ಇಂಡಿಯನ್ ಸೂಪರ್ ಲೀಗ್ನಲ್ಲಿ (ISL 2025) ಬೆಂಗಳೂರು ಎಫ್ಸಿ ತಂಡವು ಫೈನಲ್ ಪ್ರವೇಶಿಸಿದೆ. ಎಫ್ಸಿ ಗೋವಾ (Bengaluru FC vs FC Goa) ವಿರುದ್ಧದ ಎರಡನೇ ಸೆಮಿಫೈನಲ್ ಪಂದ್ಯದ ಬಳಿಕ ಒಟ್ಟು ಗೋಲುಗಳ ಲೆಕ್ಕಚಾರದಲ್ಲಿ ಎದುರಾಳಿಯನ್ನು ಮಣಿಸಿದ ಬೆಂಗಳೂರು ಎಫ್ಸಿ ತಂಡವು ಐಎಸ್ಎಲ್ 2025ರ ಫೈನಲ್ನಲ್ಲಿ ಸ್ಥಾನ ಪಡೆದಿದೆ. ಸಾಕಷ್ಟು ನಾಟಕೀಯ ತಿರುವುಗಳನ್ನು ಕಂಡ ರೋಚಕ ಪಂದ್ಯದಲ್ಲಿ, ಕೊನೆಗೂ ಸುನಿಲ್ ಛೆಟ್ರಿ ಗಳಿಸಿದ ಆ ಒಂದು ಗೋಲಿನಿಂದಾಗಿ ಬೆಂಗಳೂರು ಎಫ್ಸಿ ಅಭಿಮಾನಿಗಳು ಗೆಲುವಿನ ಸಿಹಿ ಉಂಡಿದ್ದಾರೆ. ತಂಡಕ್ಕೆ ಈಗ ಐಎಸ್ಎಲ್ ಟ್ರೋಫಿ ಗೆಲುವಿಗೆ ಫೈನಲ್ ಗೆಲುವಿನ ಅಗತ್ಯವಿದೆ.