ಸಿಎಂ ಸಿದ್ದರಾಮಯ್ಯ ಗೆ ಫುಲ್‌ ಟೆನ್ಶನ್‌; ಸಿದ್ದು ಮುಂದಿದೆ ಸವಾಲುಗಳ ಸರಣಿ! | CM Siddaramaiah Has Lot Of Challenges As Chief Minister

Karnataka

oi-Reshma P

|

Google Oneindia Kannada News

ಬೆಂಗಳೂರು, ಜೂನ್‌ 26: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಲು ಸಾಲು ಸರಣಿ ಎದುರಾಗಿವೆ.

ಎರಡನೇ ಬಾರೀ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು, ಹಿಂದಿನಂತೆ ಈ ಬಾರೀ ಯಶಸ್ವಿಯಾಗಿ ಆಡಳಿತವನ್ನ ನಿರ್ವಹಿಸಲು ಪಣತೊಟ್ಟಿದ್ದು, ಸಿದ್ದರಾಮಯ್ಯರ ಮುಂದೆ ಅನೇಕ ಸವಾಲುಗಳು ಎದುರಾಗಿವೆ. ಅಲ್ಲದೇ ಶತಾಯಗತಾಯ ಎಲ್ಲವನ್ನೂ ಯಶಸ್ವಿಗೊಳಿಸುವ ಚಿಂತನೆಯಲ್ಲಿ ಸಿಎಂ ಸಿದ್ದರಾಮಯ್ಯ ಹೊಂದಿದ್ದಾರೆ ಎನ್ನಲಾಗಿದೆ.

CM Siddaramaiah Has Lot Of Challenges As Chief Minister

ಈಗಾಗಲೇ ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ ಗ್ಯಾರಂಟಿಗಳನ್ನ ಜಾರಿಗೊಳಿಸುವಲ್ಲಿ ಆರಂಭದಲ್ಲೇ ಸಮಸ್ಯೆಗಳು ಎದುರಾಗಿದ್ದು, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಮಾಡಲು ಸಿದ್ದರಾಮಯ್ಯ ಹಲವು ಸರಣಿ ಸಭೆಗಳನ್ನ ನಡೆಸುತ್ತಿದ್ದಾರೆ. ಇನ್ನೂ ಚುನಾವಣಾ ಪ್ರಚಾರದ ವೇಳೆ ರಾಜ್ಯಾದ್ಯಂತ ಪ್ರವಾಸವನ್ನ ಮಾಡಿದ್ದ ಸಿದ್ದರಾಮಯ್ಯ , ಮುಖ್ಯಮಂತ್ರಿಯಾದ ಬಳಿಕ ರಾಜ್ಯ ಪ್ರತಿ ಜಿಲ್ಲೆಯ ಪ್ರವಾಸವನ್ನ ಮಾಡುವುದಾಗಿ ಪ್ಲಾನ್‌ ನಡೆಸಿದ್ರು. ಆದರೆ, ಗ್ಯಾರಂಟಿ ಘೋಷಣೆಗಳ ಅನುಷ್ಠಾನವೇ ದೊಡ್ಡ ತಲೆನೋವಾಗಿದ್ದು, ಜಿಲ್ಲಾ ಪ್ರವಾಸಕ್ಕೂ ತೆರಳದೇ ಗ್ಯಾರೆಂಟಿ ಘೋಷಣೆಗಳ ಅನುಷ್ಠಾನದಲ್ಲೇ ಬ್ಯುಸಿಯಾಗಿದ್ದಾರೆ.

ಗ್ಯಾರೆಂಟಿ ಅನುಷ್ಠಾನಗಳ ನಡುವೆ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ ಎನ್ನುವ ಆರೋಪಗಳ ಮಧ್ಯ, ಬಜೆಟ್‌ ಮಂಡನೆ ಕುರಿತು ಹಲವು ತಯಾರಿಯನ್ನ ಸಿದ್ದರಾಮಯ್ಯ ನಡೆಸಿದ್ದಾರೆ.
ಗ್ಯಾರೆಂಟಿ ಘೋಷಣೆಗಳಿಗೆ ಹಣ ಒದಗಿಸುವ ನಿಟ್ಟಿನಲ್ಲಿ ಸಿಎಂ ಚಿಂತನೆ ನಡೆಸಿದ್ದಾರೆ. ರಾಜ್ಯದಲ್ಲಿ ಒಂದು ತಿಂಗಳು ಕಳೆದರು ಶೇ 10 ರಷ್ಟು ಬಿತ್ತನೆಯಾಗಿದ್ದು, ರಾಜ್ಯದ ಹಲವೆಡೆ ನೀರಿನ ಅಭಾವದಿಂದ ಬರ ಸೃಷ್ಟಿ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೂ ಕೂಡ ಸಕಲ ಸಿದ್ದತೆಗಳ ಬಗ್ಗೆ ಸೂಚನೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.

ಇನ್ನೂ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಕಾಳಗ ಏರ್ಪಟ್ಟಿದೆ. ಗ್ಯಾರಂಟಿ ಭರವಸೆಗಳನ್ನ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ನಾಯಕರಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.

ವಿಧಾನಸಭಾ ಚುನಾವಣಾ ಗೆಲುವಿನ ಬಳಿಕ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಲೆಕ್ಕಾಚಾರವನ್ನ ಹಾಕಿಕೊಂಡಿರುವ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು, ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್‌ ಜೊತೆಗೆ ಚರ್ಚೆ ನಡೆಸಿದ್ದು, ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರವನ್ನ ಕಾಂಗ್ರೆಸ್‌ ಹಾಕಿಕೊಂಡಿದ್ದೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣಾ ದೃಷ್ಟಿಯಿಂದಲೂ ಜಿಲ್ಲಾವಾರು ಕೇಂದ್ರಿಕರಿಸುವ ಪ್ಲಾನ್‌ ಹಾಕಿಕೊಂಡಿದ್ದು, ಅನೇಕ ಆಯಾಮಗಳಿಂದ ಸಿದ್ದರಾಮಯ್ಯ ಮುಂದೆ ಹಲವು ಸವಾಲು ಎದುರಾಗಿದೆ.

English summary

Big challenges ahead for Karnataka CM Siddaramaiah

Story first published: Monday, June 26, 2023, 20:53 [IST]

Source link