India
oi-Mamatha M
ಇಂಪಾಲ, ಜೂನ್. 27: ಮಣಿಪುರದ ಮಹಿಳಾ ಕಾರ್ಯಕರ್ತರು ಹಿಂಸಾಚಾರ ಪೀಡಿತ ರಾಜ್ಯದಲ್ಲಿ ತನ್ನ ಕಾರ್ಯಾಚರಣೆಯನ್ನು ನಿರ್ಬಂಧಿಸುತ್ತಿದ್ದಾರೆ ಮತ್ತು ಶಾಂತಿಯನ್ನು ಪುನಃಸ್ಥಾಪಿಸುವ ನಮ್ಮ ಪ್ರಯತ್ನಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ.
“ಮಣಿಪುರದ ಮಹಿಳಾ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ನಮ್ಮ ಮಾರ್ಗಗಳನ್ನು ನಿರ್ಬಂಧಿಸುತ್ತಿದ್ದಾರೆ ಮತ್ತು ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಜೀವ ಮತ್ತು ಆಸ್ತಿಯನ್ನು ಉಳಿಸಲು ನಿರ್ಣಾಯಕ ಸಂದರ್ಭಗಳಲ್ಲಿ ಭದ್ರತಾ ಪಡೆಗಳ ಸಮಯೋಚಿತ ಪ್ರತಿಕ್ರಿಯೆಗೆ ಇಂತಹ ಅನಗತ್ಯ ಹಸ್ತಕ್ಷೇಪವು ಹಾನಿಕಾರಕವಾಗಿದೆ” ಎಂದು ಹೇಳಿದೆ.
” ರಾಜ್ಯದಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ನಮ್ಮ ಪ್ರಯತ್ನಗಳನ್ನು ಬೆಂಬಲಿಸುವಂತೆ ಭಾರತೀಯ ಸೇನೆಯು ಎಲ್ಲಾ ವರ್ಗದ ಜನತೆಗೆ ಮನವಿ ಮಾಡುತ್ತದೆ. ಮಣಿಪುರಕ್ಕೆ ಸಹಾಯ ಮಾಡಲು ನೀವು ನಮಗೆ ಸಹಾಯ ಮಾಡಿ” ಎಂದು ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ಟ್ವೀಟ್‌ನಲ್ಲಿ ತಿಳಿಸಿದೆ.
ಮಣಿಪುರದ ಇಥಾಮ್ ಗ್ರಾಮದಲ್ಲಿ ಮಹಿಳೆಯರು ಮತ್ತು ಸ್ಥಳೀಯ ನಾಯಕರ ನೇತೃತ್ವದಲ್ಲಿ ಸುಮಾರು 1,500 ಜನರ ಗುಂಪು ಆ ಪ್ರದೇಶವನ್ನು ಸುತ್ತುವರೆದಿದ್ದರಿಂದ ಭದ್ರತಾ ಪಡೆಗಳು ಬಂಡುಕೋರ ಗುಂಪಿನ 12 ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕಾಯಿತು. ಇದಾದ ಕೆಲವು ಗಂಟೆಗಳ ನಂತರ ಸೇನೆಯ ಜನರಿಗೆ ಸಹಯಾ ಮಾಡುವಂತೆ ಮನವಿ ಮಾಡಿ ಟ್ವೀಟ್ ಮಾಡಿದೆ.
