ಶಕ್ತಿ ಯೋಜನೆ ಪರಿಣಾಮ: ಸಾರಿಕೆ ಇಲಾಖೆ ಸರಾಸರಿ ಆದಾಯದಲ್ಲಿ ಭಾರೀ ಏರಿಕೆ- ಕುತೂಹಲಕರ ಅಂಕಿಅಂಶ, ವಿವರ ತಿಳಿಯಿರಿ | Shakti Scheme: Huge increase in average income of transport department- Details

Karnataka

oi-Ravindra Gangal

|

Google Oneindia Kannada News

ಬೆಂಗಳೂರು, ಜೂನ್‌ 30: ಕರ್ನಾಟಕ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ. ಶಕ್ತಿ ಯೋಜನೆ ಪ್ರಾರಂಭವಾದಾಗಿನಿಂದ, ಕರ್ನಾಟಕದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ (ಆರ್‌ಟಿಸಿ) ಸರಾಸರಿ ದೈನಂದಿನ ಆದಾಯದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಸಾರಿಕೆ ಇಲಾಖೆ ನೀಡಿದೆ.

ಸಾರಿಗೆ ಇಲಾಖೆಯ ಸರಾಸರಿ ಆದಾಯದಲ್ಲಿ ಶೇಕಡಾ 18.01 ರಷ್ಟು ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಐದು ಚುನಾವಣಾ ಭರವಸೆಗಳಲ್ಲಿ ಒಂದಾದ ಶಕ್ತಿ ಯೋಜನೆಯನ್ನು ಜೂನ್ 11 ರಂದು ಜಾರಿಗೆ ತರಲಾಯಿತು.

Shakti Scheme: Huge increase in average income of transport department- Details

ಸಾರಿಗೆ ಇಲಾಖೆಯ ಅಂಕಿಅಂಶಗಳ ಪ್ರಕಾರ, ಎಲ್ಲಾ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು (KKRTC) ಆದಾಯದಲ್ಲಿ ಗಮನಾರ್ಹ ಏರಿಕೆಯನ್ನು ತೋರಿಸಿದೆ. ಯೋಜನೆ ಜಾರಿಯಾಗಿ ಸುಮಾರು 20 ದಿನಗಳಲ್ಲಿ ನಡೆದ ಈ ಮಹತ್ವದ ಮಾಹಿತಿಯನ್ನು ಸಾರಿಗೆ ಇಲಾಖೆ ಹಂಚಿಕೊಂಡಿದೆ.

ಯೋಜನೆಯ ನಂತರ, KSRTC ಸರಾಸರಿ ದೈನಂದಿನ ಆದಾಯವು 9.95 ಕೋಟಿ ರೂ.ಗಳಿಂದ 11.51 ಕೋಟಿ ರೂ.ಗೆ ಏರಿದೆ. BMTC ಆದಾಯವು 4.72 ಕೋಟಿಯಿಂದ ರೂ ನಿಂದ 5.18 ಕೋಟಿಗೆ ಏರಿಕೆ ಕಂಡಿದೆ. NWKRTC ಆದಾಯವು 4.90 ಕೋಟಿ ರೂಪಾಯಿಯಿಂದ 6.43 ಕೋಟಿ ರೂಪಾಯಿಗೆ ಏರಿಕೆ ಆಗಿದೆ.

NWKRTC 31.22 ಶೇಕಡಾ ಸರಾಸರಿ ಆದಾಯದಲ್ಲಿ ಅತ್ಯಧಿಕ ಏರಿಕೆ ಕಂಡಿದೆ. ನಂತರ KKRTC ಶೇಕಡಾ 17.51, KSRTC ಶೇಕಡಾ 15.68 ಮತ್ತು BMTC ಶೇಕಡಾ 9.74 ರಷ್ಟು ಏರಿಕೆ ಕಂಡಿದೆ.

Shakti Scheme: Huge increase in average income of transport department- Details

ಸರಾಸರಿ ದೈನಂದಿನ ಆದಾಯದಲ್ಲಿ ( ಮಹಿಳಾ ಪ್ರಯಾಣಿಕರನ್ನು ಹೊರತುಪಡಿಸಿ ) KSRTC, BMTC, NWKRTC ಮತ್ತು KKRTC ಕ್ರಮವಾಗಿ ರೂ 7.01 ಕೋಟಿ, ರೂ 3.08 ಕೋಟಿ, ರೂ 3.31 ಕೋಟಿ ಮತ್ತು ರೂ 3.47 ಕೋಟಿ ರೂಪಾಯಿ ಏರಿಕೆ ಕಂಡಿದೆ.

ಹೆಚ್ಚಿದ ಸರಾಸರಿ ದೈನಂದಿನ ಪ್ರಯಾಣಿಕ ಪ್ರಮಾಣ

ಜೂನ್ 11 ರಿಂದ, ನಾಲ್ಕು RTC ಗಳಲ್ಲಿ ಪ್ರಯಾಣಿಸುವ ಪುರುಷರು ಮತ್ತು ಮಹಿಳೆಯರು – ದೈನಂದಿನ ಪ್ರಯಾಣಿಕರ ಸರಾಸರಿ ಸಂಖ್ಯೆಯಲ್ಲಿ 28.39 ಶೇಕಡಾ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

34.72 ರಷ್ಟು KKRTC ಯಲ್ಲಿ ಹೆಚ್ಚಾಗಿದೆ. ನಂತರದಲ್ಲಿ ಎನ್‌ಡಬ್ಲ್ಯುಕೆಆರ್‌ಟಿಸಿ ಶೇ.33.75, ಕೆಎಸ್‌ಆರ್‌ಟಿಸಿ ಶೇ.30.14 ಮತ್ತು ಬಿಎಂಟಿಸಿ ಶೇ.21.75 ಏರಿಕೆ ಕಂಡುಬಂದಿದೆ.

Shakti Scheme: Huge increase in average income of transport department- Details

ಎನ್‌ಡಬ್ಲ್ಯೂಕೆಆರ್‌ಟಿಸಿಯು ಶಕ್ತಿ ಯೋಜನೆಯ ಲಾಭ ಪಡೆಯುವ ಮಹಿಳಾ ಪ್ರಯಾಣಿಕರಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ ಎಂದು ಡೇಟಾ ತೋರಿಸಿದೆ. ಆ ನಂತರ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿಗಳು ಇವೆ.

ಇಲ್ಲಿಯವರೆಗೆ, ಕರ್ನಾಟಕದಲ್ಲಿ ಪ್ರೀಮಿಯಂ ಅಲ್ಲದ ಸರ್ಕಾರಿ ಬಸ್‌ಗಳಲ್ಲಿ 9,95,91,260 ಜನರು ಉಚಿತವಾಗಿ ಪ್ರಯಾಣಿಸಿದ್ದಾರೆ. 234,49,65,394 ರೂ ಮೌಲ್ಯದ ಟಿಕೆಟ್‌ಗಳನ್ನು ನೀಡಲಾಗಿದೆ ಎಂದು ಸಾರಿಗೆ ಇಲಾಖೆಯ ಇತ್ತೀಚಿನ ಅಂಕಿಅಂಶಗಳು ಬಹಿರಂಗಪಡಿಸಿವೆ.

English summary

Shakti Scheme: Officials said that the average revenue of the Karnataka Transport Department has increased by 18.01 percent,

Story first published: Friday, June 30, 2023, 19:43 [IST]

Source link