Chitradurga
lekhaka-Chidananda M
ಅಕ್ರಮವಾಗಿ ದನಗಳ ಸಾಗಿಸುತ್ತಿದ್ದ ಲಾರಿ ಅಪಘಾತವಾಗಿ 9 ದನಗಳು ಸಾವನ್ನಪ್ಪಿಸ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ನಡೆದಿದೆ.
ಲಾರಿ ಅಪಘಾತವಾಗಿ 10ರಲ್ಲಿ 9 ಜಾನುವಾರುಗಳು ಸಾವನ್ನಪ್ಪಿವೆ. ಘಟನಾ ಸ್ಥಳದಲ್ಲಿ ಮೊದಲಿಗೆ 7, ಬಳಿಕ ಮತ್ತೆರಡು ಜಾನುವಾರುಗಳು ಅಸುನೀಗಿವೆ. ಇನ್ನು ಅಪಘಾತಕ್ಕೀಡಾದ ಲಾರಿಯು ಮಹಾರಾಷ್ಟ್ರದಿಂದ ಕೋಲಾರದ ಕಡೆಗೆ ದನಗಳನ್ನು ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಕೆ.ಆರ್.ಹಳ್ಳಿ ಗೇಟ್ ಈ ಅವಘಡ ಸಂಭವಿಸಿದೆ. ಮಹಾರಾಷ್ಟ್ರದಿಂದ ಕೋಲಾರ ಕಡೆಗೆ ದನಗಳನ್ನು ತುಂಬಿಕೊಂಡು ಹೋಗುವಾಗ ಇಚಾರ್ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆ ಪರಿಣಾಮ, ಮೊದಲಿಗೆ ಲಾರಿಯಲ್ಲಿದ್ದ 10 ದನಗಳಲ್ಲಿ 7 ದನಗಳು ಸ್ಥಳದಲ್ಲೇ ಸಾವನ್ನಪ್ಪಿದ್ದವು. 2 ದನಗಳು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ 1 ಗೋವು ಮಾತ್ರ ಆರೋಗ್ಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಎರಡು ಲಾರಿಗಳ ಅಪಘಾತವಾದ ರಭಸಕ್ಕೆ ಲಾರಿಯಲ್ಲಿದ್ದ ದನಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಕಂಡುಬಂದಿದೆ. ಇನ್ನು ಎರಡು ಲಾರಿಗಳ ಡ್ರೈವರ್‌ಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ: ದಂಪತಿ ಸೇರಿ ಮೂವರ ದುರ್ಮರಣ
ಅಪಘಾತಕ್ಕೀಡಾದ ಕೆಎಸ್‌ಆರ್‌ಟಿಸಿ ಬಸ್
ಹಾಗೆಯೆ ಇತ್ತೀಚೆಗಷ್ಟೇ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿರುವ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿತ್ತು.
ಚಿತ್ರದುರ್ಗ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯ ಉಚಿತ ಪ್ರಯಾಣದ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಜಿಲ್ಲಾ ಸಚಿವ ಡಿ.ಸುಧಾಕರ್ ಅವರು ಚಾಲನೆ ನೀಡಿದ್ದರು. ಕೆಎಸ್ಆರ್‌ಟಿಸಿ ಬಸ್‌ಗೆ ಸಿಂಗಾರಗೊಳಿಸಿ ಚಿತ್ರದುರ್ಗದಿಂದ ಹಿರಿಯೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ಬಸ್‌ಗೆ ಚಾಲನೆ ನೀಡಲಾಗಿದೆ. ಚಾಲನೆ ನೀಡುತ್ತಿದ್ದಂತೆಯೇ ಚಿತ್ರದುರ್ಗದಿಂದ ತೆರಳುವಾಗ ಜವಗೊಂಡನಹಳ್ಳಿ ಬಳಿ ಬಸ್ ಅಪಘಾತಕೀಡಾಗಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಮುಂದೆ ಚಲಿಸುತ್ತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿತ್ತು. ಮಹಿಳೆಯರ ಉಚಿತ ಬಸ್ ಪ್ರಯಾಣಿಕೆ ಚಾಲನೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ಅವಘಡ ಸಂಭವಿಸಿದ್ದು, ಅಪಘಾತಕ್ಕೀಡಾಗಿರುವ ಬಸ್ ಮುಂಭಾಗದಲ್ಲಿ ಡ್ಯಾಮೇಜ್ ಆಗಿದೆ ಎಂದು ತಿಳಿದುಬಂದಿತ್ತು. ಇನ್ನು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿತ್ತು.
English summary
Hiriyur: Truck accident while illegally cattle transporting, 9 cattle killed, drivers seriously injured, here see details
Story first published: Friday, June 23, 2023, 12:56 [IST]