ಮಣಿಪುರದ ಎಲ್ಲಾ ಗುಂಪುಗಳ ಜೊತೆ ಕೇಂದ್ರ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲಿ: ರಾಜಕೀಯ ಪಕ್ಷಗಳ ಆಗ್ರಹ
ಕಾರ್ಯಾಚರಣೆಯನ್ನು ಮುಂದುವರಿಸಲು ಪಡೆಗಳಿಗೆ ಅವಕಾಶ ನೀಡುವಂತೆ ಜನಸಮೂಹಕ್ಕೆ ಪದೇ ಪದೇ ಮನವಿ ಮಾಡಿದರೂ, ಅವರ ಪ್ರಯತ್ನಗಳು ವ್ಯರ್ಥವಾಯಿತು ಎಂದು ಸೇನೆ ಹೇಳಿಕೊಂಡಿದೆ. ದೊಡ್ಡ ಮತ್ತು ವಿಶೇಷವಾಗಿ ಮಹಿಳೆಯರ ನೇತೃತ್ವದಲ್ಲಿ ಬಂದ ಗುಂಪಿನ ವಿರುದ್ಧವಾಗಿ ಕಾರ್ಯಾಚರಣೆ ನಡೆಸುವುದು ಮತ್ತಿ ಅದರಿಂದ ಉಮಟಾಗುವ ಸಂಭವನೀಯ ಅಪಾಯಗಳು ಮತ್ತು ಸಾವುನೋವುಗಳನ್ನು ಪರಿಗಣಿಸಿ, ಎಲ್ಲಾ 12 ಬಂಧಿತ ಕಾರ್ಯಕರ್ತರನ್ನು ಸ್ಥಳೀಯ ನಾಯಕನಿಗೆ ಹಸ್ತಾಂತರಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಟ್ವಿಟರ್ ಪೋಸ್ಟ್ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯ, ಭಾರತೀಯ ಸೇನೆಯ ಪೂರ್ವ ಕಮಾಂಡ್ ಮತ್ತು ಅಸ್ಸಾಂ ರೈಫಲ್ಸ್ ಅನ್ನು ಟ್ಯಾಗ್ ಮಾಡಿದೆ. ಬಿಡುಗಡೆ ಮಾಡಿದವರಲ್ಲಿ 6 ನೇ ಡೋಗ್ರಾ ರೆಜಿಮೆಂಟ್‌ನ 18 ಸೈನಿಕರನ್ನು ಕೊಂದ 2015 ರ ಹೊಂಚುದಾಳಿಯ ಹಿಂದಿನ ಮಾಸ್ಟರ್‌ಮೈಂಡ್, ಸ್ವಯಂ-ಶೈಲಿಯ ಲೆಫ್ಟಿನೆಂಟ್ ಕರ್ನಲ್ ಮೊಯಿರಾಂಗ್‌ಥೆಮ್ ತಾಂಬಾ ಎಂದು ಸೇನೆಯು ಒಬ್ಬ ವ್ಯಕ್ತಿಯನ್ನು ಗುರುತಿಸಿದೆ.
Women activists in #Manipur are deliberately blocking routes and interfering in Operations of Security Forces. Such unwarranted interference is detrimental to the timely response by Security Forces during critical situations to save lives and property.
🔴 Indian Army appeals to… pic.twitter.com/Md9nw6h7Fx— SpearCorps.IndianArmy (@Spearcorps) June 26, 2023
ಸೇನೆಯು 2 ನಿಮಿಷ 12 ಸೆಕೆಂಡುಗಳ ಅವಧಿಯ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಇದು ಹಲವಾರು ಕಾರ್ಯಾಚರಣೆಗಳ ದೃಶ್ಯಗಳನ್ನು ತೋರಿಸುತ್ತದೆ. ಮಹಿಳಾ ಕಾರ್ಯಕರ್ತರು ಬಂಡುಕೋರರನ್ನು ಪಲಾಯನ ಮಾಡಲು ಸಹಾಯ ಮಾಡುತ್ತಿದ್ದಾರೆ. ಹಗಲು ಅಥವಾ ರಾತ್ರಿಯಲ್ಲಿ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ, ಸೇನೆಯ ಚಲನವಲನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ನಾಲ್ಕು ಗಂಭೀರ ಆರೋಪಗಳನ್ನು ಮಾಡಿದೆ.
English summary
Manipur violence: Indian Army said women activists in Manipur are blocking its operations after women-led mob forces militants’ release. know more.