ಸಮುದಾಯ ಆರೋಗ್ಯಾಧಿಕಾರಿಗಳ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಸಭೆ: ಗುಂಡೂರಾವ್ | Dinesh Gundu Rao Promised To Held Higher Officials Meeting For Discuss about CHO Problems

Karnataka

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 20: ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಆಸರೆಯಾಗಿ ಕಾರ್ಯ ನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿಗಳು ಸಾಕಷ್ಟು ಸಮಸ್ಯೆಳನ್ನು ಎದುರಿಸುತ್ತಿದ್ದಾರೆ. ಅವರು ಇದೀಗ ಆರೋಗ್ಯ ಸಚಿವರ ಮಾತಿನ ಮೇರೆಗೆ ಕೆಲಸಕ್ಕೆ ರಾಜೀನಾಮೆ ನೀಡದೆಯೇ ನಿಮ್ಮ ಮೇಲಿನ ನಂಬಿಕೆಯಿಂದ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಇತ್ತ ಸರ್ಕಾರ ಅವರಿಗೆ ಸ್ಪಂದಿಸುವುದಾಗಿ ತಿಳಿಸಿದೆ.

ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ ಒದಗಿಸುವ ಸಮುದಾಯ ಆರೋಗ್ಯಾಧಿಕಾರಿಗಳ ‘ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು’ ಮಂಗಳವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನ ಭೇಟಿ ಮಾಡಿದರು. ಆರೋಗ್ಯ ಕೇಂದ್ರಗಳಲ್ಲಿನ ಸಮಸ್ಯೆಗಳನ್ನು ಹೇಳಿಕೊಂಡರು.

Dinesh Gundu Rao Promised To Held Higher Officials Meeting For Discuss about CHO Problems

ಸಮುದಾಯ ಆರೋಗ್ಯಾಧಿಕಾರಿಗಳು (CHO) ತಿಳಿಸಿದ ಸಮಸ್ಯೆಗಳನ್ನು ಆರೋಗ್ಯ ಮತ್ತು ಉನ್ನತ ಶಿಕ್ಷಣ ಸಚಿವ ದಿನೇಶ್ ಗುಂಡೂರಾವ್ ಆಲಿಸಿದರು. ಬಳಿಕ ಸಿಎಚ್ಒ ಗಳ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ಕರೆಯುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.‌

ಸಚಿವರ ಭರವಸೆಗೆ ಒಪ್ಪಿಸಿದ ಸಿಎಚ್‌ಒಗಳು ನಾವು ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಸರ್ಕಾರದ ಮೇಲಿನ ನಂಬಿಕೆಯಿಂದ ಕಷ್ಟವಾದರೂ ಕಾರ್ಯ ಮುಂದುವರಿತ್ತೇವೆ. ಆದಷ್ಟು ಶೀಗ್ರವೇ ಸಮಸ್ಯೆಗಳನ್ನು ಬಗೆಹರಿಸಿದಂತೆ ಎಲ್ಲರೂ ಒಕ್ಕೊರಲಿನಿಂದ ಮನವಿ ಮಾಡಿದರು.

ಹಿರಿಯ ಅಧಿಕಾರಿಗಳಿಂದ ಸಿಎಚ್‌ಒಗಳಿಗೆ ಬೆದರಿಕೆ

ಹಲವು ಸಮಸ್ಯೆಗಳಿಂದ ಗ್ರಾಮೀಣ ಭಾಗದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಎಚ್‌ಒ ಗಳಿಗೆ ಕಳೆದ ಎರಡು ವರ್ಷದಿಂದ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯಾಧಿಕಾರಿಗಳಿಗೆ ವೇತನ ಸರಿಯಾಗಿ ತಲುಪಿತ್ತಿಲ್ಲ. ಅಲದೇ ಹಿರಿಯ ಅಧಿಕಾರಿಗಳು ಸಮುದಾಯ ಆರೋಗ್ಯಾಧಿಕಾರಿಗಳನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಇದೆಲ್ಲ ಕಾರಣಗಳಿಂದಾಗಿ ಅನೇಕ ಆರೋಗ್ಯಾಧಿಕಾರಿಗಳು ಸಂಕಷ್ಠದಲ್ಲಿದ್ದಾರೆ.

Dinesh Gundu Rao Promised To Held Higher Officials Meeting For Discuss about CHO Problems

ನಮಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ಕೇಳಿದರೆ ಆರೋಗ್ಯ ಇಲಾಖೆ ಮಟ್ಟದ ಅಧಿಕಾರಿಗಳು ಸಮುದಾಯ ಆರೋಗ್ಯಾಧಿಕಾರಿಗಳಿಗೆ ಹುದ್ದೆ ಕಸಿದುಕೊಳ್ಳುವ (ಟರ್ಮಿನೇಟ್) ಬೆದರಿಕೆ ಹಾಕುತ್ತಿದ್ದಾರೆ. ಇದರಿಂದಾಗಿ ಹಲವು ಜಿಲ್ಲೆಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳು ಕೆಲಸ ಬಿಟ್ಟು ಬೇರೆ ಕೆಲಸ ನೋಡಿಕೊಳ್ಳುತ್ತಿದ್ದಾರೆ ಎಂದು ಸಮುದಾಯ ಆರೋಗ್ಯಾಧಿಕಾರಿಗಳು ಆರೋಗ್ಯ ಸಚಿವರ ಮುಂದೆ ಅಳಲು ತೊಂಡಿಕೊಂಡರು.

