ಸ್ವಪಕ್ಷ-ವಿಪಕ್ಷದವರಿಗೆ ಬೇಕಾಬಿಟ್ಟಿ ಮಾತಾಡಿಕೊಂಡು ದಿನ ಕಳೆಯುವುದೇ ಸಂಸದನ ದಿನಚರಿ: ಎಂಬಿ ಪಾಟೀಲ್‌ ಹೇಳಿದ್ದು ಯಾರ ಬಗ್ಗೆ? | Karnataka Minister MB Patil Slams Mysuru BJP MP Pratap Simha- Know the Reason

Karnataka

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 19: ಸ್ವಪಕ್ಷ-ವಿಪಕ್ಷದವರಿಗೂ ಬೇಕಾಬಿಟ್ಟಿ ಮಾತನಾಡಿಕೊಂಡು ದಿನ ಕಳೆಯುವುದೇ ಇವರ ದಿನಚರಿಯಾಗಿದೆ ಎಂದು ಮೈಸೂರು- ಕೊಡಗು ಸಂಸದ ಪ್ರತಾಪ ಸಿಂಹ ದಿನಚರಿಯಾಗಿದೆ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕ ಸಚಿವ ಎಂಬಿ ಪಾಟೀಲ್‌ ಹರಿಹಾಯ್ದಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, ‘ಓರ್ವ ಸಂಸದ ಲಘುವಾಗಿ ಲಂಗು-ಲಗಾಮಿಲ್ಲದೆ ಏನೇನೊ ಮಾತನಾಡುತ್ತಿದ್ದಾರೆ. ಸ್ವಪಕ್ಷ-ವಿಪಕ್ಷದವರಿಗೂ ಬೇಕಾಬಿಟ್ಟಿ ಮಾತನಾಡಿಕೊಂಡು ದಿನ ಕಳೆಯುವುದೇ ಇವರ ದಿನಚರಿಯಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

Karnataka Minister MB Patil Slams Mysuru BJP MP Pratap Simha- Know the Reason

‘ಇವರು ಹಾಗೂ 2-3 ಭಾಷಣಕಾರರ ಮಂಡಳಿಯ ಸದಸ್ಯರು ತಮ್ಮದೇ ಪಕ್ಷದ ನಾಯಕರಾದ ಯಡಿಯೂರಪ್ಪನವರು ಏನು ಮಾಡಿದ್ದಾರೆ? ಅವರ ಕೊಡುಗೆ ಏನು ಎಂದು ಪ್ರಶ್ನಿಸುವ ದಾಟಿಯಲ್ಲಿ ಮಾತನಾಡಿ, ಅವರನ್ನು ಅಧಿಕಾರದಿಂದಲೂ ಇಳಿಸಿದರು’ ಎಂದು ಆರೋಪಿಸಿದ್ದಾರೆ.

‘ಲಘುವಾಗಿ ಮಾತನಾಡಿ ಮಾತನಾಡಿ ಅವರ ಪಕ್ಷದ ಪರಿಸ್ಥಿತಿ ಏನಾಗಿದೆ ಎಂದು ರಾಜ್ಯ ಕಂಡಿದೆ. ನಾನು ಸುಮಾರು 20 ವರ್ಷಗಳ ಹಿಂದೆ ನನ್ನ 33ನೇ ವಯಸ್ಸಿಗೆ ಸಂಸದನಾದವನು. ನಾನು ಗಾಳಿಯಲ್ಲಿ ಗೆದ್ದು ಸಂಸದನಾದವನಲ್ಲ, ವಾಜಪೇಯಿ ಅಲೆಯಲ್ಲಿಯೂ ಸಹ ಗೆದ್ದ ಉತ್ತರ ಕರ್ನಾಟಕ ಭಾಗದ ಏಕೈಕ ಕಾಂಗ್ರೆಸ್ ಸಂಸದ’ ಎಂದೂ ಎಂಬಿ ಪಾಟೀಲ್‌ ಹೇಳಿದ್ದಾರೆ.

