ಸಿಎಂ ತವರು ಜಿಲ್ಲೆಯಲ್ಲೇ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ -103, ತಾಲೂಕುವಾರು ದತ್ತಾಂಶ ಇಲ್ಲಿದೆ | Children Suffering from Nutrients Deficiency Taluk Wise Statistics of Mysore Disctrict

Mysuru

oi-Madhusudhan KR

By ಮೈಸೂರು ಪ್ರತಿನಿಧಿ

|

Google Oneindia Kannada News

ಮೈಸೂರು, ಜೂನ್‌, 26: ಮುಖ್ಯಮಂತ್ರಿ ತವರು ಜಿಲ್ಲೆಯಾದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 103 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ

ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೈಸೂರು ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಗರ್ಭಾವಸ್ಥೆಯಲ್ಲಿದ್ದಾಗಿನ ಪೌಷ್ಟಿಕ ಆಹಾರದ ಕೊರತೆ, ಅವಧಿ ಪೂರ್ವ ಜನನ ಸೇರಿದಂತೆ ನಾನಾ ಕಾರಣಗಳಿಂದ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುತ್ತಿದ್ದಾರೆ.

Children Suffering from Nutrients Deficiency

ಅಪೌಷ್ಠಿಕತೆಗೆ ಕಾರಣ ಏನು?

ಹುಟ್ಟಿನಿಂದ ಮಕ್ಕಳನ್ನು ಕಾಡುವ ಹೃದಯ ಸಂಬಂಧಿ ಕಾಯಿಲೆಗಳು, ಬೌದ್ಧಿಕ ವಿಕಲಾಂಗತೆಯಿಂದ ಶೇಕಡಾ 50ರಷ್ಟು ಅಪೌಷ್ಟಿಕತೆ ಕಂಡುಬರುತ್ತಿದೆ. ಪೌಷ್ಟಿಕ ಆಹಾರದ ಬದಲು ಮಕ್ಕಳು ಸೇವಿಸುವ ಜಂಕ್ ಫುಡ್ ಕೂಡ ಶೇಕಡಾ 25ರಷ್ಟು ಅಪೌಷ್ಟಿಕ ಪ್ರಕರಣಗಳಿಗೆ ದಾರಿ ಮಾಡಿಕೊಟ್ಟರೆ, ಶೇಕಡಾ 10ರಷ್ಟು ಕುಟುಂಬದ ಆರ್ಥಿಕತೆ ಕಾರಣಕ್ಕೆ ಆಹಾರ ಸಮಸ್ಯೆ ಉಂಟಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಒಂಬತ್ತು ತಾಲೂಕುಗಳ ವ್ಯಾಪ್ತಿಯಲ್ಲಿ ಮೈಸೂರು ತಾಲೂಕು, ನಂಜನಗೂಡು, ಕೆ.ಆರ್.ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆತಂಕಕಾರಿ ಆಗಿದೆ. “ಮೈಸೂರು ಜಿಲ್ಲೆಯಲ್ಲಿ ಕಂಡುಬರುವ ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಪೌಷ್ಟಿಕ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಆಗಾಗ ತಪಾಸಣೆ ನಡೆಸಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ನೀಡಲಾಗುತ್ತಿದೆ” ಎಂದು‌ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಹೇಳಿದರು.

ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು

ಮಕ್ಕಳ ಅಪೌಷ್ಟಿಕತೆ ನಿರ್ಮೂಲನೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ಮೊಬೈಲ್ ತಂಡಗಳ ಮೂಲಕ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದೆ. ಆದರೂ ಸಾಕಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಹಿನ್ನೆಲೆ ವೈದ್ಯರು ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕಿದೆ.

ನೂರರ ಗಡಿ ದಾಟಿದ ಬೀನ್ಸ್‌, ಮೆಣಸಿನಕಾಯಿ ದರ: ಯಾವ ತರಕಾರಿಗೆ ಎಷ್ಟು ಬೆಲೆ?ನೂರರ ಗಡಿ ದಾಟಿದ ಬೀನ್ಸ್‌, ಮೆಣಸಿನಕಾಯಿ ದರ: ಯಾವ ತರಕಾರಿಗೆ ಎಷ್ಟು ಬೆಲೆ?

ಜಿಲ್ಲೆಯಲ್ಲಿ ಮೇ ಅಂತ್ಯದ ವರದಿ ಅನ್ವಯ 2,427 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮೈಸೂರು ತಾಲೂಕು, ಹುಣಸೂರು ಮತ್ತು ತಿ.ನರಸೀಪುರ ವ್ಯಾಪ್ತಿಯಲ್ಲಿ ಇಂತಹ ಮಕ್ಕಳ ಸಂಖ್ಯೆ ಹೆಚ್ಚಿದೆ. ಇನ್ನು “ಮೈಸೂರು ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಅಪೌಷ್ಟಿಕತೆ ನಿರ್ವಹಣೆಗೆ ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜು ಹೇಳಿದರು.

ತಾಲೂಕುವಾರು ತೀವ್ರ ಅಪೌಷ್ಠಿಕ ಮಕ್ಕಳು

ತಿ.ನರಸೀಪುರ – 8

ಹುಣಸೂರು – 7

ಎಚ್.ಡಿ.ಕೋಟೆ – 11

ಮೈಸೂರು ನಗರ – 8

ನಂಜನಗೂಡು – 18

ಬಿಳಿಗೆರೆ – 8

ಪಿರಿಯಾಪಟ್ಟಣ – 13

ಕೆ.ಆರ್. ನಗರ – 15

ಮೈಸೂರು ಗ್ರಾಮಾಂತರ – 15

ಮೈಸೂರು ಜಿಲ್ಲೆಯಲ್ಲಿ ಒಟ್ಟು – 103 ಮಕ್ಕಳು ಅಪೌಷ್ಟಿಕತೆಯಿದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗೆ ಮೈಸೂರು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆರ್ಥಿಕ ಸಮಸ್ಯೆ, ಆಹಾರ ಕೊರತೆಯಿಂದ ಎಷ್ಟೋ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವ ಉದಾಹರಣೆಗಳು ಇವೆ. ಇದರಿಂದ ಎಚ್ಚತ್ತೆ ಆರೋಗ್ಯ ಇಲಾಖೆ ಇದೀಗ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪತ್ತೆಹಚ್ಚುವ ಕೆಲಸವನ್ನು ಮಾಡುತ್ತಿದೆ.

English summary

Children Suffering from Nutrients Deficiency Taluk Wise Statistics of Mysore Disctrict, here see complete details

Story first published: Monday, June 26, 2023, 17:05 [IST]

Source link