ಹಣದುಬ್ಬರದ ಭಯ: ಅಕ್ಕಿ ರಫ್ತು ನಿಷೇಧಿಸಲು ಭಾರತದ ಚಿಂತನೆ | Inflation fear: India considering ban on rice exports

India

oi-Punith BU

|

Google Oneindia Kannada News

ನವದೆಹಲಿ, ಜುಲೈ 13: ಪ್ರತಿಕೂಲ ಹವಾಮಾನದಿಂದ ಉತ್ಪಾದನೆ ಮೇಲೆ ಬೀಳುವ ಹೊಡೆತದಿಂದ ಉಂಟಾಗುವ ಹಣದುಬ್ಬರದಿಂದ ತಪ್ಪಿಸಿಕೊಳ್ಳಲು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರನಾದ ಭಾರತವು ಹೆಚ್ಚಿನ ಅಕ್ಕಿ ರಫ್ತುಗಳನ್ನು ನಿಲ್ಲಿಸಲು ಚಿಂತನೆ ನಡೆಸುತ್ತಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಈ ಬಗ್ಗೆ ಸಂಪನ್ಮೂಲ ವ್ಯಕ್ತಿಗಳ ನೀಡಿರುವ ಮಾಹಿತಿಯಂತೆ ಎಲ್ಲಾ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತುಗಳನ್ನು ನಿಷೇಧಿಸುವ ಯೋಜನೆಯನ್ನು ಸರ್ಕಾರವು ಚರ್ಚೆ ನಡೆಸುತ್ತಿದೆ. ಇದು ಹೆಚ್ಚುತ್ತಿರುವ ದೇಶೀಯ ಬೆಲೆಗಳಿಂದಾಗಿ ಮತ್ತು ಹೆಚ್ಚಿನ ಹಣದುಬ್ಬರದ ಅಪಾಯವನ್ನು ತಪ್ಪಿಸಲು ಅಧಿಕಾರಿಗಳು ಬಯಸಿದ್ದಾರೆ. ಆದರೆ ಈ ಮಾಹಿತಿಯು ಅಧಿಕೃತವಾಗಿಲ್ಲ ಎಂದು ಅವರು ಹೇಳಿದ್ದಾರೆ.

Inflation fear: India considering ban on rice exports

ಒಂದು ವೇಳೆ ಈ ನಿರ್ಧಾರ ಜಾರಿಯಾದರೆ ಭಾರತದ ಅಕ್ಕಿ ರಫ್ತಿನ ಸುಮಾರು 80 ಪ್ರತಿಶತದ ಮೇಲೆ ಪರಿಣಾಮ ಬೀರುತ್ತದೆ. ಈ ಕ್ರಮವು ದೇಶೀಯ ಬೆಲೆಗಳನ್ನು ಕಡಿಮೆ ಮಾಡಬಹುದು. ಆದರೆ ಇದು ಜಾಗತಿಕ ವೆಚ್ಚವನ್ನು ಇನ್ನಷ್ಟು ಹೆಚ್ಚಿಸುವ ಅಪಾಯವನ್ನುಂಟುಮಾಡುತ್ತದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಅಕ್ಕಿ ಮುಖ್ಯವಾಗಿದೆ. ಏಷ್ಯಾವು ಜಾಗತಿಕ ಪೂರೈಕೆಯ ಸುಮಾರು 90 ಪ್ರತಿಶತದಷ್ಟು ಇದೆ. ಎಲ್ ನಿನೋ ಹವಾಮಾನವು ಬೆಳೆಗಳನ್ನು ಹಾನಿಗೊಳಿಸುತ್ತದೆ ಎಂಬ ಭಯದಿಂದ ಬೆಂಚ್‌ಮಾರ್ಕ್ ಬೆಲೆಗಳು ಈಗಾಗಲೇ ಎರಡು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿವೆ.

ಅನ್ನಭಾಗ್ಯ ಕದನ; ಮೋದಿ ಅಕ್ಕಿ' ಅಂತೀರಲ್ಲಾ, ಮೋದಿ ಉತ್ತಿ, ಬಿತ್ತಿ ಬೆಳೆದು ಅಕ್ಕಿ ಕೊಡ್ತಿದ್ದಾರಾ? ಕಾಂಗ್ರೆಸ್‌ ಕಿಡಿಅನ್ನಭಾಗ್ಯ ಕದನ; ಮೋದಿ ಅಕ್ಕಿ’ ಅಂತೀರಲ್ಲಾ, ಮೋದಿ ಉತ್ತಿ, ಬಿತ್ತಿ ಬೆಳೆದು ಅಕ್ಕಿ ಕೊಡ್ತಿದ್ದಾರಾ? ಕಾಂಗ್ರೆಸ್‌ ಕಿಡಿ

ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಭಾರತವು ಸುಮಾರು 40 ಪ್ರತಿಶತವನ್ನು ಹೊಂದಿದೆ. ಈಗ ಕೆಲವು ತಳಿಗಳ ರಫ್ತುಗಳನ್ನು ಬಿಗಿಗೊಳಿಸಲು ಪ್ರಯತ್ನಿಸಿದೆ. ಕಳೆದ ವರ್ಷ ಭಾರತವು ಅಕ್ಕಿ ರಫ್ತುಗಳನ್ನು ನಿಷೇಧಿಸಿತ್ತು. ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ನಂತರ ಗೋಧಿ ಮತ್ತು ಜೋಳದಂತಹ ಆಹಾರ ಪದಾರ್ಥಗಳ ಬೆಲೆಗಳನ್ನು ಗಗನಕ್ಕೇರಿಸಿದ ನಂತರ ಬಿಳಿ ಮತ್ತು ಕಂದು ಅಕ್ಕಿಯ ಸಾಗಣೆಗೆ 20 ಪ್ರತಿಶತ ಸುಂಕವನ್ನು ವಿಧಿಸಿತು. ದೇಶವು ಗೋಧಿ ಮತ್ತು ಸಕ್ಕರೆ ರಫ್ತುಗಳನ್ನು ನಿರ್ಬಂಧಿಸಿದೆ.

ಭಾರತವು 100ಕ್ಕೂ ಹೆಚ್ಚು ದೇಶಗಳಿಗೆ ಅಕ್ಕಿಯನ್ನು ಪೂರೈಸುತ್ತದೆ, ಇದರಲ್ಲಿ ಬೆನಿನ್, ಚೀನಾ, ಸೆನೆಗಲ್, ಕೋಟ್ ಡಿ ಐವೊಯಿರ್ ಮತ್ತು ಟೋಗೊ ತನ್ನ ದೊಡ್ಡ ಗ್ರಾಹಕರ ಪಟ್ಟಿಯಲ್ಲಿ ಸೇರಿವೆ. ಈ ಅಕ್ಕಿ ನಿಷೇಧದ ಸುದ್ದಿಯಿಂದ ಭಾರತೀಯ ಅಕ್ಕಿ ಗಿರಣಿಗಾರರ ಷೇರುಗಳು ಕುಸಿದಿದೆ. ದೇಶದ ಅತಿದೊಡ್ಡ ಅಕ್ಕಿ ಕಂಪನಿಯಾದ ಕೆಆರ್‌ಬಿಎಲ್ ಲಿಮಿಟೆಡ್ ನಷ್ಟವನ್ನು ಸರಿದೂಗಿಸುವ ಮೊದಲು ಶೇಕಡಾ 3.7 ರಷ್ಟು ಕುಸಿದಿದೆ. ಚಮನ್ ಲಾಲ್ ಸೆಟಿಯಾ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಶೇ.1.4ರಷ್ಟು ಕುಸಿದಿದ್ದರೆ, ಕೊಹಿನೂರ್ ಫುಡ್ಸ್ ಲಿಮಿಟೆಡ್ ಶೇ.2.9ರಷ್ಟು ಕುಸಿದರೆ ಎಲ್ ಟಿ ಫುಡ್ಸ್ ಲಿಮಿಟೆಡ್ ಶೇ.4.4ರಷ್ಟು ಕುಸಿದಿದೆ.

ಇಂಡೋನೇಷ್ಯಾ, ಚೀನಾ ಮತ್ತು ಫಿಲಿಪೈನ್ಸ್‌ನಂತಹ ಆಮದುದಾರರು ಈ ವರ್ಷ ಅಕ್ಕಿಯನ್ನು ಹೆಚ್ಚಾಗಿ ಸಂಗ್ರಹಿಸುತ್ತಿದ್ದಾರೆ. ಎಲ್ ನಿನೊ ಪರಿಸ್ಥಿತಿಗಳು ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಉಷ್ಣವಲಯದ ಪೆಸಿಫಿಕ್‌ನಲ್ಲಿ ಅಭಿವೃದ್ಧಿಗೊಂಡಿವೆ. ವಿಶ್ವ ಹವಾಮಾನ ಸಂಸ್ಥೆಯ ಪ್ರಕಾರ, ಅನೇಕ ಭತ್ತ ಬೆಳೆಯುವ ಪ್ರದೇಶಗಳಿಗೆ ಬರವನ್ನು ತರುವ ಆತಂಕ ಇದೆ. ಭಾರತದ ಈ ಅಕ್ಕಿ ರಫ್ತು ನಿಷೇಧವು ಪೂರೈಕೆಯ ಬಗ್ಗೆ ಕಳವಳಗಳನ್ನು ಆ ದೇಶಗಳಲ್ಲಿ ಹೆಚ್ಚಿಸಿದೆ.

English summary

India, the world’s largest rice exporter, is considering halting most rice exports to avoid inflation caused by adverse weather hitting production, Bloomberg reported.

Story first published: Thursday, July 13, 2023, 16:03 [IST]

Source link