‘ಶಕ್ತಿ’ ವಿದ್ಯಾರ್ಥಿನಿಯರ ಶೂನ್ಯ ಟಿಕೆಟ್ ದಾಖಲೆಗೆ ಆದೇಶ | Shakti Scheme Zero Payment Ticket For Students Circular

Karnataka

oi-Gururaj S

|

Google Oneindia Kannada News

ಬೆಂಗಳೂರು, ಜೂನ್ 21; ಕರ್ನಾಟಕದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ‘ಶಕ್ತಿ’ ಯೋಜನೆ ಜಾರಿಗೆ ಬಂದಿದೆ. ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರಿನ ಕಚೇರಿ ಸುತ್ತೋಲೆಯೊಂದನ್ನು ಹೊರಡಿಸಿದೆ. ವಿದ್ಯಾರ್ಥಿನಿಯರ ಶೂನ್ಯ ಟಿಕೆಟ್ ದಾಖಲಿಸುವ ಬಗ್ಗೆ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. 7/6/2023ರ ಆದೇಶ ಉಲ್ಲೇಖಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ; ಚಿಗರಿ ಬಸ್‌ನಲ್ಲಿ ಮಹಿಳೆಯರಿಗೆ 'ಶಕ್ತಿ' ಏಕಿಲ್ಲ? ಹುಬ್ಬಳ್ಳಿ-ಧಾರವಾಡ; ಚಿಗರಿ ಬಸ್‌ನಲ್ಲಿ ಮಹಿಳೆಯರಿಗೆ ‘ಶಕ್ತಿ’ ಏಕಿಲ್ಲ?

Shakti Scheme

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿನ ವಿದ್ಯಾರ್ಥಿ ಉಚಿತ/ ರಿಯಾಯಿತಿ ಬಸ್ ಪಾಸುಗಳನ್ನು ಇಡಿಸಿಎಸ್ ಇಲಾಖೆಯ ಸೇವಾಸಿಂಧು ತಂತ್ರಾಂಶದ ಮುಖಾಂತರ ಯಾಂತ್ರೀಕೃತವಾಗಿ ವಿತರಣೆ ಮಾಡಲು ಕ್ರಮವಹಿಸುತ್ತಿದ್ದು, ಅದರಂತೆ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಲು ದಿನಾಂಕ 12/06/2023 ರಿಂದ ಗೋ-ಲೈವ್ ನೀಡಿ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಹೇಳಿದೆ.

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ಮತ್ತೆ ಜೂನ್ 30 ರವರೆಗೆ ವಿಸ್ತರಣೆ:KSRTCಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ಮತ್ತೆ ಜೂನ್ 30 ರವರೆಗೆ ವಿಸ್ತರಣೆ:KSRTC

ವಿದ್ಯಾರ್ಥಿ ಪಾಸುಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಮತ್ತಷ್ಟು ಕಾಲಾವಕಾಶ ನೀಡುವ ಸಲುವಾಗಿ ದಿನಾಂಕ 30/06/2023 ರವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿರುತ್ತದೆ.
ಮುಂದುವರೆದು, ಸಾಮಾನ್ಯ ಸ್ಥಾಯಿ ಆದೇಶದನ್ವಯ ದಿನಾಂಕ 11/06/2023ರಿಂದ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದೆ.

'ಶಕ್ತಿ’ ಯೋಜನೆಯಡಿ ಉಚಿತವಾಗಿ 3ನೇ ದಿನ ಪ್ರಯಾಣಿಸಿದ ಮಹಿಳೆಯರೆಷ್ಟು? ‘ಶಕ್ತಿ’ ಯೋಜನೆಯಡಿ ಉಚಿತವಾಗಿ 3ನೇ ದಿನ ಪ್ರಯಾಣಿಸಿದ ಮಹಿಳೆಯರೆಷ್ಟು?

ಪಾಸ್ ಪಡೆಯುವುದು ಕಡ್ಡಾಯವಲ್ಲ; ಪ್ರಸ್ತುತ ರಾಜ್ಯದ ವಿದ್ಯಾರ್ಥಿನಿಯರಿಗೂ ಸಹ ಉಚಿತ ಪ್ರಯಾಣ ಸೌಲಭ್ಯ ವಿಸ್ತರಣೆಗೆ ಸರ್ಕಾರದ ನಿರ್ದೇಶನವಿದ್ದು, ಶಾಲಾ/ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಹಿಂದಿನ ವರ್ಷದ ಬಸ್ ಪಾಸ್ ಅಥವಾ ಶುಲ್ಕ ಪಾವತಿ ರಶೀದಿ ಆಧಾರದ ಮೇಲೆ ಉಚಿತವಾಗಿ ಪ್ರಯಾಣಿಸಲು ಅನುಮತಿಸುವಾಗ ‘ಶೂನ್ಯ ಟಿಕೆಟ್’ ಅನ್ನು ಕಡ್ಡಾಯವಾಗಿ ವಿತರಿಸುವುದು ಎಂದು ತಿಳಿಸಿದೆ.

ವಿದ್ಯಾರ್ಥಿನಿಯರಿಗೆ ಸೇವಾಸಿಂಧು ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವಾಗ ‘ಶಕ್ತಿ’ ಯೋಜನೆಯ ಬಗ್ಗೆ ಮಾಹಿತಿ ಬರಲಿದ್ದು, ವಿದ್ಯಾರ್ಥಿ ಬಸ್ ಪಾಸ್ ಪಡೆಯುವುದು ಕಡ್ಡಾಯವಿರುವುದಿಲ್ಲ. ಒಂದು ವೇಳೆ ನಿಯಮಾವಳಿಯನ್ವಯ 2023-24ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್‌ ಅನ್ನು ಹೆಣ್ಣು ಮಕ್ಕಳು ಪಡೆದಿದ್ದಲ್ಲಿ, ಪಾಸಿನಲ್ಲಿ ನಮೂದಿಸಿದ ಮಾರ್ಗದಲ್ಲಿ ಮಾತ್ರ ಉಚಿತವಾಗಿ ಶೂನ್ಯ ಟಿಕೆಟ್ ಇಲ್ಲದೇ ಉಚಿತವಾಗಿ ಪ್ರಯಾಣಿಸಬಹುದು. ಇತರೆಡೆ ಪ್ರಯಾಣಿಸುವಾಗ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶೂನ್ಯ ಟಿಕೆಟ್ ವಿತರಿಸುವುದು.

ಅದರಂತೆ ಎಲ್ಲಾ ವಿದ್ಯಾರ್ಥಿನಿಯರಿಗೆ ‘ಶೂನ್ಯ ಟಿಕೆಟ್’ ವಿತರಿಸುವ ಸಂಬಂಧ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡುವಂತೆ ಹಾಗೂ ಈ ವಿಷಯದಲ್ಲಿ ಕೈಗೊಂಡ ಕ್ರಮದ ಬಗ್ಗೆ ಈ ಕಛೇರಿಗೆ ಅನುಸರಣಾ ವರದಿ ನೀಡುವಂತೆ ಕೋರಲಾಗಿದೆ ಎಂದು ಹೇಳಿದೆ.

English summary

KSRTC circular to issue zero payment ticket for the students under Shakti scheme.

Source link