ಸಿಟ್ಟು ಬಿಟ್ಟು ಒಂದಾಗೋಣ ಬಾ ಅಂತಿವೆ ಚೀನಾ & ಅಮೆರಿಕ: ದಿಢೀರ್ ಸ್ನೇಹ ರಾಗದ ಹಿಂದೆ ಅಮೆರಿಕದ ಯುದ್ಧ ತಂತ್ರ? | Antony Blinken meets China president Xi Jinping in Beijing

International

oi-Malathesha M

|

Google Oneindia Kannada News

ಬೀಜಿಂಗ್: ಅಮೆರಿಕ & ಚೀನಾ ಮಧ್ಯೆ ಏನೂ ಸರಿ ಇಲ್ಲ. ಅದರಲ್ಲೂ ಟ್ರಂಪ್ ಅಮೆರಿಕದ ಚುಕ್ಕಾಣಿ ಹಿಡಿದ ಬಳಿಕ ಎರಡೂ ದೇಶಗಳ ನಡುವೆ ಬೆಂಕಿ ಹೊತ್ತಿ ಉರಿಯುತ್ತಿದೆ. ಈ ಹಿನ್ನೆಲೆ ಶಾಂತಿ ಸ್ಥಾಪನೆ ಮಾಡಲು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚೀನಾಗೆ ಭೇಟಿ ಕೊಟ್ಟಿದ್ದಾರೆ. ಆದರೆ ಅಮೆರಿಕದ ದಿಢೀರ್ ಸ್ನೇಹ ರಾಗದ ಹಿಂದೆ ಯುದ್ಧ ತಂತ್ರವೂ ಅಡಗಿದೆಯಾ? ಎಂಬ ಅನುಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲ್‌ಚಲ್ ಎಬ್ಬಿಸಿದೆ.

ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಅಮೆರಿಕ & ಚೀನಾ ನಡುವೆ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಒಂದಷ್ಟು ನೆಮ್ಮದಿ ನೀಡಿದೆ. ಹಾಗೇ ಇನ್ನೊಂದ್ಕಡೆ ಈ ಭೇಟಿಯಲ್ಲಿ ಬೇರೆಯದ್ದೇ ರಣತಂತ್ರ ಇದೆ ಎಂಬ ಮಾತು ಕೇಳಿಬರುತ್ತಿದೆ. ಅದ್ರಲ್ಲೂ ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಈ ಘಟನೆ ಜಗತ್ತಿನ ಗಮನ ಸೆಳೆದಿದೆ. ರಷ್ಯಾ ಜೊತೆ ಆತ್ಮೀಯವಾಗಿರುವ ಚೀನಾ ತಮ್ಮ ಪರ ಬರಲಿ ಅನ್ನೋದೆ ಅಮೆರಿಕದ ನಾಯಕರ ಆಸೆ. ಈ ಕಾರಣಕ್ಕೆ ಬ್ಲಿಂಕನ್ ಚೀನಾಗೆ ಭೇಟಿ ನೀಡಿದ್ರಾ? ಸಂಪೂರ್ಣ ಮಾಹಿತಿ ಇಲ್ಲಿದೆ.

Antony Blinken meets China president Xi Jinping in Beijing

ಚೀನಾ ಜೊತೆ ಗಂಭೀರ ಚರ್ಚೆ!

ತೈವಾನ್‌ ಜೊತೆಗಿನ ವ್ಯಾಪಾರ ಸಂಬಂಧ ಸೇರಿ ಚೀನಾ ಮಾನವ ಹಕ್ಕುಗಳ ಸ್ಥಿತಿಗತಿ, ದಕ್ಷಿಣ ಚೀನಾ ಸಾಗರದಲ್ಲಿ ಚೀನಾ ಸೇನೆ ಚಟುವಟಿಕೆ, ಉಕ್ರೇನ್ & ರಷ್ಯಾ ಸಂಘರ್ಷ ಹಾಗೂ ಎರಡೂ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯದ ಹಲವು ವಿಚಾರಗಳು ಭೇಟಿಯಲ್ಲಿ ಚರ್ಚೆಯಾಗಿವೆ ಎನ್ನಲಾಗಿದೆ. ಹಾಗೇ ನಿನ್ನೆ ಚೀನಾ ವಿದೇಶಾಂಗ ಸಚಿವ ಕಿನ್ ಗಾಂಗ್, ರಾಜತಾಂತ್ರಿಕ ವಾಂಗ್ ಯಿ ಭೇಟಿ ಮಾಡಿ ಮಾತುಕತೆ ನಡೆಸಿದ್ದ ಆ್ಯಂಟನಿ ಬ್ಲಿಂಕೆನ್, ಇಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆ ಚರ್ಚೆ ಮಾಡಿದ್ದಾರೆ. ಮುಂದಿನ ವರ್ಷ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಇದ್ದು, ಈ ಬೆನ್ನಲ್ಲೇ ಬ್ಲಿಂಕೆನ್ ಭೇಟಿ ಸಾಕಷ್ಟು ಗಮನ ಸೆಳೆದಿದೆ.

3ನೇ ಮಹಾಯುದ್ಧ: ತೈವಾನ್‌ ನಾಶಕ್ಕೆ ಚೀನಾ ರಣಕಹಳೆ?3ನೇ ಮಹಾಯುದ್ಧ: ತೈವಾನ್‌ ನಾಶಕ್ಕೆ ಚೀನಾ ರಣಕಹಳೆ?

ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ?

