ಸೋಮವಾರದ ಸವಾಲು ಸೋತ ಆದಿಪುರುಷ್..ಬಾಕ್ಸಾಫೀಸ್‌ನಲ್ಲಿ 4ನೇ ದಿನಕ್ಕೆ ಸುಸ್ತು: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು? | Prabhas Kriti Sanon Starrer Adipurush Box Office Collection Drops on Day 4 earns only Rs.20 crore

bredcrumb

Telugu

oi-Muralidhar S

|

ಪ್ಯಾನ್
ಇಂಡಿಯಾ
ಸೂಪರ್‌ಸ್ಟಾರ್
ಪ್ರಭಾಸ್
ಸಿನಿಮಾ
ರೇಂಜ್
ಎಲ್ಲೋತ್ತು.
ಆದರೆ,
‘ಆದಿಪುರುಷ್’
ಸಿನಿಮಾ
ಅದೆಲ್ಲವನ್ನೂ
ತಲೆಕೆಳಗೆ
ಮಾಡಿದಂತಿದೆ.
ಬಹುಶ:

ಸಿನಿಮಾ
ಟೀಕೆಗೆ
ಓಳಗಾದಷ್ಟು
ಪ್ರಭಾಸ್
ಸಿನಿಮಾ
ಮತ್ಯಾವುದೂ
ಆಗಿಲ್ಲ.

ಪೌರಾಣಿಕ
ಹಿನ್ನೆಲೆಯುಳ್ಳ
‘ಆದಿಪುರುಷ್’
ಸಿನಿಮಾ
ಮೇಲೆ
ಇಡೀ
ದೇಶವೇ
ಕಣ್ಣಿಟ್ಟಿತ್ತು.
ಅದರಲ್ಲೂ
ಪ್ರಭಾಸ್
ಶ್ರೀರಾಮನ
ಅವತಾರ
ತಾಳಿದಾಗ
ಸಿನಿಪ್ರಿಯರ
ಕಣ್ಣುಗಳು
ಒಮ್ಮೆ
ಅರಳಿದ್ದವು.
ಆದರೆ,
ಒಂದೇ
ಟೀಸರ್
ನಿರಾಸೆ
ಮಾಡಿತ್ತು.
ಈಗ
ಸಿನಿಮಾ
ನೋಡಿ
ಪ್ರೇಕ್ಷಕರು
ಬೇಸರ
ವ್ಯಕ್ತಪಡಿಸುತ್ತಿದ್ದಾರೆ.

Prabhas Kriti Sanon Starrer Adipurush Box Office Collection Drops on Day 4 earns only Rs.20 crore

‘ಆದಿಪುರುಷ್’
ರಿಲೀಸ್
ಆದ
ಮೊದಲ
ಮೂರು
ದಿನ
ಬಾಕ್ಸಾಫೀಸ್‌ನಲ್ಲಿ
ಸದ್ದು
ಮಾಡಿತ್ತು.
ಮೊದಲ
ಮೂರು
ದಿನಗಳಲ್ಲಿ
ಬಾಕ್ಸಾಫೀಸ್‌ನಲ್ಲಿ
ವಿಶ್ವದಾದ್ಯಂತ
350
ಕೋಟಿ
ರೂ.
ಸಮೀಪ
ಕಲೆಕ್ಷನ್
ಮಾಡಿತ್ತು.
ಆದರೆ,
ಅಸಲಿ
ಚಾಲೆಂಜ್
ಇದ್ದಿದ್ದು
ಸೋಮವಾರ
(ಜೂನ್
19).

ದಿನದ
ಕಲೆಕ್ಷನ್
ಅದ್ಭುತವಾಗಿದ್ದರೆ,
ಸಿನಿಮಾದ
ಗೆಲುವನ್ನು
ಯಾರೂ
ತಡೆಯೋಕೆ
ಸಾಧ್ಯವಿರಲಿಲ್ಲ.
ಆದರೆ,
ನಾಲ್ಕನೇ
ದಿನ
ಬಾಕ್ಸಾಫೀಸ್‌ನಲ್ಲಿ
ಆಗಿದ್ದೇ
ಬೇರೆ.

3
ದಿನದ
‘ಆದಿಪುರುಷ್’
ಕಲೆಕ್ಷನ್
ಎಷ್ಟು?

