ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲಸಿನ ಹಬ್ಬಕ್ಕೆ ಎರಡನೇ ದಿನವೂ ಉತ್ತಮ ಸ್ಪಂದನೆ | Good response for Jackfruit festival of second day in Mysuru

Agriculture

oi-Madhusudhan KR

By ಮೈಸೂರು ಪ್ರತಿನಿಧಿ

|

Google Oneindia Kannada News

ಮೈಸೂರು, ಜೂನ್‌, 25: ಸಹಜ ಸಮೃದ್ಧದ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಶನಿವಾರ “ಮೈಸೂರು ಹಲಸಿನ ಹಬ್ಬ”ವನ್ನು ಆಯೋಜಿಸಲಾಗಿತ್ತು. ಈ ಹಬ್ಬ ಇಂದು ಕೂಡ ಮುಂದುವರೆದಿದ್ದು, ಹಲಸು ಕೊಳ್ಳಲು ಈಗಾಗಲೇ ಜನರು ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಇಂದಿನ ಸ್ಪರ್ಧೆಯ ವಿವರ

ಇಂದು (ಭಾನುವಾರ) ಕೂಡ ಬೆಳಗ್ಗೆ 10 ಗಂಟೆಯಿಂದ 2-12 ವಯಸ್ಸಿನ ಮಕ್ಕಳಿಗೆ “ನಾ ಕಂಡಂತೆ ಹಲಸು” ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಲಾಗಿದೆ. ಇನ್ನು ಮಧ್ಯಾಹ್ನ ಹಲಸಿನ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹಲಸಿನ ಹಣ್ಣು, ಕಾಯಿ, ಬೀಜ, ಎಲೆಯಿಂದ ಮಾಡುವ ಸಾಂಪ್ರದಾಯಿಕ ಅಥವಾ ಹೊಸ ಬಗೆಯ ಅಡುಗೆಗಳನ್ನು ತಯಾರಿಸಿ ಮೇಳಕ್ಕೆ ತರಬಹುದು. ಉತ್ತಮ ಅಡುಗೆಗಳಿಗೆ ಆಕರ್ಷಕ ಬಹುಮಾನವನ್ನು ಇಡಲಾಗಿದೆ.

Good response for Jackfruit festival of second day in Mysuru

2 ಗಂಟೆಗೆ “ಹಲಸಿನ ಹಣ್ಣು ತಿನ್ನುವ ಸ್ಪರ್ಧೆ” ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರನ್ನು ವಿಜೇತರಾಗಿ ಘೋಷಿಸಿ, ಬಹುಮಾನವನ್ನು ಕೂಡ ನೀಡಲಾಗುತ್ತದೆ.

ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಸಂಭ್ರಮ: ತಾಯಿ ಪಾದಕ್ಕೆ ಉಘೇ..ಉಘೇ.. ಎಂದು ಘೋಷ ಮೊಳಗಿಸಿದ ಭಕ್ತರುಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಸಂಭ್ರಮ: ತಾಯಿ ಪಾದಕ್ಕೆ ಉಘೇ..ಉಘೇ.. ಎಂದು ಘೋಷ ಮೊಳಗಿಸಿದ ಭಕ್ತರು

ಇನ್ನು ನಿನ್ನೆ ಮೇಳದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ಹಣ್ಣುಗಳು ಜನರನ್ನು ತನ್ನತ್ತ ಆಕರ್ಷಿಸಿದವು. ಜೊತೆಗೆ ಹಲಸಿನ ಐಸ್ ಕ್ರೀಂ, ಚಿಪ್ಸ್‌, ಕಬಾಬ್, ಚಾಕೋಲೇಟ್, ಹಪ್ಪಳ, ಹಲ್ವಾ, ಹೋಳಿಗೆ, ವಡೆ, ದೋಸೆ, ಹಲಸಿನ ಬಿರಿಯಾನಿ ರುಚಿಯನ್ನು ಸಾರ್ವಜನಿಕರು ಸವಿದರು. ಅಲ್ಲದೆ ಹಲಸಿನ ಬೀಜದ ಪೇಯ ಕಾಫಿಗೆ ಜನರು ಮುಗಿಬಿದ್ದಿದ್ದರು.

