Bengaluru
oi-Malathesha M
ಬೆಂಗಳೂರು: ಐಟಿ ಸಿಟಿ ಬೆಂಗಳೂರು ಅಂದ್ರೆ ಜಗತ್ತಿನಾದ್ಯಂತ ಖ್ಯಾತಿ ಪಡೆದ ನಗರ. ಹೀಗೆ ಗಾರ್ಡನ್ ಸಿಟಿ ಅಂತಲೂ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಮತ್ತೊಂದು ಮಾಲ್ ಇದೀಗ ಅನಾವರಣಗೊಂಡಿದೆ. ಎಲ್ಲಾ ವರ್ಗಕ್ಕೂ ಅನುಕೂಲವಾಗುವ ಉದ್ದೇಶದಿಂದ ಬೆಂಗಳೂರಲ್ಲಿ ಮೊದಲ ಕಮ್ಯುನಿಟಿ ಮಾಲ್ ‘ಗ್ಲೋಬಲ್ ಡಿವಿನಿಟಿ’ ಇಂದು ಉದ್ಘಾಟನೆಯಾಗಿದೆ.
ಅಂದಹಾಗೆ ಮೈಸೂರು ರಸ್ತೆಯಲ್ಲಿ ವಿಶ್ವದರ್ಜೆ ಮಾಲ್‌ನ ನಟ ಕಿಚ್ಚ ಸುದೀಪ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರು ಉದ್ಘಾಟಿಸಿದ್ರು. ಪ್ರತಿಷ್ಠಿತ ಕಂಪನಿಗಳ ಮಳಿಗೆಯಿಂದ ಬಟ್ಟೆ ಹಾಗೂ ದಿನಸಿ ಖರೀದಿಗೆ ವ್ಯವಸ್ಥೆ ಇಲ್ಲಿರಲಿದೆ. ಡಿಜಿಟಲ್ ಮಳಿಗೆಯು ಸೇರಿದಂತೆ ಪಿವಿಆರ್ ಸಿನಿಮಾ, ಫುಡ್ ಕೋರ್ಟ್ ಮತ್ತು ಪ್ಲೇ ಝೋನ್ ಸೇರಿ ಎಲ್ಲಾ ವರ್ಗದವರಿಗೂ ಸಲ್ಲುವ ಮಾಲ್ ಇದಾಗಿದೆ. ಹೀಗೆ ಮತ್ತೊಂದು ಸ್ಪೆಷಲ್ ಜಾಗ ಬೆಂಗಳೂರಿನ ನಿವಾಸಿಗಳಿಗೆ ಸಿಕ್ಕಂತಾಗಿದೆ.
ಬೆಂಗಳೂರಿನ ಸ್ಪೆಷಲ್ ಮಾಲ್ ಲೋಕಾರ್ಪಣೆ
ಕಮ್ಯುನಿಟಿ ಮಾಲ್ ‘ಗ್ಲೋಬಲ್ ಡಿವಿನಿಟಿ’ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಲ್ಲಿ ಅನೇಕ ಮಾಲ್‌ಗಳು ಇವೆ. ಆದ್ರೆ ಇದು ಮೊದಲ ಕಮ್ಯುನಿಟಿ ಮಾಲ್. ಇಲ್ಲಿ ಮನರಂಜನೆ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಇಲ್ಲಿ 7 ಸಿನಿಮಾ ಸ್ಕ್ರೀನ್‌ಗಳು ಇದ್ದು, ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಕಾರಣ ಮಾಲ್ ಆರಂಭಿಸಲಾಗಿದೆ. ನಿಮ್ಮ ಆಶೀರ್ವಾದ ಸಹಕಾರ ಇರಲಿ. ನನಗೆ ವೈಯಕ್ತಿಕ ಜೀವನ ಹಾಗೂ ರಾಜಕೀಯವಾಗಿ ಸಹಕಾರ ನೀಡಿರುವ ಎಲ್ಲರಿಗೂ ಧನ್ಯವಾದ ಎಂದರು ಡಿಸಿಎಂ.
Bengaluru: ವಾರ್ಷಿಕ 4000 ಟನ್ ತ್ಯಾಜ್ಯ ಉತ್ಪಾದನೆ, ಏಕ ಬಳಕೆ ಪ್ಲಾಸ್ಟಿಕ್ ಉಪಯೋಗಿಸದಂತೆ ಬಿಬಿಎಂಪಿ ಮನವಿ
ತಂದೆಗೆ ತಕ್ಕ ಮಗಳು!
ನಟ ಕಿಚ್ಚ ಸುದೀಪ್, ಮನರಂಜನೆ ಕ್ಷೇತ್ರಕ್ಕೆ ನಿಮ್ಮ ಪ್ರಯತ್ನಕ್ಕೆ ಅಭಿನಂದನೆ ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಎಂದು ಶುಭ ಕೋರಿದರು. ಹಾಗೇ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿ, ಯಾವುದೇ ಕೆಲಸ ಮಾಡುವಾಗ ಉದ್ದೇಶ ಚೆನ್ನಾಗಿರಬೇಕು. ಇವರ ಉದ್ದೇಶವೂ ಚೆನ್ನಾಗಿದ್ದು, ಯಶಸ್ವಿಯಾಗಲಿದೆ. ಐಶ್ವರ್ಯ ಅವರನ್ನು ಇಂದು ನೋಡಿದೆ. ಆಕೆ ತಂದೆಗೆ ತಕ್ಕ ಮಗಳು. ಈ ಮಾಲ್‌ಗೆ ಡಿವಿನಿಟಿ ಎಂಬ ಹೆಸರು ಉತ್ತಮವಾಗಿದೆ. ಎಲ್ಲರಿಗೂ ಅವಕಾಶ ಮಾಡಿಕೊಟ್ಟಿರುವುದು ಉತ್ತಮ ಪ್ರಯತ್ನ, ನಿಮಗೆ ಒಳ್ಳೆಯದಾಗಲಿ ಎಂದರು. ಇದೇ ವೇಳೆ ಅತಿಥಿಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಾಡೋ ಪ್ಲೇ ಉತ್ಪನ್ನವನ್ನು ಬಿಡುಗಡೆ ಮಾಡಿದರು.
ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ನಡೆದ ‘ಗ್ಲೋಬಲ್ ಡಿವಿನಿಟಿ ಮಾಲ್’ ಉದ್ಘಾಟನೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು. ಹಾಗೇ ಗ್ಲೋಬಲ್ ಮಾಲ್ ನಿರ್ದೇಶಕಿ ಐಶ್ವರ್ಯಾ ಹೆಗ್ಡೆ, ಉಷಾ ಶಿವಕುಮಾರ್, ಮಂಜುಳಾ, ಸತ್ವ ಗ್ರೂಪ್ ಉಪಾಧ್ಯಕ್ಷ ಮಹೇಶ್ ಖೇತಾನ್ ಕೂಡ ಇದೇ ಸಂದರ್ಭದಲ್ಲಿ ಹಾಜರಿದ್ದರು.
English summary
Global Divinity mall inauguration in Bengaluru by film stars.
Story first published: Saturday, June 24, 2023, 21:46 [IST]