International
oi-Malathesha M
ರಷ್ಯಾ: ಧಗಧಗನೆ ಹೊತ್ತಿ ಉರಿಯುತ್ತಿದ್ದ ಯುದ್ಧಕ್ಕೆ ಪೆಟ್ರೋಲ್ ಬಿದ್ದಿದೆ. ರಷ್ಯಾ ಹಾಗೂ ಉಕ್ರೇನ್ ಯುದ್ಧಕ್ಕೆ ಇಂದು ದೊಡ್ಡ ತಿರುವು ಸಿಕ್ಕಿದೆ. ಇಷ್ಟುದಿನ ರಷ್ಯಾ ಪರವಾಗಿ ಯುದ್ಧ ಭೂಮಿಯಲ್ಲಿ ಹೋರಾಟ ನಡೆಸುತ್ತಿದ್ದ ರಷ್ಯಾ ಖಾಸಗಿ ಸೈನಿಕ ಪಡೆ, ಈಗ ತನ್ನ ದೇಶದ ವಿರುದ್ಧವೇ ತಿರುಗಿಬಿದ್ದಿದೆ. ಇಷ್ಟೇ ಅಲ್ಲ ರಷ್ಯಾ ಗಡಿಗೆ ನ್ಯಾಟೋ ಪಡೆ ನುಗ್ಗುವ ಭಯವೂ ಶುರುವಾಗಿದೆ.
ಪುಟಿನ್ ಅಧಿಕಾರ ಅವಧಿಯಲ್ಲಿ ಖಾಸಗಿ ಸೇನೆ ಸ್ಥಾಪನೆ ಆಗಿದ್ದು. ವ್ಲಾದಿಮಿರ್ ಪುಟಿನ್ ಆಪ್ತರ ಪೈಕಿ ಒಬ್ಬನಾದ ಯೆವ್ಗೆನಿ ಪ್ರಿಗೊಝಿನ್ ರಷ್ಯಾದ ಖಾಸಗಿ ಸೇನೆ ಮುಖ್ಯಸ್ಥನಾಗಿದ್ದ. ಆದರೆ ಇದೇ ವ್ಯಕ್ತಿ ಪುಟಿನ್ ವಿರುದ್ಧ ತಿರುಗಿಬಿದ್ದಿದ್ದು, ಉಕ್ರೇನ್ ಯುದ್ಧದಲ್ಲಿ ನಮಗೆ ಸೂಕ್ತವಾದ ಬೆಂಬಲ ಸಿಗುತ್ತಿಲ್ಲ ಎಂದು ಆರೋಪಿಸಿದ್ದ. ಇದಕ್ಕೂ ಸ್ಪಂದಿಸದ ಕಾರಣ ನೇರವಾಗಿ ತನ್ನ ಸೇನೆ ಕರೆದುಕೊಂಡು ಹೋಗಿ ಇದೀಗ ರಷ್ಯಾ ಮೇಲೆ ದಾಳಿ ಮಾಡಿಸಿದ್ದಾನೆ ಪ್ರಿಗೊಝಿನ್. ಯುದ್ಧದಲ್ಲಿ ಖಾಸಗಿ ಸೇನೆಯ ಸೈನಿಕರು ಸಾಯುತ್ತಿರುವುದೇ ಯೆವ್ಗೆನಿ ಪ್ರಿಗೊಝಿನ್‌ಗೆ ಕೋಪ ಹೆಚ್ಚಾಗಲು ಕಾರಣವಾಗಿದೆ (Russia Ukraine War). ಇದೇ ಹೊತ್ತಲ್ಲಿ ರಷ್ಯಾ ಗಡಿಗೂ ಕಂಟಕ ಎದುರಾಗಿದ್ದು, ರಷ್ಯಾ ತನ್ನ ಗಡಿ ರಕ್ಷಣೆ ಮಾಡಲು ಪರದಾಡುತ್ತಿದೆ.
ಸೇಂಟ್ ಪೀಟರ್ಸ್ ಬರ್ಗ್ ಬಗ್ಗೆ ಅಲರ್ಟ್!
ಹೌದು, ರಷ್ಯಾದ ಖಾಸಗಿ ಸೇನೆ ತನ್ನ ದೇಶದ ವಿರುದ್ಧವೇ ತಿರುಗಿಬಿದ್ದ ನಂತರ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಅದರಲ್ಲೂ ಸೇಂಟ್ ಪೀಟರ್ಸ್ ಬರ್ಗ್ ನಗರದ ಮೇಲೆ ಭೀಕರ ದಾಳಿ ನಡೆಯುವ ಅನುಮಾನ ಮೂಡಿದೆ. ಏಕೆಂದರೆ ಸೇಂಟ್ ಪೀಟರ್ಸ್ ಬರ್ಗ್ ನಗರದಲ್ಲೇ ವ್ಯಾಗ್ನರ್ ಗುಂಪು ಅಂದರೆ ರಷ್ಯಾದ ಖಾಸಗಿ ಸೇನೆಯ ಕೇಂದ್ರ ಕಚೇರಿ ಇದೆ. ಹಾಗೇ ಇದೇ ಸ್ಥಳದ ಅಕ್ಕಪಕ್ಕ ನ್ಯಾಟೋ ಪಡೆಗಳ ಸದಸ್ಯ ರಾಷ್ಟ್ರಗಳು ಗಡಿ ಹಂಚಿಕೊಂಡಿವೆ. ಹೀಗಾಗಿ ಯಾವ ಕ್ಷಣದಲ್ಲಿ ಏನಾಗುತ್ತೋ ಗೊತ್ತಿಲ್ಲ. ಇದನ್ನ ಅರಿತಿರುವ ರಷ್ಯಾ ಸೇನೆ ತನ್ನ ಯುದ್ಧ ವಿಮಾನಗಳನ್ನ ಸೇಂಟ್ ಪೀಟರ್ಸ್ ಬರ್ಗ್ ಕಡೆಗೆ ನುಗ್ಗಿಸಿದೆ. ಅಲ್ಲದೆ ರಷ್ಯಾದ ಖಾಸಗಿ ಸೇನೆ ಕಟ್ಟಿಹಾಕಲು ರಣತಂತ್ರ ರೆಡಿಯಾಗಿದೆ.
