ಹಾಲಿನ ದರ ಏರಿಕೆಗೆ ಸಂಪುಟ ಅಸ್ತು: ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡ ಮಹತ್ವದ ನಿರ್ಣಯಗಳು ಇಲ್ಲಿವೆ! | Cabinet Meeting: Nandini Milk Price Hike From August 1

Karnataka

oi-Reshma P

|

Google Oneindia Kannada News

ಬೆಂಗಳೂರು, ಜುಲೈ 27: ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪುಗೆ ನೀಡಿದ್ದು, ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಆಗಲಿದೆ. ಆಗಸ್ಟ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಈ ಕುರಿತು ಗುರುವಾರ ಸಿಎಂ‌ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲಾಗಿದೆ. ಇನ್ನೂ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌ ಮಾಧ್ಯಮಗಳ ಜೊತೆಗೆ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆ ಸನ್ನಡತೆಯ ಆಧಾರದ ಮೇಲೆ 67 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದ್ದು, ಬೆಂಗಳೂರು ಪರಪ್ಪನ ಅಗ್ರಹಾರ 24, ಮೈಸೂರು- 8, ಬೆಳಗಾವಿ 2, ಕಲಬುರಗಿ 5,ಶಿವಮೊಗ್ಗ 12, ಬಳ್ಳಾರಿ 8, ಧಾರವಾಡ ಸೆಂಟ್ರಲ್ ಜೈಲು – 2 ಕೈದಿಗಳಿಗೆ ಆಗಸ್ಟ್ 15 ಕ್ಕೆ ಬಿಡುಗಡೆ ಭಾಗ್ಯ ಸಿಗಲಿದೆ ಎಂದು ಹೇಳಿದರು.

cabinet-meeting-nandini-milk-price

ಸಂಪುಟದ ಇತರ ತೀರ್ಮಾನಗಳು ಇಲ್ಲಿವೆ:

  • ಬೆಂಗಳೂರಿನಲ್ಲಿ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಕ್ಕೆ 22ಕೋಟಿ ಮಂಜೂರು. ನೆಫ್ರೋ ಯುರಾಲಜಿ ಕಟ್ಟಡಕ್ಕೆ ಅನೆಕ್ಸ್ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ
  • ಲೋಕೋಪಯೋಗಿ ಇಲಾಖೆಯಲ್ಲಿ ಹೊಸ ಪ್ರಾಧಿಕಾರ ರಚನೆಗೆ ಒಪ್ಪಿಗೆ
  • ಕರ್ನಾಟಕ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಿರ್ಧಾರ
  • ಪ್ರವರ್ಗ 3ಎ ನಲ್ಲಿ ಕೊಡಗರು ಎಂದಿರುದರ ಬದಲಾಗಿ ಕೊಡವ ಹಾಗೂ ಕೊಡವರು ಎಂದು ಬದಲಾಯಿಸಲು ಸಂಪುಟ ಸಮ್ಮತಿ. ಹಿಂದುಳಿದ ವರ್ಗಗಳ ಆಯೋಗ ಶಿಪಾರಸ್ಸು ಮಾಡಿತ್ತು.

English summary

Congress Government: State Cabinet Meeting: Here are the decisions taken by the government

Story first published: Thursday, July 27, 2023, 21:45 [IST]

Source link