ಶ್ರೀಲೀಲಾ ಸಿನಿ ಭವಿಷ್ಯ ಏನಾಗುತ್ತದೆ? ತಮಿಳು ನಟಿಗೆ ಹೋಲಿಸಿ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟ ವೇಣು ಸ್ವಾಮಿ | Venu Swamy Predictions On Kannada actress Sreeleela’s Career

bredcrumb

Telugu

oi-Narayana M

|

ಟಾಲಿವುಡ್‌
ಸೆಲೆಬ್ರೆಟಿ
ಜ್ಯೋತಿಷಿ
ವೇಣು
ಸ್ವಾಮಿ
ನಟ-
ನಟಿಯರ
ಬಗ್ಗೆ
ನೀಡುವ
ಹೇಳಿಕೆ
ಭಾರೀ
ಸದ್ದು
ಮಾಡುತ್ತದೆ.
ಪ್ರೀತಿ
ಮದುವೆಯಾಗಿದ್ದ
ಸಮಂತಾ-
ನಾಗಚೈತನ್ಯಾ
ದೂರಾಗುತ್ತಾರೆ
ಎಂದು
ಬಹಳ
ಹಿಂದೆಯೇ
ಹೇಳಿದ್ದರು.
ಅದು
ನಿಜವಾಗುತ್ತಿದ್ದಂತೆ
ಈತ
ಹೇಳುವ
ಭವಿಷ್ಯದ
ಬಗ್ಗೆ
ಭಾರೀ
ಕುತೂಹಲ
ಶುರುವಾಗಿದೆ.
ಯಶಸ್ಸಿಗಾಗಿ
ನಟಿಯರು
ಈತನ
ನೇತೃತ್ವದಲ್ಲಿ
ವಿಶೇಷ
ಪೂಜೆಗಳನ್ನು
ಮಾಡುತ್ತಿದ್ದಾರೆ.

ಬರೀ
ಸಮಂತಾ
ಹಾಗೂ
ಚೈತು
ಡಿವೋರ್ಸ್
ವಿಚಾರ
ಮಾತ್ರವಲ್ಲ
ಪ್ರಭಾಸ್,
ವಿಜಯ್
ದೇವರಕೊಂಡ
ಸಿನಿ
ಕರಿಯರ್
ವಿಚಾರದಲ್ಲೂ
ಈತ
ಹೇಳಿದ
ಭವಿಷ್ಯ
ನಿಜವಾಗುತ್ತಿದೆ
ಎಂದು
ಕೆಲವರು
ನಂಬಿದ್ದಾರೆ.
ನಟಿ
ರಶ್ಮಿಕಾ
ಕೂಡ
ವೇಣು
ಸ್ವಾಮಿ
ಆಣತಿಯಂತೆ
ತಾರಾದೇವಿ
ಪೂಜೆ
ಮಾಡಿದ
ಮೇಲೆ
ಆಕೆಗೆ
ಯಶಸ್ಸು
ಸಿಕ್ತು
ಎನ್ನಲಾಗುತ್ತದೆ.
ಇತ್ತೀಚೆಗೆ
ಕೆಲ
ನಟಿಯರು
ಇದೇ
ಹಾದಿಯಲ್ಲಿ
ಪೂಜೆಗಳನ್ನು
ಮಾಡುತ್ತಿದ್ದಾರೆ.
ಹಾಗಾಗಿ
ಒಂದರ್ಥದಲ್ಲಿ
ವೇಣು
ಸ್ವಾಮಿ
ಈಗ
ಸ್ಟಾರ್
ಸ್ಟೇಟಸ್
ಧಕ್ಕಿಸಿಕೊಂಡುಬಿಟ್ಟಿದ್ದಾರೆ.

Venu Swamy Predictions On Kannada actress Sreeleelas Career

ಆಗಿಂದಾಗ್ಗೆ
ಯೂಟ್ಯೂಬ್
ಸಂದರ್ಶನಗಳಲ್ಲಿ
ವೇಣು
ಸ್ವಾಮಿ
ಮಾತನಾಡಿ
ನಟ-ನಟಿಯರು
ಭವಿಷ್ಯ
ಹೇಳುವ
ಕೆಲಸ
ಮಾಡುತ್ತಾರೆ.
ಸದ್ಯ
ಕನ್ನಡದ
ನಟಿ
ಶ್ರೀಲೀಲಾ
ಬಗ್ಗೆ
ಕೂಡ
ವೇಣು
ಸ್ವಾಮಿ
ಮಾತನಾಡಿದ್ದಾರೆ.
ಜಾತಕ
ನೋಡಿ
ಆಕೆಯ
ಸಿನಿ
ಕರಿಯರ್
ಹೇಗಿರುತ್ತದೆ
ಎನ್ನುವುದನ್ನು
ವಿವರಿಸಿದ್ದಾರೆ.
ಇದೇ
ಈಗ
ಟಾಲಿವುಡ್‌ನಲ್ಲಿ
ಹಾಟ್
ಟಾಪಿಕ್
ಆಗಿದೆ.


