ಯಾವಾಗಲೂ ಪ್ರೀತಿಯಲ್ಲಿ ಇರುತ್ತೇನೆ ಎಂದ ಧವನ್
ಇತ್ತೀಚೆಗೆ, ತಮ್ಮ ರಿಲೇಶನ್‌ಶಿಪ್ ಬಗ್ಗೆ ಶಿಖರ್ ಧವನ್ ಮಾತನಾಡಿದ್ದರು. ದಿ ಸ್ಟೇಟ್ಸ್‌ಮನ್ ವರದಿಯ ಪ್ರಕಾರ, ಶಿಖರ್, “ಹೌದು, ನಾನು ಮುಂದೆ ಸಾಗುತ್ತಿದ್ದೇನೆ. ನಾನು ಪ್ರೀತಿಯಲ್ಲಿ ದುರದೃಷ್ಟಶಾಲಿ ಎಂದು ಹೇಳುವುದಿಲ್ಲ. ಬದಲಿಗೆ, ನನಗೆ ಅನುಭವವಿರಲಿಲ್ಲ. ಈಗ ನನಗೆ ಅನುಭವವಿದೆ, ಅಲ್ಲದೆ ಅದು ಉಪಯೋಗಕ್ಕೆ ಬರುತ್ತದೆ” ಎಂದು ಹೇಳಿದರು. ಪ್ರೀತಿಯಲ್ಲಿ ಬೀಳಲು ಸಿದ್ಧರಿದ್ದೀರಾ ಎಂದು ಕೇಳಿದಾಗ ಉತ್ತರಿಸಿದ ಧವನ್, “ನಾನು ಯಾವಾಗಲೂ ಪ್ರೀತಿಯಲ್ಲಿರುತ್ತೇನೆ” ಎಂದು ಹೇಳಿದರು.