ಸರ್ಕಾರಿ ಕೆಲಸ ಮಾತ್ರವಲ್ಲ ಖಾಸಗಿ ಕಂಪನಿ ಕೆಲಸಕ್ಕೂ ಕೊಡಬೇಕು ಲಂಚ! 4 ನೌಕರರು ಸೀದಾ ಸೀದಾ ಮನೆಗೆ! | 4 TCS executives sacked after allegations about bribe for jobs

India

oi-Malathesha M

By ಒನ್ ಇಂಡಿಯಾ ಡೆಸ್ಕ್

|

Google Oneindia Kannada News

ಮುಂಬೈ: ಕೆಲಸ ಹುಡುಕೋದಕ್ಕೆ ಅದೆಂತಹ ಕಾಲ ಬಂದಿದೆಯಪ್ಪ. ಸರ್ಕಾರಿ ಕೆಲಸಗಳಿಗೆ ಲಂಚ ಪಡೆಯೋದನ್ನ ನೋಡಿದ್ದೇವೆ. ಅದೆಷ್ಟೋ ಕ್ರಿಮಿಗಳು ಅಂದರ್ ಆಗಿ, ಜೈಲೂಟ ತಿನ್ನುತ್ತಿರೋದನ್ನೂ ಕಣ್ತುಂಬಿಕೊಂಡಿದ್ದೇವೆ. ಆದರೆ ಇದೀಗ ಖಾಸಗಿ ಕಂಪನಿ ಕೆಲಸಕ್ಕೂ ಕೊಡಬೇಕಂತೆ ಲಂಚ. ಇದು ಒಂದೆರಡು ಕೋಟಿ ರೂಪಾಯಿ ಹಗರಣವಲ್ಲ, ಬರೋಬ್ಬರಿ 100 ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪ!

ಅಂದಹಾಗೆ ಭಾರತದ ಅತಿದೊಡ್ಡ ಐಟಿ​​ ಕಂಪನಿ ಎಂಬ ಹೆಗ್ಗಳಿಕೆಯನ್ನ ಪಡೆದಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ ಬಹುಕೋಟಿ ಭ್ರಷ್ಟಾಚಾರ ಹಗರಣ ಆರೋಪ ಈಗ ಕೇಳಿಬಂದಿದೆ. ಟಿಸಿಎಸ್ ಸಂಸ್ಥೆಯಲ್ಲಿ ಕೆಲಸ ಕೊಡಿಸಲು ಅಲ್ಲಿನ ಹಿರಿಯ ಅಧಿಕಾರಿಗಳು ಲಂಚವನ್ನ ಪಡೆದ ಆರೋಪ ಕೇಳಿಬಂದಿದೆ. ಆರೋಪದ ಬೆನ್ನಲ್ಲೇ ಒಟ್ಟು 4 ಅಧಿಕಾರಿಗಳನ್ನು ವಜಾ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಹೇಳಲಾಗುತ್ತಿದೆ. 100 ಕೋಟಿ ಲಂಚ ಪಡೆದ ಆರೋಪ ಐಟಿ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಸುಮಾರು 100 ಕೋಟಿ ಲಂಚ ಪಡೆದು ಸಾವಿರಾರು ಮಂದಿಗೆ ಕೆಲಸ ಕೊಟ್ಟಿರುವ ಆರೋಪ ಕೇಳಿಬಂದಿದೆ (TCS Company).

4 TCS executives sacked after allegations about bribe for jobs

ದುಡ್ಡಿಗಾಗಿ ಅಸಮರ್ಥರಿಗೂ ಉದ್ಯೋಗ ಕೊಟ್ಟರಾ?

ಹೌದು ಭಾರತದ ಅತಿದೊಡ್ಡ ಐಟಿ ಸಂಸ್ಥೆ ಮತ್ತು 6 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನ ಕೊಟ್ಟಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ಗೆ ದೊಡ್ಡ ಹೆಸರಿದೆ. ಅದರಲ್ಲೂ ಟಾಟಾ ಸಂಸ್ಥೆ ತನ್ನ ಬ್ರ್ಯಾಂಡ್ ಮೂಲಕವೇ ಜಗತ್ತಿನಾದ್ಯಂತ ಹೆಸರು ಪಡೆದಿದೆ. ಆದರೆ ಈಗ ಕೇಳಿಬಂದ ಆರೋಪದ ಪ್ರಕಾರ ಕೆಲ ಹಿರಿಯ ಅಧಿಕಾರಿಗಳು ನೇಮಕಾತಿಗೆ ದುಡ್ಡು ಪಡೆದಿದ್ದು ಅಲ್ಲದೆ, ಅಸಮರ್ಥ ಅಭ್ಯರ್ಥಿಗಳಿಗೆ ಉದ್ಯೋಗ ನೀಡಿದ್ದಾರೆ ಎನ್ನಲಾಗಿದೆ. ಕಂಪನಿಯ ನೇಮಕಾತಿ ವಿಭಾಗದ ಚೀಫ್ ಎಕ್ಸೂಕೂಟೀವ್ ಆಫೀಸರ್, ಚೀಫ್ ಆಫರೇಟಿಂಗ್ ಆಫೀಸರ್, ರಿಸೋರ್ಸ್ ಮ್ಯಾನೇಜ್ಮೆಂಟ್ ಗ್ರೂಪ್ ಅಧಿಕಾರಿ ಸೇರಿ ನಾಲ್ವರು ಅಧಿಕಾರಿಗಳನ್ನು ಟಿಸಿಎಸ್ ಇದೀಗ ವಜಾ ಮಾಡಿ ಆದೇಶ ಹೊರಡಿಸಿದೆ.