ತೆಲುಗಿನಲ್ಲಿ
ಶ್ರೀಲೀಲಾ
ಫುಲ್
ಬ್ಯುಸಿ

ಕನ್ನಡದ
ಹುಡುಗಿ
ಶ್ರೀಲೀಲಾ
ಟಾಲಿವುಡ್‌ನಲ್ಲಿ
ಸಿಕ್ಕಾಪಟ್ಟೆ
ಬ್ಯುಸಿಯಾಗಿದ್ದಾರೆ.
‘ಪೆಳ್ಳಿ
ಸಂದಡಿ’
ಸಿನಿಮಾ
ಮೂಲಕ
ತೆಲುಗು
ಚಿತ್ರರಂಗಕ್ಕೆ
ಪರಿಚಿತಳಾದ
ಶ್ರೀ
ಬಹಳ
ಕಡಿಮೆ
ಅವಧಿಯಲ್ಲಿ
ಸ್ಟಾರ್
ಹೀರೋಯಿನ್
ಪಟ್ಟ
ಅಲಂಕರಿಸಿದ್ದಾರೆ.
ಪವನ್
ಕಲ್ಯಾಣ್,
ಮಹೇಶ್
ಬಾಬು,
ಬಾಲಕೃಷ್ಣ
ಮತ್ತು
ರಾಮ್
ಪೋತಿನೇನಿ,
ವಿಜಯ್
ದೇವರಕೊಂಡ
ರೀತಿಯ
ತೆಲುಗಿನ
ಟಾಪ್
ಹೀರೊಗಳ
ಜೊತೆ
ತೆರೆ
ಹಂಚಿಕೊಳ್ಳುತ್ತಿದ್ದಾರೆ.
ರಶ್ಮಿಕಾ,
ಪೂಜಾ
ಹೆಗ್ಡೆಗೆ
ಟಫ್
ಕಾಂಪಿಟೇಷನ್
ಕೊಡ್ತಿದ್ದಾರೆ.

5
ವರ್ಷ
ಕಿಸ್
ಬೆಡಗಿ
ಹವಾ

ಚಿತ್ರರಂಗಕ್ಕೆ
ಹೊಸ
ಹೊಸ
ನಟಿಯರು
ಬರುತ್ತಿರುತ್ತಾರೆ.
ಎಲ್ಲರ
ಜೊತೆ
ಪೈಪೋಟಿ
ನಡೆಸುತ್ತಾ
ಬಹಳ
ದಿನ
ಉಳಿದುಕೊಳ್ಳುವುದು
ಕಷ್ಟ.
ತಮನ್ನಾ,
ಕಾಜಲ್
ಅಗರ್‌ವಾಲ್,
ತ್ರಿಶಾ,
ಶ್ರಿಯಾ
ಶರಣ್
ಮಾತ್ರ
ಹಲವು
ವರ್ಷಗಳ
ಕಾಲ
ಚಿತ್ರರಂಗದಲ್ಲಿ
ಸ್ಟಾರ್
ನಟಿಯರಾಗಿ
ಮುನ್ನುಗ್ಗುತ್ತಿದ್ದಾರೆ.
ಅದೇ
ರೀತಿ
ಶ್ರೀಲೀಲಾ
ಸಿನಿ
ಕರಿಯರ್‌
ಬಗ್ಗೆ
ವೇಣು
ಸ್ವಾಮಿ
ಮಾತನಾಡಿದ್ದಾರೆ.
ಶ್ರೀಲೀಲಾ
ಅವರದ್ದು
ಮೀನ
ರಾಶಿ.
ಆಕೆಯ
ಜಾತಕದಲ್ಲಿ
ರಾಜಯೋಗವಿದೆ.
ಆದರೆ

ರಾಜಯೋಗ
ಬಹುಕಾಲ
ಇರುತ್ತದೆಯೇ
ಎಂದು
ಈಗಲೇ
ಹೇಳಲು
ಸಾಧ್ಯವಿಲ್ಲ
ಎಂದು
ವೇಣು
ಸ್ವಾಮಿ
ಹೇಳಿದ್ದಾರೆ.

ಶ್ರೀಲೀಲಾ-ನಯನ್
ಜಾತಕಗಳಿಗೆ
ಹೋಲಿಕೆ

ಸದ್ಯ
ಆಕೆಯ
ಗ್ರಹಬಲ
ನೋಡಿದರೆ
2028ರ
ವರೆಗೆ
ಶ್ರೀಲೀಲಾಗೆ
ಸೋಲೇ
ಇಲ್ಲ.
ಶ್ರೀಲೀಲಾ
ಮತ್ತು
ನಯನತಾರಾ
ಜಾತಕಗಳು
ಬಹುತೇಕ
ಒಂದೇ
ರೀತಿ
ಇದೆ.
ಆದರೆ
ನಯನತಾರಾ
ಸೌತ್‌ನಲ್ಲಿ
ಟಾಪ್‌
ಹೀರೋಯಿನ್‌
ಆಗಿ
ಮುಂದುವರೆದಿದ್ದಾರೆ.

