Travel
oi-Gururaj S
ಹುಬ್ಬಳ್ಳಿ, ಜುಲೈ 27; ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ-ಗದಗ ನಡುವೆ ತಡೆರಹಿತ ಹವಾನಿಯಂತ್ರಿತ ಬಸ್ ಸಂಚಾರವನ್ನು ಆರಂಭಿಸಿದೆ. ಉಭಯ ನಗರದ ಜನರ ಬೇಡಿಕೆಯಂತೆ ಬಸ್ ಸಂಚಾರ ಆರಂಭಿಸಲಾಗಿದ್ದು, ಜನರು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಲಾಗಿದೆ.
ಹುಬ್ಬಳ್ಳಿ-ಗದಗ ನಡುವೆ ಪ್ರಯಾಣಿಸುವ ಜನರಿಗೆ ಆರಾಮದಾಯಕ ಸಾರಿಗೆ ಸೌಲಭ್ಯ ಕಲ್ಪಿಸಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವೋಲ್ವೋ ಎಸಿ ಬಸ್‌ಗಳ ಸಂಚಾರವನ್ನು ಉಭಯ ನಗರಗಳ ನಡುವೆ ಆರಂಭಸಿದೆ.
ಈ ಬಸ್‌ಗಳು ಹುಬ್ಬಳ್ಳಿ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಿಂದ ಹಾಗೂ ಗದಗ ಹಳೆ ಬಸ್ ನಿಲ್ದಾಣದಿಂದ ಹೊರಟು ಹೊಸ ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ. ಬಸ್‌ನ ಪ್ರಯಾಣ ದರ, ವೇಳಾಪಟ್ಟಿಯನ್ನು ಸಹ ತಿಳಿಸಲಾಗಿದೆ.
ಬಸ್‌ನ ವೇಳಾಪಟ್ಟಿ, ದರ; ಹುಬ್ಬಳ್ಳಿ-ಗದಗ ನಡುವೆ ಸಂಚಾರ ನಡೆಸುವ ಜನರು ವೊಲ್ವೋ ಮಲ್ಟಿ ಆಕ್ಸೆಲ್ ತಡೆರಹಿತ ಸಾರಿಗೆ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7760991662, 7760991685 ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಹುಬ್ಬಳ್ಳಿ-ಗದಗ ವೊಲ್ವೋ ಮಲ್ಟಿ ಆಕ್ಸೆಲ್ ತಡೆ ರಹಿತ ಸಾರಿಗೆ ಸೇವೆಯ ಪ್ರಯಾಣ ದರ 90 ರೂ. ಎಂದು ನಿಗದಿ ಮಾಡಲಾಗಿದೆ. ಪ್ರಸ್ತುತ ಹುಬ್ಬಳ್ಳಿ-ಗದಗ ನಡುವೆ ಸಂಚರಿಸುವ ತಡೆರಹಿತ ವೇಗದೂತ ಬಸ್‌ಗಳ ಪ್ರಯಾಣ ದರ ರೂ. 75 ಇದೆ.
ಹುಬ್ಬಳ್ಳಿ-ಗದಗ ನಡುವಿನ ಬಸ್ ಹುಬ್ಬಳ್ಳಿಯಿಂದ ಹೊರಡುವ ಸಮಯ ಬೆಳಗ್ಗೆ 8, 8.30, 11.15, 11.30. ಮಧ್ಯಾಹ್ನ 2.30, 3 ಮತ್ತು ಸಂಜೆ 5.30 ಹಾಗೂ 6 ಗಂಟೆ.
ಗದಗ-ಹುಬ್ಬಳ್ಳಿ ನಡುವಿನ ಬಸ್ ಗದಗದಿಂದ ಹೊರಡುವ ಸಮಯ ಬೆಳಗ್ಗೆ 9.30, 10. ಮಧ್ಯಾಹ್ನ 12.45, 1 ಗಂಟೆ. ಸಂಜೆ 4, 4.30, 7 ಹಾಗೂ 7.30 ಗಂಟೆ.
English summary
North Western Karnataka Road Transport Corporation (NWKRTC) Hubballi- Gadag nonstop Volvo AC Bus service. Know fare and schedule.
Story first published: Thursday, July 27, 2023, 13:39 [IST]