News
oi-Srinivasa A
ಡೈನಾಮಿಕ್
ಪ್ರಿನ್ಸ್
ಪ್ರಜ್ವಲ್
ದೇವರಾಜ್
ಮುಂಬರುವ
ಜುಲೈ
4ಕ್ಕೆ
36ನೇ
ವರ್ಷದ
ಹುಟ್ಟುಹಬ್ಬವನ್ನು
ಆಚರಿಸಿಕೊಳ್ಳಲಿದ್ದಾರೆ.
ಇನ್ನು
ಹುಟ್ಟುಹಬ್ಬದ
ಆಚರಣೆಗೆ
ಇನ್ನೂ
11
ದಿನಗಳು
ಬಾಕಿ
ಇದ್ದು,
ಅಭಿಮಾನಿಗಳು
ತಮ್ಮ
ನೆಚ್ಚಿನ
ನಟನ
ಹುಟ್ಟುಹಬ್ಬವನ್ನು
ಆಚರಿಸಲು
ಸಜ್ಜಾಗುತ್ತಿದ್ದಾರೆ.
ಹೀಗೆ
ತಮ್ಮ
ಹುಟ್ಟುಹಬ್ಬದ
ದಿನ
ಸಮೀಪಿಸುತ್ತಿದ್ದಂತೆ
ಸಾಮಾಜಿಕ
ಜಾಲತಾಣದಲ್ಲಿ
ವಿಡಿಯೊವೊಂದನ್ನು
ಹಂಚಿಕೊಂಡಿರುವ
ಪ್ರಜ್ವಲ್
ದೇವರಾಜ್
ತಮ್ಮ
ಅಭಿಮಾನಿಗಳು
ಹಾಗೂ
ಹಿಂಬಾಲಕರಿಗೆ
ವಿಶೇಷ
ಸಲಹೆಯನ್ನು
ನೀಡಿದ್ದಾರೆ.
“ಹಾಯ್
ಎಲ್ರಿಗೂ
ನಮಸ್ಕಾರ.
ನಾನು
ನಿಮ್ಮ
ಪ್ರಜ್ವಲ್
ದೇವರಾಜ್
ಮಾತನಾಡ್ತಾ
ಇದ್ದೀನಿ.
ನಾನು
ಈ
ವಿಡಿಯೊ
ಮಾಡುತ್ತಿರುವ
ಕಾರಣ
ಏನು
ಅಂತ
ಅಂದ್ರೆ,
ಕಳೆದ
ಐದು
ವರ್ಷಗಳಿಂದ
ನನ್ನ
ಹುಟ್ಟುಹಬ್ಬದ
ದಿನ
ನಿಮ್ಮನ್ಯಾರನ್ನೂ
ಸಹ
ಭೇಟಿಯಾಗಲು
ಆಗಿರಲಿಲ್ಲ.
ಕಾರಣ
ಏನು
ಅಂತ
ನಿಮಗೂ
ಸಹ
ಗೊತ್ತು.
ಈ
ವರ್ಷ
ನಾಲ್ಕನೇ
ತಾರೀಖು
ನಿಮ್ಮನ್ನೆಲ್ಲರನ್ನೂ
ಸಹ
ಭೇಟಿಯಾಗ್ತೇನೆ.
ಮನೆಯತ್ರ
ಎಲ್ಲರೂ
ಬನ್ನಿ.
ಎಲ್ರೂ
ಊಟ
ಮಾಡಿಕೊಂಡು
ಹೋಗಿ.
ನಿಮ್ಮ
ಜತೆ
ಸಾಕಷ್ಟು
ಸಮಯ
ಕಳೆಯಬೇಕು
ಅಂತ
ನನಗೂ
ಸಹ
ಆಸೆ
ಇದೆ.
ಆದರೆ
ಒಂದು
ಮನವಿ
ನನ್ನ
ಕಡೆಯಿಂದ.
ಹಾರ,
ಕೇಕು
ಇವೆಲ್ಲವೂ
ತರದೇ
ಶಾಲಾ
ಮಕ್ಕಳಿಗಾಗಿ,
ಶಾಲೆಗಳಿಗಾಗಲಿ
ಅಥವಾ
ಕಷ್ಟದಲ್ಲಿರುವ
ಮಕ್ಕಳ
ಫೀಸ್‌ಗಾಗಿಯಾದರೂ
ಉಪಯೋಗಿಸಿ.
ಇದೇ
ನೀವು
ನನಗೆ
ಕೊಡುವ
ಉಡುಗೊರೆ”
ಎಂದು
ಪ್ರಜ್ವಲ್
ದೇವರಾಜ್
ವಿಡಿಯೊದಲ್ಲಿ
ಹೇಳಿಕೊಂಡಿದ್ದಾರೆ.
ಹೀಗೆ
ಪ್ರಜ್ವಲ್
ದೇವರಾಜ್
ತಮ್ಮ
ಅಭಿಮಾನಿಗಳನ್ನು
ಬರೋಬ್ಬರಿ
ಐದು
ವರ್ಷಗಳ
ಬಳಿಕ
ಭೇಟಿಯಾಗಲು
ತೀರ್ಮಾನಿಸಿದ್ದು,
ಇದು
ಪ್ರಜ್ವಲ್
ಅಭಿಮಾನಿಗಳ
ಪಾಲಿಗೆ
ಸಂತಸದ
ಸುದ್ದಿಯಾಗಿ
ಪರಿಣಮಿಸಿದೆ.
English summary
Prajwal Devaraj invites his fans to attend his birthday on July 4. Read on
Friday, June 23, 2023, 23:42
Story first published: Friday, June 23, 2023, 23:42 [IST]