ನೀನೇ ಸಾಕಿದ ಗಿಣಿ.. ಹದ್ದಾಗಿ ಕುಕ್ಕಿತಲ್ಲೋ..: ಸ್ನೇಹಿತನಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್!
ಪುಟಿನ್ ನೇತೃತ್ವದ ರಷ್ಯಾ ಹೊತ್ತಿ ಉರಿಯುತ್ತಿದೆ
ವೊರೊನೆಜ್ ನಗರ ಹೊತ್ತಿ ಉರಿಯುತ್ತಿದ್ದು, ಈ ಭಾಗದ ತೈಲ ಸಂಗ್ರಹದ ಮೇಲೆ ದಿಢೀರ್ ದಾಳಿ ಶುರುವಾಗಿದೆ. ಅದರಲ್ಲೂ ರಷ್ಯಾ ಸೇನೆಯ ಹೆಲಿಕಾಪ್ಟರ್ & ಯುದ್ಧ ವಿಮಾನಗಳ ಮೂಲಕವೇ ದಾಳಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಈ ಪೈಕಿ ವೊರೊನೆಜ್‌ನಲ್ಲೂ ಹೆಲಿಕಾಪ್ಟರ್ ನೇರವಾಗಿ ತೈಲ ಸಂಗ್ರಹಣೆ ಟ್ಯಾಂಕರ್ ಮೇಲೆ ಬಾಂಬ್ ಹಾಕಿದೆ. ವಿಡಿಯೋ ಈಗ ವೈರಲ್ ಆಗುತ್ತಿದ್ದು, ಬಾಂಬ್ ಹಾಕಿದ್ದು ಸ್ವತಃ ರಷ್ಯಾ ಸೇನೆಗೆ ಸೇರಿದ ಹೆಲಿಕಾಪ್ಟರ್ ಅನ್ನೋದು ಸ್ಪಷ್ಟವಾಗುತ್ತಿದೆ. ಘಟನೆ ಬಳಿಕ ರಷ್ಯಾ ಗಡಿ ಭಾಗದ ಜನರು ಭಯಗೊಂಡು ಹೊರಗೆ ಓಡಿ ಬಂದಿದ್ದಾರೆ.
WATCH: Helicopters attack oil depot in Russia’s Voronezh pic.twitter.com/0TBSmbnnx5
— BNO News (@BNONews) June 24, 2023
ರಷ್ಯಾ ಅಧ್ಯಕ್ಷ ಪುಟಿನ್ ಜೀವಕ್ಕೆ ಅಪಾಯ ಎದುರಾದಂತೆ ಕಾಣುತ್ತಿದೆ. ಕಳೆದ ತಿಂಗಳಷ್ಟೇ ಡ್ರೋನ್ ಮೂಲಕ ವ್ಲಾದಿಮಿರ್ ಪುಟಿನ್ ಹತ್ಯೆಗೆ ಪ್ರಯತ್ನ ನಡೆದಿತ್ತು. ಈ ಘಟನೆ ನಡೆದು 1 ತಿಂಗಳು ಕಳೆಯುವ ಒಳಗೆ ಮತ್ತೊಂದು ಅಪಾಯ ಎದುರಾಗಿದೆ, ರಷ್ಯಾ ಖಾಸಗಿ ಸೇನೆ ಪುಟಿನ್ ಕಥೆ ಮುಗಿಸಲು ಸ್ಕೆಚ್ ಹಾಕಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಬೆಳವಣಿಗೆ ನಡುವೆ ಮತ್ತೊಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದಾನೆ ರಷ್ಯಾ ಖಾಸಗಿ ಸೇನೆಯ ಮುಖ್ಯಸ್ಥ. ಯೆವ್ಗೆನಿ ಪ್ರಿಗೊಝಿನ್ ಬಂಧನಕ್ಕೆ ವ್ಲಾದಿಮಿರ್ ಪುಟಿನ್ ಆದೇಶ ನೀಡುತ್ತಿದ್ದಂತೆ, ‘ನೀವು ತಪ್ಪು ಮಾಡಿಬಿಟ್ಟಿರಿ, ಇಂತಹ ಪರಿಸ್ಥಿತಿಯಲ್ಲಿ ತಪ್ಪು ನಿರ್ಧಾರ ಕೈಗೊಂಡಿದ್ದೀರಿ. ಹೀಗಾಗಿ ರಷ್ಯಾ ಹೊಸ ಅಧ್ಯಕ್ಷನನ್ನು ನೋಡಲಿದೆ’ ಎಂದಿದ್ದಾನೆ ಯೆವ್ಗೆನಿ ಪ್ರಿಗೊಝಿನ್.
English summary
Russian forces has been sent their war flights to Saint Petersburg after Wagner group attack.
Story first published: Saturday, June 24, 2023, 21:11 [IST]