ಶೀಘ್ರವೇ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯ

ಬಹುತೇಕ ಸಿಎಚ್.ಒ ಗಳಲ್ಲಿ ಸಮುದಾಯ ಆರೋಗ್ಯಾಧಿಕಾರಿಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ ತಾವು ಆರೋಗ್ಯ ಸಚಿವರಾದ ಹಿನ್ನೆಲೆಯಲ್ಲಿ ಹಲವರಲ್ಲಿ ಆಶಾಭಾವನೆ ಮೂಡಿದೆ. ನೀವು ಸಮಸ್ಯೆ ಸರಿ ಮಾಡುತ್ತೀರಿ ಎಂಬ ನಂಬಿಕೆ ನಮಗಿದೆ. ಇದೇ ಕಾರಣದಿಂದಲೇ ನಾವು ಆರೋಗ್ಯ ವಲಯದಲ್ಲಿ ಸೇವೆ ಮುಂದುವರಿಯಲು ನಿರ್ಧರಿಸಿದ್ದೇವೆ.

ಸರ್ಕಾರ ಆದಷ್ಟು ಶೀಘ್ರವೇ ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಆರೋಗ್ಯ ಸಚಿವರಿಗೆ ಒತ್ತಾಯ ಮಾಡಿದರು.

ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಬಂಧಪಟ್ಟ ಇಲಾಖೆಯ ಆರೋಗ್ಯಾಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಳ್ಳೋಣ ಎಂದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಗುತ್ತಿಗೆ ನೌಕರರ ಸಂಘದ ಕಾನೂನು ಸಲಹೆಗಾರರಾದ ಸಿ ಎಸ್ ದ್ವಾರಕನಾಥ್ ಹಾಗೂ ಸಂಘದ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • Coronavirus: ಭಾರತದಲ್ಲಿ ಮತ್ತೆ ಶುರುವಾದ ಕೊರೊನಾ ಆತಂಕ: 8 ರಾಜ್ಯಗಳಿಗೆ ಕೇಂದ್ರ ಸಚಿವಾಲಯ ಪತ್ರ, ಪತ್ರದಲ್ಲೇನಿದೆ?
  • India Corona Report: ಹೊಸದಾಗಿ 12,591 ಕೊರೊನಾ ಕೇಸ್ ದಾಖಲು, 8 ರಾಜ್ಯಗಳಲ್ಲಿ ಸೋಂಕು ಏರಿಕೆ, ವಿವರ
  • Covid 19 Rise: ಕರ್ನಾಟಕದಲ್ಲಿ 2,000 ಸಕ್ರಿಯ ಕೇಸ್, ಬೆಂಗಳೂರಿನದ್ದೇ ಬಹುಪಾಲು
  • India Corona Report: ಒಂದೇ ದಿನ 5,676 ಪಾಸಿಟಿವ್ ಕೇಸ್ ಪತ್ತೆ, ಸಾವಿನ ಸಂಖ್ಯೆ ತುಸು ಏರಿಕೆ
  • ಕರ್ನಾಟಕದಲ್ಲಿ ಕೋವಿಡ್ ಸೋಂಕು ಹೆಚ್ಚಳ, ಕೊರೊನಾ ಬಿಕ್ಕಟ್ಟು ನಿರ್ವಹಣೆಗಾಗಿ ಇಂದು-ನಾಳೆ ಮಾಕ್ ಡ್ರಿಲ್
  • ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ: ಮತ್ತೊಂದೆಡೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್‌ ಡೋಸ್‌ ಕೊರತೆ, ಕಾರಣ ತಿಳಿಯಿರಿ
  • ಭಾರತದಲ್ಲಿ 6 ತಿಂಗಳ ನಂತರ ದಾಖಲೆ ಮಟ್ಟದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಪತ್ತೆ: ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಯಿರಿ
  • ಬೆಂಗಳೂರು: ಒಂದೇ ದಿನ 100ಕ್ಕೂ ಹೆಚ್ಚು ಕೊರೊನಾ ಕೇಸ್, ಪಾಸಿಟಿವಿಟ್ ರೇಟ್ 4.1ಕ್ಕೆ ಜಂಪ್, ಹೆಚ್ಚಾಯ್ತು ಆತಂಕ
  • Corona: ದೇಶದಲ್ಲಿ ಒಂದೇ ದಿನ 3,095 ಜನರಲ್ಲಿ ಸೋಂಕು ಪತ್ತೆ, ಹೆಚ್ಚಾದ ಕೋವಿಡ್ ತಪಾಸಣೆ, ಅಂಕಿ ಅಂಶ ಮಾಹಿತಿ
  • ಭಾರತದಲ್ಲಿ ಕೊರೊನಾ ಹೆಚ್ಚಳ: ಹೀಗಿದ್ದರೂ ಜನರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ, ಏನದು
  • Covid-19 : ಮತ್ತೆ ಕೊರೊನಾ ಹೆಚ್ಚಳ ಹಿನ್ನೆಲೆ ಪ್ರಧಾನಿ ಮೋದಿ ಮಹತ್ವದ ಸಭೆ, ಬೆಂಗಳೂರಿನ ಕೋವಿಡ್ ಪರಿಸ್ಥಿತಿ ಹೇಗಿದೆ.
  • ಭಾರತ: 618 ಹೊಸ ಕೇಸ್ ದಾಖಲು, ಪಾಸಿಟಿವ್ ಬಂದ ವಿದೇಶಿಗರ ಮೇಲೆ ತೀವ್ರ ನಿಗಾ, ಜನರಲ್ಲಿ ಹೆಚ್ಚಾದ ಆತಂಕ

English summary

Dinesh Gundu Rao Promised To Held Higher Officials Meeting For Discuss about CHO Problems.

Story first published: Tuesday, June 20, 2023, 19:53 [IST]

Source link