1928, 1932, 1936, 1948, 1952, 1956, 1964 ಮತ್ತು 1980 – ಈ ವರ್ಷಗಳು ನೆನಪಿದ್ಯಾ? ಭಾರತದ ಹಾಕಿ ಬಂಗಾರದ ಫಸಲು ತೆಗೆದ ವರ್ಷಗಳು! ಒಂದಲ್ಲ, ಎರಡಲ್ಲ, ಒಲಿಂಪಿಕ್ಸ್ ಇತಿಹಾಸದಲ್ಲಿ ಸತತ 8 ಬಾರಿ ಫೈನಲ್ ಪ್ರವೇಶಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆ ನಮ್ಮದು. 1956 ಮತ್ತು 1964ರ ಮಧ್ಯೆ ನಡೆದ 1960ರ ಒಲಿಂಪಿಕ್ ಫೈನಲ್ನಲ್ಲೂ ಭಾರತ ಹಾಕಿ ತಂಡವು ಶರಣಾಗಿ ಪದಕದ ಬಣ್ಣವನ್ನು ಬದಲಿಸಿತ್ತು!