Tv
oi-Muralidhar S
By ಅನಿತಾ ಬನಾರಿ
|
ಹೌದು!
ದಶಕದ
ಹಿಂದೆ
ಕಲರ್ಸ್
ಕನ್ನಡ
ವಾಹಿನಿಯಲ್ಲಿ
ಪ್ರಸಾರವಾಗುತ್ತಿದ್ದ
‘ಮನೆದೇವ್ರು’
ಎಂಬ
ಧಾರಾವಾಹಿ
ಬಹಳಷ್ಟು
ಸಂಚಲನ
ಮೂಡಿಸಿತ್ತು.
ವರನಟ
ಡಾ.ರಾಜಕುಮಾರ್
ಪತ್ನಿ
ಪಾರ್ವತಿ
ರಾಜಕುಮಾರ್
ನಿರ್ಮಾಣದಲ್ಲಿ
‘ಮನೆದೇವ್ರು’
ಧಾರಾವಾಹಿ
ಮೂಡಿಬಂದಿತ್ತು.
ಈ
ಧಾರಾವಾಹಿ
ಕನ್ನಡದ
ಕಿರುತೆರೆ
ಪ್ರಿಯರ
ಮನೆ
ಗೆದ್ದಿತ್ತು.
‘ಮನೆದೇವ್ರು’
ಧಾರಾವಾಹಿಯಲ್ಲಿ
ನಾಯಕಿ
ಜಾನಕಿ
ಆಗಿ
ಅಭಿನಯಿಸಿದ್ದ
ಅರ್ಚನಾ
ಉತ್ತಮ
ನಟನೆಯ
ಮೂಲಕ
ಕಿರುತೆರೆಯಲ್ಲಿ
ಗುರುತಿಸಿಕೊಂಡಿದ್ದರು.
‘ಮನೆದೇವ್ರು’
ಧಾರಾವಾಹಿಯ
ನಂತರ
‘ನೀಲಿ’
ಧಾರಾವಾಹಿಯಲ್ಲಿ
ದೇವತೆಯಾಗಿ
ಕಾಣಿಸಿಕೊಂಡಿದ್ದ
ಅರ್ಚನಾ
ಒಂದೆರಡು
ತಮಿಳು
ಧಾರಾವಾಹಿಗಳಲ್ಲಿಯೂ
ಬಣ್ಣ
ಹಚ್ಚಿದ್ದರು.
ಮೂಲತಃ
ಬೆಂಗಳೂರಿನವರಾದ
ಅಮೆರಿಕಾ
ನಿವಾಸಿ
ವಿಘ್ನೇಶ್
ಶರ್ಮಾ
ಅವರೊಂದಿಗೆ
ದಾಂಪತ್ಯ
ಜೀವನಕ್ಕೆ
ಕಾಲಿರಿಸಿದ
ಅರ್ಚನಾ
ಇದೀಗ
ನಟನೆಯಿಂದ
ದೂರವಿದ್ದಾರೆ.
ನಾಯಕಿಯಾಗಿ
ಕಿರುತೆರೆಗೆ
ಎಂಟ್ರಿ
ಖಳನಾಯಕಿಯಾಗಿ
ಫೇಮಸ್
ಆದ
ಈ
ನಟಿ
ಯಾರು?
ಹಿನ್ನೆಲೆಯೇನು?
ಸಿಹಿ
ಸುದ್ದಿ
ನೀಡಿದ
ಅರ್ಚನಾ
‘ಮನೆದೇವ್ರು’
ಧಾರಾವಾಹಿಯ
ನಂತರ
ಕಿರುತೆರೆಯಿಂದ
ದೂರವಿರುವ
ಅರ್ಚನಾ
ಸೋಶಿಯಲ್
ಮೀಡಿಯಾದ
ಮೂಲಕ
ಕಿರುತೆರೆ
ವೀಕ್ಷಕರ
ಸಂಪರ್ಕದಲ್ಲಿದ್ದಾರೆ.
ಆಗಾಗ
ತಮ್ಮ
ಫೋಟೋಗಳನ್ನು
ಶೇರ್
ಮಾಡುತ್ತಿರುವ
ನಟಿ
ಅರ್ಚನಾ
ಸಿಹಿ
ಸುದ್ದಿಯೊಂದನ್ನು
ಹಂಚಿಕೊಂಡಿದ್ದಾರೆ.
ಸದ್ಯದಲ್ಲೇ
ತಾವು
ತಾಯಿಯಾಗುವ
ಸಂಭ್ರಮವನ್ನು
ಅಭಿಮಾನಿಗಳೊಂದಿಗೆ
ಇನ್ಸ್ಟಾಗ್ರಾಮ್‌ನಲ್ಲಿ
ಹಂಚಿಕೊಂಡಿದ್ದಾರೆ.
