India
oi-Mamatha M
ನವದೆಹಲಿ, ಜುಲೈ. 27: ಭಾರತೀಯ ರಿಸರ್ವ್ ಬ್ಯಾಂಕ್ (RBI) ಜುಲೈ 27 ರಂದು ಸ್ಟಾರ್ (*) ಚಿಹ್ನೆಯನ್ನು ಹೊಂದಿರುವ ಬ್ಯಾಂಕ್ ನೋಟುಗಳು ಇತರ ಬ್ಯಾಂಕ್ ನೋಟುಗಳಂತೆಯೇ ಸಂಪೂರ್ಣವಾಗಿ ಅಧಿಕೃತವಾಗಿದೆ ಮತ್ತು ಕಾನೂನು ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.
ಇತ್ತೀಚೆಗೆ, ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ನೋಟುಗಳಲ್ಲಿ ಸ್ಟಾರ್ ಚಿಹ್ನೆ ಕಾಣಿಸಿಕೊಂಡಿದ್ದವು. ಈ ಸ್ಟಾರ್ ಚಿಹ್ನೆಯು 500 ರೂಪಾಯಿ ಮತ್ತು ಇತರ ಮುಖಬೆಲೆಯ ನೋಟುಗಳ ಕೆಳಗಿನ ಬಲಭಾಗದಲ್ಲಿ ಮುದ್ರಿಸಲಾದ ಸರಣಿ ಸಂಖ್ಯೆಗಳ ಮಧ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ನೋಟುಗಳು ನಕಲಿ ಎಂಬ ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿತ್ತು. ಹೀಗಾಗಿ ಆರ್‌ಬಿಐ ಸ್ಪಷ್ಟನೆ ನೀಡಿದೆ.
ಇಲ್ಲಿಯವರೆಗೆ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳಲ್ಲಿ ಸ್ಟಾರ್ ಚಿಹ್ನೆ ಕಾಣಿಸಿಕೊಂಡಿರಲಿಲ್ಲ. ಈಗ ಈ ಚಿಹ್ನೆ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿತ್ತು. ಇಂತಹ ಯಾವುದೇ ಚಿಹ್ನೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸಿಲ್ಲ. ನೋಟುಗಳ ಮೇಲೆ ಇಂತಹ ಹೆಚ್ಚುವರಿ ಚಿಹ್ನೆಗಳನ್ನು ಮುದ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿಲ್ಲ ಎನ್ನಲಾಗಿತ್ತು.
2,000 ನೋಟು ಬದಲಾಯಿಸುವ ಆರ್‌ಬಿಐ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್!
ಈ ಬಗ್ಗೆ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ. ನಕ್ಷತ್ರ ಗುರುತು ಇರುವ ನೋಟುಗಳು ನಕಲಿ ಅಲ್ಲ ಎಂದಿದ್ದು, ಇವು ಮಾನ್ಯವಾಗಿವೆ ಎಂದಿದೆ. ಸ್ಟಾರ್ ಚಿಹ್ನೆಯು ಅದನ್ನು ಬದಲಿಸಿದ ಅಥವಾ ಮರುಮುದ್ರಣ ಮಾಡಿದ ನೋಟು ಎಂದು ಗುರುತಿಸುತ್ತದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂನತೆಗಳಿಂದಾಗಿ, ಈ ಹಿಂದೆ ನೀಡಲಾದ 100 ಮುಖಬೆಲೆಯ ಬ್ಯಾಂಕ್ ನೋಟುಗಳ ಬಂಡಲ್‌ಗಳನ್ನು ಸರಿಪಡಿಸಿ ಮರುಮುದ್ರಣ ಮಾಡಬೇಕಾಗಿತ್ತು, ಈ ಸಂದರ್ಭದಲ್ಲಿ ಸಂಖ್ಯಾ ಫಲಕಕ್ಕೆ ನಕ್ಷತ್ರ ಚಿಹ್ನೆಯನ್ನು ಸೇರಿಸಬೇಕಾಯಿತು ಎಂದು ಆರ್‌ಬಿಐ ಹೇಳಿದೆ. ಸ್ಟಾರ್ ಚಿಹ್ನೆ ಇರುವ ನೋಟುಗಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಆರ್‌ಬಿಐ ಪ್ರಕಾರ, ಆಗಸ್ಟ್ 2006 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ತಾಜಾ ಬ್ಯಾಂಕ್ ನೋಟುಗಳನ್ನು ಕ್ರಮವಾಗಿ ಸಂಖ್ಯೆ ಮಾಡಲಾಗಿದೆ. ಈ ಪ್ರತಿಯೊಂದು ನೋಟುಗಳು ಅಂಕಿಅಂಶಗಳು ಮತ್ತು ಅಕ್ಷರಗಳನ್ನು ಒಳಗೊಂಡಿರುವ ವಿಶಿಷ್ಟವಾದ ಸರಣಿ ಸಂಖ್ಯೆಯನ್ನು ಹೊಂದಿವೆ. 100 ಸರಣಿ ಸಂಖ್ಯೆಯ ಬ್ಯಾಂಕ್ ನೋಟುಗಳ ಪ್ಯಾಕೆಟ್‌ನಲ್ಲಿ ದೋಷಪೂರಿತವಾಗಿ ಮುದ್ರಿತ ನೋಟುಗಳನ್ನು ಬದಲಾಯಿಸಲು ಬ್ಯಾಂಕ್ ಸ್ಟಾರ್ ಸರಣಿ ಸಂಖ್ಯೆಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.
English summary
Reserve Bank of India (RBI) explains star (*) symbol series bank notes. Here’s what it means. know more.
Story first published: Thursday, July 27, 2023, 20:08 [IST]