ಸರ್ಕಾರಿ ಕೆಲಸ ಬಿಟ್ಟು ಬಿಸಿನೆಸ್‌ ಶುರು ಮಾಡಿವರು ಕಟ್ಟಿದ ವ್ಯಕ್ತಿ 5,55,000 ಕೋಟಿ ಕಂಪನಿ | 5,55,000 crore company was built by a person who quit government job and started business

Business

oi-Punith BU

|

Google Oneindia Kannada News

ಬೆಂಗಳೂರು, ಜುಲೈ 28: ವ್ಯವಹಾರಿಕ ಕುಟುಂಬಗಳನ್ನು ಹೊರತುಪಡಿಸಿ ಇಂದಿಗೂ ಎಲ್ಲರೂ ಹೇಳುವುದು ಯಾವುದಾದರು ಒಂದು ಸರ್ಕಾರಿ ಕೆಲಸ ಪಡೆದು ಸೆಟಲ್‌ ಆಗುವುದು ಬೆಟರ್‌ ಗುರು ಅಂತಾ. ಆದರೆ ವ್ಯಕ್ತಿಯೊಬ್ಬರು ಇದ್ದ ಸರ್ಕಾರಿ ಕೆಲಸವನ್ನು ಬಿಟ್ಟು ಬಿಸಿನೆಸ್ ಶುರು ಮಾಡಿ ಈಗ ಬರೋಬ್ಬರಿ 5,55,000 ಕೋಟಿ ಮೌಲ್ಯದ ಕಂಪೆನಿ ಕಟ್ಟಿ ಯಶಸ್ವಿಯಾಗಿದ್ದಾರೆ.

4 ದಶಕಗಳ ಹಿಂದೆ ವಿಜ್ಞಾನ ಯುವ ಪದವೀಧರರು ಸರ್ಕಾರಿ ಉದ್ಯೋಗವನ್ನು ತೊರೆದು ಹೊಸ ವ್ಯವಹಾರ ಮಾಡಲು ನಿರ್ಧರಿಸಿದಾಗ ಅವರ ಸಹ- ಸಂಸ್ಥಾಪಕರು ಕೂಡ ಬೇಡವೆಂದಿದ್ದರು. ಆ ಟೆಕ್ ಉದ್ಯಮಿ ನಾರಾಯಣ ಮೂರ್ತಿ ಅವರ ಕಂಪೆನಿ ಸಹ-ಸಂಸ್ಥಾಪಕ ಮತ್ತು ವಿಜ್ಞಾನ ಯುವ ಪದವೀಧರರಾದ ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಬಿಲಿಯನೇರ್ ಕೆ ದಿನೇಶ್.

5,55,000 crore company was built by a person who quit government job and started business

ದಿನೇಶ್ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಅವರು ಬೆಂಗಳೂರು ನಗರದಲ್ಲಿ ಸರ್ಕಾರ ನಡೆಸುವ ಹೊಸ ವಿದ್ಯುತ್ ಕಾರ್ಖಾನೆಯಲ್ಲಿ ಗೌರವಾನ್ವಿತ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದರು. ಆದರೆ ಪತ್ರಿಕೆಯೊಂದರ ಜಾಹೀರಾತು ಅವರನ್ನು ರಾಜೀನಾಮೆ ನೀಡಲು ಮತ್ತು ಮುಂಬೈಗೆ ಪ್ರಯಾಣಿಸಲು ಮತ್ತು ನಾರಾಯಣಮೂರ್ತಿ ಅವರ ಸಹ-ಸಂಸ್ಥಾಪಕರಾಗಿ ಅಗ್ನಿಪರೀಕ್ಷೆ ಎದುರಿಸಲು ಪ್ರೇರಕವಾಯಿತು.

ಪರೀಕ್ಷೆಯಲ್ಲಿ ತೇರ್ಗಡೆಯಾಯಿತೇನೋ ಎಂಬ ಅಸಹನೆಯಿಂದ ದಿನೇಶರಿಗೆ ಅಂದೇ ಸಂಜೆ ನಾರಾಯಣಮೂರ್ತಿ ಕರೆ ಮಾಡಿದ್ದರು. ಆದರೆ ದಿನೇಶ್ ಯಾಕೆ ರಿಸ್ಕ್ ತೆಗೆದುಕೊಂಡು ಸಾರ್ವಜನಿಕ ವಲಯದ ನೌಕರಿಯಿಂದ ನೆಮ್ಮದಿಯನ್ನು ಬಿಡುತ್ತಿದ್ದಾರೆ ಎಂಬ ಕುತೂಹಲವೂ ಮೂರ್ತಿಯವರಿಗಿತ್ತು. ಆದರೆ ಅವರ ಉತ್ತರ ಹೀಗಿತ್ತು, ಸರ್, ನಾನು ಹೊಸ ತಂತ್ರಜ್ಞಾನವನ್ನು ಕಲಿಯಲು ಬಯಸುತ್ತೇನೆ, ನಾನು UI/UX ಕಲಿಯಲು ಬಯಸುತ್ತೇನೆ ಎಂದು ಹೇಳಿದ್ದರು.