ಹಸಿದು ಹಲಸು ತಿನ್ನುವ ಎಂಬ ಮಾತಿದೆ. ಹಾಗೆಯೇ ಬರಗಾಲ ಎದುರಿಸಿ ನಿಲ್ಲುವ ಹಲಸು ರಾಸಾಯನಿಕ ಔಷಧಿ, ಗೊಬ್ಬರ ಇಲ್ಲದೆ ಬೆಳೆಯುತ್ತದೆ. ರೈತರ ಜೇಬು ತುಂಬುವ ಆಪ್ತಮಿತ್ರನೂ ಔದು. ಹಲಸಿನ ಮಹತ್ವವನ್ನು ಗ್ರಾಹಕರಿಗೆ ಮತ್ತು ರೈತರಿಗೆ ತಿಳಿಸಿಕೊಡುವ ಉದ್ದೇಶದಿಂದ ಸಹಜ ಸಮೃದ್ಧ ಮತ್ತು ನಮ್ಮ ರೈತರ ಮಾರ್ಕೆಟ್ ಜೊತೆಗೂಡಿ ಎರಡು ದಿನ ಹಲಸಿನ ಹಬ್ಬವನ್ನು ಏರ್ಪಡಿಸಲಾಗಿತ್ತು.

ಇನ್ನು ಮೊದಲ ದಿನದ (ಶನಿವಾರ) ಹಲಸಿನ ಹಬ್ಬವನ್ನು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಸಂಜಯ್‌ ಕುಮಾರ್ ಸಿಂಗ್ “ಹಲಸಿನ ಅಡುಗೆ” ಪುಸ್ತಕವನ್ನು ಬಿಡುಗಡೆ ಮಾಡಿದರು. ಹಾಗೆಯೇ ಹಲಸಿನ ತಜ್ಞ ಡಾ. ಕರುಣಾಕರನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಾನಾ ಸ್ಪರ್ಧೆಗಳ ಆಯೋಜನೆ

ಜೊತೆಗೆ ಹಲಸು ಭಾರ ಎತ್ತುವ ಮತ್ತು ಹಲಸಿನ ತೂಕ ಊಹಿಸಿಸುವ ಸ್ಪರ್ಧೆಯನ್ನೂ ಕೂಡ ಏರ್ಪಡಿಸಲಾಗಿತ್ತು. ಕರ್ನಾಟಕದ ವಿವಿಧ ಭಾಗಗಳಿಂದ ಬರುವ 40 ಗ್ರಾಮೀಣ ಉದ್ದಿಮೆದಾರರು, ರೈತ ಕಂಪನಿಗಳು, ರೈತ ಮತ್ತು ಮಹಿಳಾ ಗುಂಪುಗಳು ಹಲಸಿನ ಮೌಲ್ಯವರ್ಧಿತ ಪದಾರ್ಥಗಳು, ಸಿರಿಧಾನ್ಯ, ಸಾವಯವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ರುದ್ರಾಕ್ಷಿ ಬಕ್ಕೆ, ತೂಬಗೆರೆ, ಬೈರಸಂದ್ರ, ಸರ್ವ ಋತು, ಲಾಲ್‌ಬಾಗ್ ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ ಇಪ್ಪತ್ತೈದು ತಳಿಗಳು ಮಾರಾಟಕ್ಕೆ ಇಡಲಾಗಿದೆ. ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೋಂದಣಿ ಆಗಿರುವ ಕರ್ನಾಟಕ ರಾಜ್ಯದ ಮೊದಲ ಕೆಂಪು ಹಲಸಿನ ತಳಿ ಸಿದ್ದು ಹಲಸು ಗಿಡಗಳು ಆಕರ್ಷಣೀಯ ಕೇಂದ್ರಬಿಂದುವಾಗಿದ್ದವು.

ಸಹಜ ಸಮೃದ್ಧ ಸಂಸ್ಥೆಯ ಕೃಷ್ಣಪ್ರಸಾದ್ ಮಾತನಾಡಿ, ಬಾಯಿಗಿಟ್ಟರೆ ಜೇನು ಸದಂತೆನಿಸುವ ಹಲಸು. ಳೆಯ ಕಾಯಿಯಿಂದ ತೊಳೆ ಬಿಡಿಸಿದ ಬೀಜದವರೆಗೆ ತಿನ್ನಲು ಬರುತ್ತದೆ. ಹಲಸಿನ ಕಾಯಿಯ ನಿರಂತರ ಸೇವನೆಯಿಂದ ಮಧುಮೇಹಿಗಳು ಇನ್ಸುಲಿನ್ ಬಳಕೆ ನಿಲ್ಲಿಸಬಹುದು. ಕ್ಯಾನ್ಸರ್, ಮಲಬದ್ದತೆಯನ್ನು ದೂರವಿಡಬಹುದು. ಹೀಗೆ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಲಸನ್ನು ಮನೆ ಮಂದಿಯೆಲ್ಲಾ ತಿಂದುತೇಗಬೇಕು ಎಂದರು.

English summary

Good response for Jackfruit festival of second day in Mysuru, Here see details of Jackfruit breeds,

Story first published: Sunday, June 25, 2023, 11:21 [IST]

Source link