Hubballi
lekhaka-Sandesh R Pawar
ಹುಬ್ಬಳ್ಳಿ, ಜೂನ್ 23: ಕುಂದಗೋಳದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಬಸ್‌ನಲ್ಲಿದ್ದ ನಿರ್ವಾಹಕಿಯೊಬ್ಬರು ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಘಟನೆ ಇಂದು ಬೆಳಗಿನ ಜಾವ ನಡೆದಿದ್ದು, ನಿರ್ವಾಹಕಿಯ ವರ್ತನೆಗೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳ್ಳಗ್ಗೆ 7 ಗಂಟೆಗೆ ಕುಂದಗೋಳದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಮಾರ್ಗ ಮಧ್ಯ ಶರೇವಾಡ ಬಳಿ ನಿರ್ವಾಹಕಿ ವೃದ್ಧ ಮಹಿಳೆಯ ಜೊತೆ ಜಗಳ ತೆಗೆದಿದ್ದಾರೆ. ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ನಿರ್ವಾಹಕಿ ವೃದ್ಧೆ ಎಂಬುದನ್ನು ನೋಡದೆ ವೃದ್ಧೆಗೆ ಕಪಾಳ ಮೋಕ್ಷವನ್ನು ಮಾಡಿದ್ದಾರೆ. ಇದನ್ನು ನೋಡುತ್ತಿದ್ದ ಸಹ ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಈ ವಿಡಿಯೋ ಸೆರೆ ಹಿಡಿದಿದ್ದಾರೆ.
ವೃದ್ಧೆ ಎಂಬುದನ್ನು ನೋಡದೆ ಪ್ರಯಾಣಿಕರ ಸಮ್ಮುಖದಲ್ಲಿಯೇ ಕಪಾಳ ಮೋಕ್ಷ ಮಾಡಿದ ನಿರ್ವಾಹಕಿಯ ಮೇಲೆ ಹಿರಿಯ ಸಾರಿಗೆ ಇಲಾಖೆಯ ಅಧಿಕಾರಿಗಳು ಯಾವ ರೀತಿಯಾದ ಕ್ರಮವನ್ನು ಕೈಗೂಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಬಸ್ ನಿರ್ವಾಹಕಿಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಹುಬ್ಬಳ್ಳಿ: ಸರ್ಕಾರಿ ಶಾಲೆಗಳ ಅಂದ ಹೆಚ್ಚಿಸಿದ ಮಹಿಳಾ ತಂಡ, ಭಾರೀ ಮೆಚ್ಚುಗೆ
ನಡುರಸ್ತೆಯಲ್ಲಿಯೇ ಕೆಟ್ಟು ನಿಂತ ದಂಪತಿಗಳಿದ್ದ ಕಾರು ಮಾನವೀಯತೆ ಮೆರೆದ ಸಂಚಾರಿ ಪೊಲೀಸ್
ಹುಬ್ಬಳ್ಳಿ: ನಮಗೆಲ್ಲ ಸಂಚಾರಿ ಪೊಲೀಸರು ಎಂದರೆ ರಸ್ತೆ ಬದಿಯಲ್ಲಿ ಕೈಯಲ್ಲಿ ಮಷೀನ್ ಹಿಡ್ಕೊಂಡು ದಂಡ ಹಾಕುತ್ತಾರೆ ಎನ್ನುವುದು ಹಲವರ ಭಾವನೆ. ಆದರೆ ಪೊಲೀಸರು ಸಹ ಮಾನವಿಯತೆಗೆ ಮಿಡಿಯುವ ಹೃದಯಗಳು ಎನ್ನುವುದಕ್ಕೆ ಕೆಲವೊಂದಿಷ್ಟು ದೃಶ್ಯಗಳು ಸಾಕ್ಷಿಯಾಗುತ್ತವೆ.
ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿನ ಮಾಪಸಾಲ ಡಿಪೋ ಬಳಿ ನಡು ರಸ್ತೆಯಲ್ಲಿಯೇ ಕಾರೊಂದು ಕೆಟ್ಟು ನಿಂತ ಪರಿಣಾಮ ಕಾರಿನಲ್ಲಿದ್ದ ಮಹಿಳೆ ಇಳಿದು ಕಾರನ್ನು ತಳ್ಳುತ್ತಿದ್ದರು. ಆದರೆ ಕಾರು ಮುಂದೆ ಹೋಗುತ್ತಿರಲಿಲ್ಲ. ಕೂಡಲೇ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಉತ್ತರ ಸಂಚಾರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಕಲ್ಮೇಶ ಕಮ್ಮಾರ ಈ ದೃಶ್ಯವನ್ನು ನೋಡಿ ಕರ್ತವ್ಯ ನಿರ್ವಹಿಸುತ್ತಲೇ ಕಾರನ್ನು ತಳ್ಳಿ ದಂಪತಿಗೆ ಸಹಾಯ ಮಾಡಿದ್ದಾರೆ.
ಟ್ರಾಫಿಕ್ ಪೊಲೀಸರು ಎಂದರೆ ಸಾಕು ಯಾವುದೇ ಮನುಷ್ಯತ್ವ ಇಲ್ಲದೆ ಸಾರ್ವಜನಿಕರಿಂದ ಹಣ ಪೀಕುತ್ತಾರೆ ಎಂಬ ಮಾತುಗಳು ಸಾರ್ವಜನಿಕರಲ್ಲಿ ಮನದಲ್ಲಿರುವಾಗ ಟ್ರಾಫಿಕ್ ಪೊಲೀಸರಲ್ಲಿ ಕೂಡಾ ಮಾನವಿಯತೆಯ ಗುಣವಿದೆ ಎನ್ನುವುದನ್ನು ತೋರಿಸಲು ಇಂತಹ ದೃಶ್ಯಗಳೇ ಸಾಕ್ಷಿ.
English summary
KSRTC Bus lady conductor assault on old woman At Hubballi, Video goes viral, Know more
Story first published: Friday, June 23, 2023, 11:54 [IST]