ಯಾರು ಈ ದಿನೇಶ್‌ ಕೆ:

ದಿನೇಶ್‌ ಅವರು ಇನ್ಫೋಸಿಸ್‌ನಲ್ಲಿ ಕ್ವಾಲಿಟಿ, ಇನ್‌ಫಾರ್ಮೆಶನ್‌ ಸಿಸ್ಟಮ್‌ ಮತ್ತು ಸಂವಹನ ವಿನ್ಯಾಸ ಗ್ರೂಪ್ ಮುಖ್ಯಸ್ಥ ಮತ್ತು ಇನ್ಫೋಸಿಸ್ ಟೆಕ್ನಾಲಜೀಸ್ ಆಸ್ಟ್ರೇಲಿಯಾದ ಅಧ್ಯಕ್ಷ ಹುದ್ದೆಗಳನ್ನು ಹೊಂದಿದ್ದರು. ಅವರು ಪ್ರೋಗ್ರಾಮಿಂಗ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಮತ್ತು ಸಾಫ್ಟ್‌ವೇರ್ ವಿತರಣೆಯನ್ನು ನಿರ್ವಹಿಸುವಲ್ಲಿ ಪರಿಣಿತರಾಗಿದ್ದರು. ಸಾಫ್ಟ್‌ವೇರ್ ಗುಣಮಟ್ಟದ ಪ್ರಕ್ರಿಯೆಗಳಲ್ಲಿ ಐಟಿ ದೈತ್ಯ ವಿಶ್ವ ದರ್ಜೆಯ ಮಾನದಂಡಗಳನ್ನು ಸಾಧಿಸಲು ಅವರು ತುಂಬಾನೇ ಸಹಾಯ ಮಾಡಿದ್ದರು. ಇನ್ಫೋಸಿಸ್‌ನಲ್ಲಿ ಯಾವುದೇ ಸಂಕೀರ್ಣ ಪ್ರಕ್ರಿಯೆಗಳಿಗೆ ಅವರು ಗೋ-ಟು ಮ್ಯಾನ್ ಎಂಬಾತಾಗಿದ್ದರು.

ದಿನೇಶ್ ಅವರು 2011ರಲ್ಲಿ ಇನ್ಫೋಸಿಸ್ ಮಂಡಳಿಯಿಂದ ಕೆಳಗಿಳಿದರು. ಅವರು ತಮ್ಮ ಪತ್ನಿಯೊಂದಿಗೆ ತಮ್ಮ ಆಶ್ರಯ ಹಸ್ತ ಟ್ರಸ್ಟ್ ಮೂಲಕ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಪ್ರಾಣಿ ಕಲ್ಯಾಣವನ್ನು ಉತ್ತೇಜಿಸುವ ಮೂಲಕ ಲೋಕೋಪಕಾರಿ ಉಪಕ್ರಮಗಳಲ್ಲಿ ತೊಡಗಿಸಿಕೊಂಡರು. ಅವರು ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇಂದ್ರಕ್ಕೆ ನೆರವಾಗಿದ್ದಾರೆ. ಈಗ ಮೈಸೂರು ನಗರದಲ್ಲಿ ತಮ್ಮ ಪೂರ್ವಜರ ಜಾಗದಲ್ಲಿ ಕ್ಲಿನಿಕ್ ಅನ್ನು ನಿರ್ಮಿಸಿದ್ದಾರೆ. ದಿನೇಶ್ ಸಾಹಿತ್ಯದಲ್ಲೂ ಡಾಕ್ಟರೇಟ್ ಪಡೆದಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಕಾರ್ಪೊರೇಟ್ ಕೌನ್ಸೆಲಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡುವ ದೀಕ್ಷಾ ಮತ್ತು ಉದ್ಯಮಿಯಾಗಿರುವ ದಿವ್ಯಾ ಅವರು ವೇದಾಅರ್ತ್ ಬ್ರಾಂಡ್ ಅನ್ನು ಹೊಂದಿದ್ದಾರೆ.

ದಿನೇಶ್ ಅವರು ತಮ್ಮ ಸಂಪತ್ತಿನ ಬಹುಪಾಲು ಹಣವನ್ನು 5,50,000 ಕೋಟಿ ರೂಪಾಯಿಗಳ ಮಾರುಕಟ್ಟೆ ಕ್ಯಾಪ್ ಇನ್ಫೋಸಿಸ್‌ನಲ್ಲಿನ ಷೇರುಗಳಿಂದ ಪಡೆದರು. 69 ವರ್ಷದ ಅವರ ನಿವ್ವಳ ಆಸ್ತಿ ಮೌಲ್ಯವು ರೂ 18,000 ಕೋಟಿ ($ 2.2 ಶತಕೋಟಿ) ಆಗಿದೆ.

English summary

Even today, except business families, everyone says that it is better to get a government job and settle down. But a person left his government job and started a business and now he has successfully built a company worth 5,55,000 crores.

Story first published: Friday, July 28, 2023, 13:16 [IST]

Source link