ಸಮುದ್ರದಲ್ಲಿ ದೋಣಿಗಳು, ಕ್ರಿಕೆಟ್​ನಲ್ಲಿ ಜಗಳಗಳು ಕಾಮನ್; 2 ವಿವಾದಾತ್ಮಕ ತೀರ್ಪುಗಳಿಗೆ ಅಂಪೈರ್​ ಜತೆಗೆ ಶುಭ್ಮನ್ ಗಿಲ್ ವಾಗ್ವಾದ, VIDEO

ಗಿಲ್-ಅಂಪೈರ್ ಜೊತೆಗ ವಾಗ್ವಾದ

ಶುಭ್ಮನ್ ಗಿಲ್ ಮತ್ತು ಆನ್​ಫೀಲ್ಡ್ ಅಂಪೈರ್​ಗಳ ಜೊತೆಗೆ ಸುದೀರ್ಘ ವಾಗ್ವಾದ ನಡೆಯಿತು. ಎಲ್​ಬಿಡಬ್ಲ್ಯು ವಿಚಾರವಾಗಿ ಈ ಜಗಳ ಚರ್ಚೆ ಜರುಗಿತು. ಎಸ್‌ಆರ್‌ಎಚ್ 14ನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾರ ಕಾಲಿಗೆ ಚೆಂಡು ತಗುಲಿತು. ಆಗ ಜಿಟಿ ಬೌಲರ್ ಪ್ರಸಿದ್ಧ್ ಕೃಷ್ಣ ಮತ್ತು ಫೀಲ್ಡರ್ಸ್​ ಎಲ್‌ಬಿಡಬ್ಲ್ಯೂ ಔಟ್​ಗೆ ಮನವಿ ಮಾಡಿದರು. ಆದರೆ ಅಂಪೈರ್​ ಅದನ್ನು ನಾಟೌಟ್ ಎಂದು ತೀರ್ಪು ಕೊಟ್ಟರು. ಆಗ ಜಿಟಿ ಡಿಆರ್​ಎಸ್​ ಮೊರೆ ಹೋಯಿತು. ಆದಾಗ್ಯೂ, ವಿಮರ್ಶೆಯಲ್ಲಿ ಚೆಂಡು ಎಲ್ಲಿ ಪಿಚ್ ಆಗಿದೆ ಎಂಬುದನ್ನು ತೋರಿಸಲಿಲ್ಲ, , ಕೇವಲ ಇಂಪ್ಯಾಕ್ಟ್ ಮತ್ತು ವಿಕೆಟ್‌ಗಳನ್ನು ತೋರಿಸಿದೆ. ಕೊನೆ ಅಂಪೈರ್ಸ್ ಕಾಲ್ ಎಂದು ನಾಟೌಟ್ ತೀರ್ಮಾನ ಕೊಡಲಾಯಿತು.

Source link