ಬಹಳ
ದಿನಗಳ
ಬಳಿಕ
ಪೌರಾಣಿಕ
ಸಿನಿಮಾವೊಂದು
ಥಿಯೇಟರ್‌ಗೆ
ಲಗ್ಗೆ
ಇಟ್ಟಿತ್ತು.
ಹೀಗಾಗಿ
‘ಆದಿಪುರುಷ್’
ಸಿನಿಮಾ
ಹಲವು
ದಾಖಲೆಗಳನ್ನು
ಮುರಿಯಬಹುದು
ಎಂದೇ
ನಿರೀಕ್ಷೆ
ಮಾಡಲಾಗಿತ್ತು.
ಅಂದ್ಕೊಂಡಂತೆ
ಆದಿಪುರುಷ್
ಮೊದಲ
ಮೂರು
ದಿನಗಳಲ್ಲಿ
ವಿಶ್ವದಾದ್ಯಂತ
ಸುಮಾರು
340
ಕೋಟಿ
ರೂ.
ಕಲೆ
ಹಾಕಿತ್ತು.

'ಆದಿಪುರುಷ್' ನಿರ್ದೇಶಕನ ವಿರುದ್ಧ ಗರಂ? ಟಾಲಿವುಡ್‌ನಲ್ಲೇನಿದು ಸುದ್ದಿ?‘ಆದಿಪುರುಷ್’
ನಿರ್ದೇಶಕನ
ವಿರುದ್ಧ
ಗರಂ?
ಟಾಲಿವುಡ್‌ನಲ್ಲೇನಿದು
ಸುದ್ದಿ?

ಇನ್ನು
ಭಾರತದಲ್ಲೂ
ಅದೆಷ್ಟೇ
ನೆಗೆಟಿವ್
ಆಗಿ
ಟ್ರೋಲ್
ಆದರೂ,
ಸಿನಿಮಾ
ಕಲೆಕ್ಷನ್‌ಗೆ
ಪೆಟ್ಟು
ಬಿದ್ದಿರಲಿಲ್ಲ.
ಮೊದಲ
ದಿನ
86
ಕೋಟಿ
ರೂ.,
ಎರಡನೇ
ದಿನ
65
ಕೋಟಿ
ರೂ.,
ಹಾಗೂ
ಮೂರನೇ
ದಿನ
69
ಕೋಟಿ
ರೂ.
ಗಳಿಸಿತ್ತು.
ಭಾರತದಲ್ಲಿ
ಒಟ್ಟು
ಮೂರು
ದಿನಗಳಲ್ಲಿ
ಸುಮಾರು
220
ಕೋಟಿ
ರೂ.
ಕಲೆಕ್ಷನ್
ಮಾಡಿತ್ತು.

ನಾಲ್ಕನೇ
ದಿನ
ಅಸಲಿ
ಬಂಡವಾಳ
ಬಯಲು

500
ರಿಂದ
600
ಕೋಟಿ
ರೂ.
ಬಜೆಟ್
ಸಿನಿಮಾದ
ಕಲೆಕ್ಷನ್
ದಿಢೀರನೇ
ಕುಸಿತ
ಕಂಡಿದೆ.
ಪ್ರತಿಯೊಂದು
ಸಿನಿಮಾ
ಮೊದಲ
ಸೋಮವಾರ
ಚಾಲೆಂಜಿಂಗ್.
ಒಂದು
ವೇಳೆ
ಮೊದಲ
ಸೋಮವಾರ
ಬಾಕ್ಸಾಫೀಸ್‌ನಲ್ಲಿ
ಗೆದ್ದರೆ,
ಮತ್ತೆ
ಸಿನಿಮಾ
ಹಿಡಿಯೋಕೆ
ಯಾರಿಂದಲೂ
ಸಾಧ್ಯವಿಲ್ಲ.
ಆದರೆ,
‘ಆದಿಪುರುಷ್’
ವಿಚಾರದಲ್ಲಿ
ಹಾಗಾಗಲಿಲ್ಲ.

Prabhas Kriti Sanon Starrer Adipurush Box Office Collection Drops on Day 4 earns only Rs.20 crore

ಪ್ರಭಾಸ್
ಅಭಿನಯದ
‘ಆದಿಪುರುಷ್’
ಸಿನಿಮಾ
ನಾಲ್ಕನೇ
ದಿನ
ಅಂದ್ರೆ
ನಿನ್ನೆ(ಜೂನ್
19)ರಂದು
ಬಾಕ್ಸಾಫೀಸ್‌ನಲ್ಲಿ
ಗಳಿಸಿದ್ದು
ಕೇವಲ
20
ಕೋಟಿ
ರೂ.