ಹೌದು, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚೀನಾದ ಭೇಟಿಯ ಹಿಂದೆ ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ಇದೆ ಎನ್ನಲಾಗುತ್ತಿದೆ. ಏಕೆಂದರೆ ರಷ್ಯಾ ಪರವೇ ಚೀನಾ ನಿಂತಿದೆ. ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳು ಪರೋಕ್ಷವಾಗಿ ಅದೆಷ್ಟೇ ಪ್ರಯತ್ನ ಮಾಡಿದ್ರೂ ಚೀನಾ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಹೀಗಾಗಿ ಉಕ್ರೇನ್ ಪರ ಚೀನಾ ನಿಲ್ಲುವಂತೆ ಮಾಡಲು ಪ್ರಯತ್ನಗಳು ಸಾಗಿವೆ ಎಂಬ ಮಾತು ಓಡಾಡುತ್ತಿದೆ. ಬ್ಲಿಂಕೆನ್ ಭೇಟಿ ವೇಳೆ ಈ ವಿಚಾರ ಕೂಡ ಪ್ರಸ್ತಾಪ ಆಗಿತ್ತಾ? ಅನ್ನೋ ಮಾಹಿತಿ ಕನ್ಫರ್ಮ್ ಆಗುತ್ತಿಲ್ಲ ಹಾಗೂ ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ ಉಕ್ರೇನ್ & ರಷ್ಯಾ ವಿಚಾರವನ್ನ ಪರೋಕ್ಷವಾಗಿ ದೊಡ್ಡಣ್ಣ ಈ ಭೇಟಿಯಲ್ಲಿ ಚೀನಾ ಎದುರು ಇಟ್ಟಿರೋದು ಮಾತ್ರ ಪಕ್ಕಾ.

ಅಮೆರಿಕ ಸಕ್ಸಸ್ ಆಯ್ತಾ? ಇಲ್ವಾ?

ತೈವಾನ್ ಹಾಗೂ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಅಮೆರಿಕ ಎಂಟ್ರಿ ಆದ ಬಳಿಕ ಚೀನಾ ರೊಚ್ಚಿಗೆದ್ದಿದೆ. ಎರಡೂ ದೇಶದ ನಡುವೆ ಯುದ್ಧ ನಡೆಯುತ್ತಾ? ಅನ್ನೋ ಅನುಮಾನ ಕೂಡ ಮೂಡುವಂತಾಗಿತ್ತು. ಅಮೆರಿಕ & ಚೀನಾ ಎರಡೂ ಬಲಿಷ್ಠ ರಾಷ್ಟ್ರಗಳು. ಜಗತ್ತಿನ ನಂಬರ್ 1 ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ದೇಶಗಳು. ಸ್ಥಿತಿ ಹೀಗಿದ್ದಾಗ ಇಬ್ಬರ ನಡುವೆ ಕಿತ್ತಾಟ ಬಲು ಜೋರಾಗಿ ನಡೆಯುತ್ತಿದೆ. ಹೀಗೆ ವಿಶ್ವದ 2 ದೊಡ್ಡ ಆರ್ಥಿಕ ದೇಶಗಳಾದ ಅಮೆರಿಕ & ಚೀನಾ ನಡುವೆ ನಿರಂತರ ಸಂಘರ್ಷ ಏರ್ಪಟ್ಟಿದೆ. ಆದರೆ ಇಬ್ಬರ ಸಿಟ್ಟು ಶಮನಕ್ಕೆ ಪ್ರಯತ್ನವೆಂಬಂತೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಚೀನಾಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಅಮೆರಿಕ ಅಂದುಕೊಂಡಿದ್ದು ನಡೆಯದೇ ಇದ್ದರೂ, ಭೇಟಿಯ ನಂತರ ಪರಿಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಗುವುದು ಗ್ಯಾರಂಟಿ (Antony Blinken).

Antony Blinken meets China president Xi Jinping in Beijing

ಒಟ್ನಲ್ಲಿ ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ವಹಿಸಿಕೊಂಡ ಬಳಿಕ ಹಾಗೂ ಕಳೆದ 5 ವರ್ಷದಲ್ಲಿ ಚೀನಾ ಪ್ರವಾಸ ಕೈಗೊಂಡ ಅಮೆರಿಕದ ಮೊದಲ ಉನ್ನತ ಅಧಿಕಾರಿ ಆ್ಯಂಟನಿ ಬ್ಲಿಂಕೆನ್. ಏಕೆಂದರೆ ಎರಡೂ ದೇಶಗಳ ನಡುವೆ ದ್ವೇಷದ ಬೆಂಕಿ ಹೊತ್ತಿ ಉರಿಯುತ್ತಿದೆ. ಈ ಕಾರಣಕ್ಕೆ ಎರಡೂ ರಾಷ್ಟ್ರಗಳು ಕೆಂಡ ಕಾರುತ್ತಿದ್ದವು. ಅದ್ರಲ್ಲೂ ಕೆಲವು ತಿಂಗಳ ಹಿಂದಷ್ಟೇ ಚೀನಾದ ಬೇಹುಗಾರಿಕಾ ಬಲೂನ್ ಅನ್ನು ಅಮೆರಿಕ ಹೊಡೆದುರುಳಿಸಿತ್ತು. ನಂತರ ಹಲವು ಗಂಭೀರ ಘಟನೆಗಳು ನಡೆದಿದ್ದವು. ಇದೀಗ ಬ್ಲಿಂಕೆನ್ ಭೇಟಿ ಒಂದಷ್ಟು ನೆಮ್ಮದಿ ನೀಡಿದೆ. ಆದರೆ ಚೀನಾ ತನ್ನ ನಿಲುವಿನಲ್ಲಿ ಬದಲಾವಣೆ ತೆಗೆದುಕೊಳ್ಳುವುದು ಕಷ್ಟವೇ ಸರಿ.

English summary

Antony Blinken meets China president Xi Jinping in Beijing.

Story first published: Monday, June 19, 2023, 21:17 [IST]

Source link