‘ತಮ್ಮ ಸ್ಥಾನ ಶಾಶ್ವತ ಎಂದು ತಿಳಿದಂತಿದೆ ಹಾಗೂ ಕೇವಲ ಇನ್ನು 10 ತಿಂಗಳುಗಳಲ್ಲಿ ಚುನಾವಣೆ ಬರಲಿದ್ದು ಜನರ ಮುಂದೆ ಹೋಗಲಿದ್ದಾರೆ ಎಂಬುದನ್ನು ಮರೆತಿರಬಹುದು. ನೆನಪಿರಲಿ, Every day is not a Sunday’ ಎಂದು ಎಂಬಿ ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ.

Karnataka Minister MB Patil Slams Mysuru BJP MP Pratap Simha- Know the Reason

ಪ್ರತಾಪ್‌ ಸಿಂಹ ಹೇಳಿದ್ದೇನು?

ಎಂಬಿ ಪಾಟೀಲರೇ ನೀವು ನಿಜವಾಗಿಯೂ ಲಿಂಗಾಯತರೇ ಎಂದು ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಅವರನ್ನು ಪದೇ ಪದೇ ಟೀಕಿಸುತ್ತೀರಿ. ಅವರ ಬಗ್ಗೆ ಪದೇ ಪದೇ ಮಾತಾನಾಡುತ್ತೀರಿ. ಬ್ರಾಹ್ಮಣರನ್ನು ದಿನವೂ ಬೈಯ್ತೀರಿ, ಬ್ರಾಹ್ಮಣರ ಮೇಲೆ ನಿಮಗೆ ಏಕಿಷ್ಟು ದ್ವೇಷ? ವಿಶ್ವಗುರು ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರು ಅಲ್ಲವೇ? ಬಿಎಲ್ ಸಂತೋಷ್ ನಿಮಗೆ ಏನಾದರೂ ತಿವಿದಿದ್ದಾರಾ?’ ಎಂದು ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಚೇಲಾ ಪಡೆ ಮೂಲಕ ತಾವು ಪೂರ್ಣ ಅವಧಿಗೆ ಸಿಎಂ ಅಂತಾ ಹೇಳಿಕೆ ಕೊಡಿಸುತ್ತಿದ್ದಾರೆ. ಸಂಪುಟದಲ್ಲಿ ಸಚಿವರಾಗಿರುವ ಎಚ್‌ಸಿ ಮಹದೇವಪ್ಪ, ಎಂ.ಬಿ.ಪಾಟೀಲ್ ಮೂಲಕ ಹೇಳಿಸಿದ್ದಾರೆ. ನಾನೇ ಪೂರ್ಣವಧಿ ಸಿಎಂ ಅಂತಾ ಹೇಳುವ ಧೈರ್ಯ ಸಿದ್ದರಾಮಯ್ಯಗೆ ಇಲ್ಲ. ಕಾಂಗ್ರೆಸ್ ಧಾರಾಳ ಮನಸ್ಸಿನಿಂದ ಸಿದ್ದರಾಮಯ್ಯ ಅವರನ್ನು ಮತ್ತೆ ಸಿಎಂ ಮಾಡಿದೆ. ಆದರೆ, ಸಿದ್ದರಾಮಯ್ಯಗೆ ಮಾತ್ರ ಉದಾರತನದ ಮನಸ್ಸು ಇಲ್ಲ. ಅವರಿಗೆ ಧೈರ್ಯವಿದ್ದರೆ 5 ವರ್ಷ ಸಿಎಂ ನಾನೆ ಅಂತ ಹೇಳಲಿ’ ಎಂದು ಪ್ರತಾಪಸಿಂಹ ಹೇಳಿದ್ದಾರೆ.

English summary

Karnataka Minister MB Patil Slams Mysuru BJP MP Pratap Simha,

Story first published: Monday, June 19, 2023, 18:28 [IST]

Source link