ಹಾಸನ: ನಂಗೆ ಇದೇ ಸೀಟ್‌ ಬೇಕು.. ಬಿಡ್ತಿಯೋ ಇಲ್ವೋ: KSRTCಯಲ್ಲಿ ಮಹಿಳೆಯರ ಹೊಡೆದಾಟ: ವೈರಲ್‌ | Shakti scheme: Womens fighting for window seats in KSRTC bus

Hassan

lekhaka-Veeresha H G

By ಹಾಸನ ಪ್ರತಿನಿಧಿ

|

Google Oneindia Kannada News

ಹಾಸನ, ಜೂನ್‌, 19: ರಾಜ್ಯ ಸರ್ಕಾರ “ಶಕ್ತಿ” ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಿದೆ. ಈ ಯೋಜನೆ ಜಾರಿ ಆದಾಗಿನಿಂದ ಮಹಿಳೆಯರು ರೈಲು, ಖಾಸಗಿ ಬಸ್‌ಗಳನ್ನು ತ್ಯಜಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಪ್ರಯಾಣ ಮಾಡಲು ಶುರು ಮಾಡಿದ್ದಾರೆ. ಹಾಗಯೇ ಹಲವೆಡೆ ಸೀಟ್‌ಗಾಗಿ ಮಹಿಳೆಯರು ಕತ್ತಾಡಿಕೊಂಡ ಘಟನೆಗಳು ಕೂಡ ಜರುಗಿವೆ. ಇದೀಗ ಹಾಸನ ಜಿಲ್ಲೆಯಲ್ಲೂ ಅಂತಹದ್ದೇ ಘಟನೆಯೊಂದು ನಡೆದಿದೆ.

ವಿದ್ಯುತ್ ದರ ಏರಿಕೆ: ಜೂನ್‌ 22ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ ವಾಣಿಜ್ಯೋದ್ಯಮ ಸಂಸ್ಥೆವಿದ್ಯುತ್ ದರ ಏರಿಕೆ: ಜೂನ್‌ 22ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿದ ವಾಣಿಜ್ಯೋದ್ಯಮ ಸಂಸ್ಥೆ

ಕಿಟಕಿ ಪಕ್ಕದಲ್ಲೇ ಸೀಟ್‌ಗಾಗಿ ಮೂವರು ಮಹಿಳೆಯರು ಕಿತ್ತಾಡಿಕೊಂಡ ಘಟನೆ ಬೆಂಗಳೂರಿನಿಂದ ಹಾಸನಕ್ಕೆ ಬರುತ್ತಿದ್ದ ಸಾರಿಗೆ ಬಸ್‌ನಲ್ಲಿ ನಡೆದಿದೆ. ಜೊತೆಯಲ್ಲಿ ಬಂದಿದ್ದ ಮಹಿಳೆಯರ ಮಧ್ಯದಲ್ಲಿ ಕುಳಿತ ಮತ್ತೋರ್ವ ಮಹಿಳೆ ನನಗೆ ಕಿಟಕಿ ಪಕ್ಕದ ಸೀಟ್‌ ಬಿಟ್ಟುಕೊಡಿ ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಇಬ್ಬರು ದೋಸ್ತಿ ಮಹಿಳೆಯರು ನಡುವೆ ಸೀಟ್‌ನಲ್ಲಿ ಕುಳಿತ ಮಹಿಳೆಯನ್ನು ತರಾಟೆಗೆ ತೆದುಕೊಂಡಿದ್ದಾರೆ.

Shakti scheme

ಇನ್ನು ಇದೇ ವೇಳೆ ಮಧ್ಯದಲ್ಲಿ ಕುಳಿತ ಮಹಿಳೆ ಏನ್‌ ಮಾಡ್ತೀರೋ ಗೊತ್ತಿಲ್ಲ ಕಿಟಕಿ ಪಕ್ಕದಲ್ಲಿರುವ ಸೀಟ್‌ ಬಿಟ್ಟುಕೊಡಿ ಎಂದು ಪಟ್ಟುಹಿಡಿದಿದ್ದರು. ಆಗ ದೋಸ್ತಿ ಮಹಿಳೆಯರಿಬ್ಬರು ಈ ಸೀಟ್‌ ಬಿಟ್ಟುಕೊಡಲ್ಲ ಅದೇನು ಮಾಡ್ಕೋಳ್ತೀರಾ ಮಾಡ್ಕೋಳಿ ಎಂದು ಹೇಳುವ ಮೂಲಕ ಮಾತಿನ ಮೂಲಕವೇ ಜಾಡಿಸಿದ್ದಾರೆ. ಸದ್ಯ ಸೀಟ್‌ಗಾಗಿ ಮಹಿಳೆಯರ ನಡುವಿನ ಮಾತಿನ ಚಕಮಕಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

English summary

Shakti scheme: Womens fighting for window seats in KSRTC bus

Story first published: Monday, June 19, 2023, 14:43 [IST]

Source link