ಮೂಲಕ
‘ಆದಿಪುರುಷ್’
ಸೋಮವಾರದ
ಚಾಲೆಂಜ್‌ನಲ್ಲಿ
ಸೋತಿದೆ.
20
ಕೋಟಿ
ರೂ
ಗಳಿಕೆಯಿಂದ
‘ಆದಿಪುರುಷ್’
ಸದ್ಯಕ್ಕೆ
360
ಕೋಟಿ
ರೂ.
ಕಲೆಕ್ಷನ್
ಮಾಡಿದಂತಾಗಿದೆ.

ಕರ್ನಾಟಕದ
ಕಲೆಕ್ಷನ್
ಎಷ್ಟು?

‘ಆದಿಪುರುಷ್’
ಸಿನಿಮಾವನ್ನು
ಕರ್ನಾಟಕದಲ್ಲಿ
ಕೆಆರ್‌ಜಿ
ಸ್ಟುಡಿಯೋ
ರಿಲೀಸ್
ಮಾಡಿತ್ತು.
ಆದರೆ,
ವಿತರಕರ
ವಲಯದಲ್ಲಿ

ಸಿನಿಮಾ
ಬಗ್ಗೆ
ಒಳ್ಳೆ
ಅಭಿಪ್ರಾಯವಿಲ್ಲ.
4ನೇ
ದಿನ
ಕರ್ನಾಟಕದಲ್ಲಿ
ಗಳಿಸಿದ್ದು
ಕೇವಲ
15
ಲಕ್ಷ
ರೂ.
ಎಂದು
Sacnilk
ವರದಿ
ಮಾಡಿದೆ.
ಇದೂವರೆಗೂ
ಕರ್ನಾಟಕದಲ್ಲಿ
‘ಆದಿಪುರುಷ್’
ಗಳಿಸಿದ್ದು
ಕೇವಲ
1
ಕೋಟಿ
70
ಲಕ್ಷ
ರೂ.
ಎನ್ನಲಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ನಿಲ್ಲದ ಆದಿಪುರುಷ್ ಅಬ್ಬರ; 3 ದಿನಗಳಲ್ಲಿ ಚಿತ್ರ ಗಳಿಸಿದ್ದೆಷ್ಟು? ಇಂದಿನಿಂದ ಶುರು ಅಗ್ನಿಪರೀಕ್ಷೆ!ಬಾಕ್ಸ್
ಆಫೀಸ್‌ನಲ್ಲಿ
ನಿಲ್ಲದ
ಆದಿಪುರುಷ್
ಅಬ್ಬರ;
3
ದಿನಗಳಲ್ಲಿ
ಚಿತ್ರ
ಗಳಿಸಿದ್ದೆಷ್ಟು?
ಇಂದಿನಿಂದ
ಶುರು
ಅಗ್ನಿಪರೀಕ್ಷೆ!

ಪ್ರಭಾಸ್
ಅಂತಹ
ಪ್ಯಾನ್
ಇಂಡಿಯಾ
ಸೂಪರ್‌ಸ್ಟಾರ್
ಸಿನಿಮಾ
ಕರ್ನಾಟಕದಲ್ಲಿ
ಕೇವಲ
1.7
ಕೋಟಿ
ರೂ.
ಬ್ಯುಸಿನೆಸ್
ಮಾಡಿದ್ದು
ದೊಡ್ಡ
ಹಿನ್ನೆಡೆ.
ಅಂದ್ಹಾಗೆ,
ವಿತರಕರ
ವಲಯದಲ್ಲಿ
ಓಡಾಡುತ್ತಿರುವ
ಲೆಕ್ಕಾಚಾರವಿದು.
ಕೆಆರ್‌ಜಿ
ಸ್ಟುಡಿಯೋ
ನಾಲ್ಕು
ದಿನಗಳಲ್ಲಿ
ಕರ್ನಾಟಕದಲ್ಲಿ
‘ಆದಿಪುರುಷ್’
ಗಳಿಸಿದ್ದೆಷ್ಟು?
ಅನ್ನೋ
ಬಗ್ಗೆ
ಅಧಿಕೃತ
ಮಾಹಿತಿ
ಇನ್ನೂ
ನೀಡಬೇಕಿದೆ.

English summary

Prabhas Kriti Sanon Starrer Adipurush Box Office Collection Drops on Day 4 earns only Rs.20 crore, know more.

Tuesday, June 20, 2023, 12:10

Story first published: Tuesday, June 20, 2023, 12:10 [IST]

Source link