ಸೂಪರ್ CM; ಶ್ಯಾಡೋ CM: ನಾನೇ CM: ನಮ್ಮ ರಾಜ್ಯದಲ್ಲಿ ಇಷ್ಟೊಂದು ಗೊಂದಲ ನಿರ್ಮಾಣ ಆಗಿದೆ! ಛೇ.. ಎಂದ ಬಿಜೆಪಿ | BJP Slams Congress Over Too Much Confusion in Karnataka Congress Leadership

Karnataka

oi-Reshma P

|

Google Oneindia Kannada News

ಬೆಂಗಳೂರು, ಜೂನ್‌ 21: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ನಲ್ಲಿ ಮುಖ್ಯಮಂತ್ರಿ ವಿಚಾರ ಸಾಕಷ್ಟು ಸದ್ದು, ಮಾಡುತ್ತಿದೆ. ಈ ಹಿಂದೆ ಚುನಾವಣೆಯಲ್ಲಿ ಬಹುಮತ ಪಡೆದ ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಆಯ್ಕೆಗೆ ನಾಲ್ಕು ದಿನಗಳ ಬಳಿಕ ಸಿದ್ದರಾಮಯ್ಯ ಅವರನ್ನ ಆಯ್ಕೆ ಮಾಡಲಾಗಿತ್ತು, ಸಿಎಂ ವಿಚಾರವಾಗಿ ಬಿಜೆಪಿಯೂ ಕಾಂಗ್ರೆಸ್‌ ನಾಯಕರ ಕಾಲೆಳೆದಿದೆ.

ಹೌದು, ಸಿಎಂ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವ ಭಾರೀ ಪೈಪೋಟಿ ನಡೆದಿದ್ದು, ದೆಹಲಿಯಲ್ಲಿ ಹೈಕಮಾಂಡ್‌ ನಾಯಕರ ಮಟ್ಟದಲ್ಲಿ ಚರ್ಚೆ ನಡೆಸಿ ಕೊನೆಗೆ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದ್ದು, ಕೈ ಪಾಳಯದ ನಾಯಕರ ನಡುವೆ ಅಧಿಕಾರ ಹಂಚಿಕೆ ಕುರಿತು ಚರ್ಚೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

BJP Slams Congress Over Too Much Confusion in Karnataka Congress Leadership

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ 20 ದಿನ ಕಳೆದಿದ್ದು, ಈ ಮಧ್ಯ ಎರಡೂವರೆ ವರ್ಷಗಳ ಕಾಲ ಮಾತ್ರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿದ್ದು, ಇತ್ತ ರಾಜ್ಯ ಬಿಜೆಪಿಯೂ ಕಾಂಗ್ರೆಸ್‌ ಸರ್ಕಾರದ ವಿರುದ್ದ ವ್ಯಂಗ್ಯವಾಡಿದೆ. ನಮ್ಮ ರಾಜ್ಯದಲ್ಲಿ ಇಷ್ಟೊಂದು ಗೊಂದಲ ನಿರ್ಮಾಣ ಆಗಿದೆಯಾ ಛೇ ಎಂದು ಬಿಜೆಪಿ ಹೇಳಿದೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಕಗ್‌ ಸುರ್ಜೆವಾಲ ಅವರನ್ನ ಸೂಪರ್‌ ಸಿಎಂ, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನ ಶ್ಯಾಡೋ ಸಿಎಂ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ತಿಳಿಸಿದೆ. ಇತ್ತ ಡಿಸಿಎಂ ಡಿ ಕೆ ಶಿವಕುಮಾರ್‌ ಅವರನ್ನ ನಾನೇ ಸಿಎಂ, ಡಾ. ಜಿ ಪರಮೇಶ್ವರ್‌ ಸಹ ಈ ಹಿಂದೆ ಸಿಎಂ ಸ್ಥಾನದ ಮೇಲೆ ಕಣ್ಣೀಟ್ಟಿದು, ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಪರಮೇಶ್ವರ್‌ ಅವರ ಆಸೆಯನ್ನ ಬಿಜೆಪಿ ತಿಳಿಸಿದ್ದು, ನಮ್ಮ ರಾಜ್ಯದಲ್ಲಿ ಇಷ್ಟೊಂದು ಗೊಂದಲ ನಿರ್ಮಾಣ ಆಗಿದೆ! ಛೇ…ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಹೇಳಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮೈಸೂರು ಭಾಗದಲ್ಲಿ ಶ್ಯಾಡೋ ಸಿಎಂ ಆಗಿದ್ದಾರಾ? ಅಧಿಕಾರ ಮುಗಿದರೂ ಕಾರಿನಲ್ಲಿ ಎಂಎಲ್​ಎ ಪಾಸ್ ಜೊತೆ ಡಾ.ಯತೀಂದ್ರ ಅವರು ಓಡಾಡುತ್ತಿದ್ದಾರೆ. ‌ ಇತ್ತ ಸಚಿವ ಡಾ. ಜಿ ಪರಮೇಶ್ವರ್, ನಾನು ಯಾಕೆ ಸಿಎಂ ಆಗಬಾರದು. ಮುನಿಯಪ್ಪ ಯಾಕಾಗಬಾರದು? ಮಹದೇವಪ್ಪ ಯಾಕಾಗಬಾರದು? ನಮಗೆ ಸಿಎಂ ಆಗುವ ಅವಕಾಶಗಳನ್ನು ತಪ್ಪಿಸಿದ್ದಾರೆ ಎಂದು ಹೇಳುವ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.

English summary

CM Post fight in Congress: BJP Slams Congress Over Too Much Confusion in Karnataka Congress Leadership

Story first published: Wednesday, June 21, 2023, 16:18 [IST]

Source link