Story first published: Friday, June 30, 2023, 18:32 [IST]

Source link