ಶರದ್ ಪವಾರ್‌ಗೆ ಜೀವ ಬೆದರಿಕೆ ಹಾಕಿದ್ದ ಐಟಿ ಉದ್ಯೋಗಿ ಬಂಧನ ಶರದ್ ಪವಾರ್‌ಗೆ ಜೀವ ಬೆದರಿಕೆ ಹಾಕಿದ್ದ ಐಟಿ ಉದ್ಯೋಗಿ ಬಂಧನ

ದುಡ್ಡು ಕೊಟ್ಟ ಉದ್ಯೋಗಿಗಳಿಗೂ ಸಂಕಷ್ಟ?

ಇಷ್ಟೆಲ್ಲಾ ಘಟನೆಯನ್ನ ಟಿಸಿಎಸ್ ಆಡಳಿತ ಮಂಡಳಿ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಕಂಪನಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಂಸ್ಥೆಯು ಮುಂದಾಗಿದೆ. ಇದರ ಜೊತೆಗೆ ಹಣ ನೀಡಿ ಕೆಲಸ ಪಡೆದ ನೌಕರರ ಮೇಲೂ ಸಂಸ್ಥೆ ಕ್ರಮಕ್ಕೆ ಮುಂದಾಗಿದ್ದು, ಈ ಸಂಬಂಧ ಆಂತರಿಕ ತನಿಖೆ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ಹಣ ಕೊಟ್ಟು ನೌಕರಿ ಪಡೆದವರಿಗೂ ಭಯ ಶುರುವಾಗಿದೆ. ಯಾವ ಸಮಯದಲ್ಲಿ ಅವರ ಕೆಲಸ ಹೋಗಿ, ಮನೆಗೆ ಕಳುಹಿಸುತ್ತಾರೋ ಅನ್ನೋ ಭೀತಿ ಎದುರಾಗಿದೆ. ಅಲ್ಲದೆ ಮಾಡಿದ ತಪ್ಪಿಗೆ ಶಿಕ್ಷೆ ಕೂಡ ಕಟ್ಟಿಟ್ಟ ಬುತ್ತಿ ಅನ್ನೋದು ಈ ಮೂಲಕ ಸಾಬೀತು ಆಗುತ್ತಿದೆ.

ಉಪ್ಪು ತಿಂದವರಿಗೆ ನೀರು ಕುಡಿಸೋದು ಪಕ್ಕಾ!

ಹೀಗೆ ಐಟಿ ವಲಯದ ಪ್ರಮುಖ ಕಂಪನಿಯಲ್ಲಿ ಇಂತಹ ಘಟನೆ ನಡೆದಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಟಾಟಾ ಸಂಸ್ಥೆಯ ಬ್ರ್ಯಾಂಡ್‌ಗೆ ಒಂದು ಗತ್ತಿದೆ. ಹಾಗೇ ಭಾರತದ ಪ್ರತಿಯೊಂದು ಪ್ರಮುಖ ಕ್ಷೇತ್ರದಲ್ಲೂ ಟಾಟಾ ಸಂಸ್ಥೆ ತನ್ನ ಉದ್ಯಮ ಸ್ಥಾಪನೆ ಮಾಡಿದೆ. ಹೀಗಾಗಿ ಟಿಸಿಎಸ್ ಸಂಸ್ಥೆಯಲ್ಲಿ ನಡೆದಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ. ಈ ಕಾರಣಕ್ಕೆ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ ಟಿಸಿಎಸ್ ಆಡಳಿತ ಮಂಡಳಿ. ಈ ಮೂಲಕ ಉಪ್ಪು ತಿಂದವರಿಗೆ ನೀರು ಕುಡಿಸಲು ವೇದಿಕೆ ಸಜ್ಜಾಗಿದೆ.

ಇಷ್ಟೆಲ್ಲಾ ಆರೋಪ ಕೇಳಿಬರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲೂ ವೆರೈಟಿ ವೆರೈಟಿ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ 4 ಅಧಿಕಾರಿಗಳು ಮನೆ ಹೋಗಿದ್ದಾರೆ ಎನ್ನಲಾಗಿದ್ದು ಮುಂದೆ ಇನ್ನೆಷ್ಟು ಜನರ ಉದ್ಯೋಗಕ್ಕೆ ಕತ್ತರಿ ಬೀಳುತ್ತೋ ಕಾದು ನೋಡಬೇಕು. ಇತ್ತೀಚೆಗೆ ಉದ್ಯೋಗಿಗಳ ಸಾಮೂಹಿಕ ರಾಜೀನಾಮೆ ಕಾರಣಕ್ಕೆ ಟಿಸಿಎಸ್ ಸದ್ದು ಮಾಡಿತ್ತು. ವರ್ಕ್ ಫ್ರಂ ಹೋಂ ಕಡಿತ ಮಾಡಿ, ಕಚೇರಿಗೆ ಬನ್ನಿ ಅಂದಿದ್ದಕ್ಕೆ ಉದ್ಯೋಗಿಗಳು ರಾಜೀನಾಮೆ ನೀಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಈಗ ಬೇರೆಯದ್ದೇ ಆರೋಪ ಕೇಳಿಬಂದಿದ್ದು, ಸಂಸ್ಥೆ ಕೂಡ ತನಿಖೆಗೆ ಮುಂದಾಗಿದೆ.

English summary

4 TCS executives sacked after allegations about bribe for jobs.

Story first published: Friday, June 23, 2023, 20:33 [IST]

Source link