ಮಟ್ಟಕ್ಕೆ
ಶ್ರೀಲೀಲಾ
ಹವಾ
ಇರುತ್ತದೋ
ಇಲ್ಲವೋ
ಗೊತ್ತಿಲ್ಲ
ಎಂದು
ವೇಣು
ಸ್ವಾಮಿ
ವಿವರಿಸಿದ್ದಾರೆ.
ಒಟ್ಟಾರೆಯಾಗಿ
ಇನ್ನು
5
ವರ್ಷ
ಶ್ರೀಲೀಲಾ
ಕಾರುಬಾರು
ಜೋರಾಗಿರುತ್ತದೆ
ಎಂದಿದ್ದಾರೆ.

8
ಸಿನಿಮಾಗಳಲ್ಲಿ
ಶ್ರೀಲೀಲಾ

ಅಚ್ಚರಿ
ಎಂದರೆ
ಕೇವಲ
3
ಸಿನಿಮಾಗಳಲ್ಲಿ
ನಟಿಸಿರುವ
‘ಕಿಸ್’
ಬೆಡಗಿ
ಸದ್ಯ
8ರಿಂದ
10
ಸಿನಿಮಾಗಳಿಗೆ
ಸಹಿ
ಮಾಡಿದ್ದಾರೆ.
ಪವನ್
ಕಲ್ಯಾಣ್‌
ಜೊತೆ
ಉಸ್ತಾದ್
ಭಗತ್
ಸಿಂಗ್,
ಬಾಲಯ್ಯನ
ತಂಗಿಯಾಗಿ
ಭಗವಂತ್
ಕೇಸರಿ,
ಮಹೇಶ್
ಬಾಬು
ಜೋಡಿಯಾಗಿ
ಗುಂಟೂರು
ಖಾರಂ
ಸಿನಿಮಾಗಳಲ್ಲಿ
ಬಣ್ಣ
ಹಚ್ಚಿದ್ದಾರೆ.
ಇನ್ನು
ರಾಮ್
ಪೋತಿನೇನಿ,
ವಿಜಯ್
ದೇವರಕೊಂಡ,
ನಿತಿನ್
ಹೀಗೆ
ಸ್ಟಾರ್
ನಟರ
ಕ್ರೇಜಿ
ಪ್ರಾಜೆಕ್ಟ್‌ಗಳಲ್ಲಿ
ನಟಿಸುತ್ತಿದ್ದಾರೆ.

ಟಾಲಿವುಡ್‌ನಲ್ಲಿ
ಮೋಡಿ

ಬೆಂಗಳೂರಿನ
ಬೆಡಗಿ
ಶ್ರೀಲೀಲಾ
ಮೊದಲಿಗೆ
ಕನ್ನಡದ
‘ಕಿಸ್’
ಸಿನಿಮಾದಲ್ಲಿ
ಬಣ್ಣ
ಹಚ್ಚಿದ್ದರು.
ನಂತರ
ಶ್ರೀಮುರಳಿ
ಜೋಡಿಯಾಗಿ
‘ಭರಾಟೆ’
ಮಾಡಿದರು.
ಅಷ್ಟರಲ್ಲೇ
ಕೆ.
ರಾಘವೇಂದ್ರ
ರಾವ್
ಕಣ್ಣಿಗೆ
ಬಿದ್ದು
‘ಪೆಳ್ಳಿ
ಸಂದಡಿ’
ಚಿತ್ರಕ್ಕೆ
ಆಯ್ಕೆ
ಆದರು.
ನಂತರ
‘ಬೈ
ಟು
ಲವ್’
ಕನ್ನಡ
ಸಿನಿಮಾದಲ್ಲಿ
ಮಿಂಚಿದರು.
ಧಮಾಕಾ
ಚಿತ್ರದಲ್ಲಿ
ರವಿತೇಜಾ
ಜೊತೆ
ಶ್ರೀ
ಮೋಡಿ
ಮಾಡಿದರು.
ಅಂದ
ಚೆಂದ,
ಡ್ಯಾನ್ಸ್‌ನಿಂದ
ತೆಲುಗು
ಪ್ರೇಕ್ಷಕರ
ಮನಗೆದ್ದರು.
ಹಾಗಾಗಿ
ಈಗ
ಟಾಲಿವುಡ್‌ನಲ್ಲಿ
ಅವಕಾಶಗಳ
ಸುರಿಮಳೆಯಾಗುತ್ತಿದೆ.

English summary

Venu Swamy about Kannada Sreeleela’s Career. he compared her Career with Nayanatara’s career. know more.

Sunday, July 30, 2023, 17:32

Source link