ಶುಭಾಶಯಗಳ
ಸುರಿಮಳೆ
ಪತಿಯ
ಜೊತೆ
ತಮ್ಮ
ಫೋಟೋವನ್ನು
ಹಾಕಿಕೊಂಡಿರುವ
ಈಕೆ,
ಚಿಕ್ಕದೊಂದು
ಕ್ಯಾಪ್ಶನ್
ಮೂಲಕ
ತಾವು
ತಂದೆ-ತಾಯಿಯಾಗುವುದನ್ನು
ಹೇಳಿಕೊಂಡಿದ್ದಾರೆ.
ವಿಷಯ
ತಿಳಿಯುತ್ತಿದ್ದಂತೆ
ನೆಟ್ಟಿಗರು
ಬಹಳಷ್ಟು
ಸಂಭ್ರಮ
ವ್ಯಕ್ತಪಡಿಸಿದ್ದು
ಬಹಳಷ್ಟು
ಶುಭಾಶಯಗಳ
ಸುರಿಮಳೆಯೇ
ಕಮೆಂಟ್
ಸೆಕ್ಷನ್
ತುಂಬಾ
ಸುರಿದಿದೆ.
ಅರ್ಚನಾ
ಶರ್ಮಾ
ಅವರ
ಕುಟುಂಬಸ್ಥರು
ಅಭಿಮಾನಿಗಳು
ಸಹ-ನಟರು
ಇತರೆ
ಸ್ನೇಹಿತರೆಲ್ಲರೂ
ಕಮೆಂಟ್‌ನಲ್ಲಿ
ಶುಭಕೋರುವ
ಮೂಲಕ,
ಹುಟ್ಟುವ
ಮಗುವಿಗೂ
ಹಾಗೂ
ದಂಪತಿಗೂ
ಒಳ್ಳೆಯದಾಗಲಿ
ಎಂದು
ಆಶಿಸಿದ್ದಾರೆ.
ಮನಸೆಳೆದಿದ್ದ
‘ಮನೆದೇವ್ರು’
ಧಾರಾವಾಹಿ
‘ಮನೆದೇವ್ರು’
ಧಾರಾವಾಹಿಯಲ್ಲಿ
ಜಯ್
ಡಿಸೋಜಾಗೆ
ಜೋಡಿಯಾಗಿ
ಅರ್ಚನಾ
ಶರ್ಮ
ಕಾಣಿಸಿಕೊಂಡಿದ್ದರು.
ಮುದ್ದಾದ
ಲವ್
ಸ್ಟೋರಿಯನ್ನು
ಹೊಂದಿದ್ದ
ಈ
ಧಾರಾವಾಹಿಯಲ್ಲಿ,
ಪ್ರೀತಿಸಿದವನನ್ನೇ
ಮದುವೆಯಾಗುವ
ನಾಯಕಿ,
ನಾಯಕನ
ವೈಯಕ್ತಿಕ
ಜೀವನ
ಹಾಗೂ
ಕೌಟುಂಬಿಕ
ಸಮಸ್ಯೆಗಳನ್ನು
ಯಶಸ್ವಿಯಾಗಿ
ಸರಿಪಡಿಸುವಂತಹ
ಕಥೆ
ಇದಾಗಿತ್ತು.
ಪತಿಯನ್ನು
ಮನೆದೇವ್ರು
ಎಂದು
ಸಂಬೋಧಿಸುವ
ಮೂಲಕ
ಈ
ಧಾರಾವಾಹಿ
ಒಂದೊಳ್ಳೆಯ
ಸಾಂಸಾರಿಕ
ಜೀವನಕ್ಕೆ
ಉದಾಹರಣೆಯನ್ನು
ಕೊಡುವ
ಪ್ರಯತ್ನ
ಮಾಡಿತ್ತು.
ನಟ
ಡಾ.
ಶಿವರಾಜಕುಮಾರ್
ಹಾಗೂ
ದಿವಂಗತ
ನಟ
ಡಾ.
ಪುನೀತ್
ರಾಜಕುಮಾರ್
ಅವರು
ಈ
ಧಾರಾವಾಹಿ
ಪ್ರಮೋಷನ್‌ನಲ್ಲಿ
ಕಾಣಿಸಿಕೊಂಡಿದ್ದು
ಬಹಳ
ವಿಶೇಷವಾಗಿತ್ತು.
English summary
Manedevru Kannada Serial Fame Archana Sharma Shared The Joy Of Becoming A Mother, know more.
Wednesday, June 21, 2023, 16:07
Story first published: Wednesday, June 21, 2023, 16:07 [IST]