ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿದ ನೀರಜ್ ಚೋಪ್ರಾ; ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಅರ್ಹತೆ

ಗ್ರೂಪ್ ಎ ಕ್ವಾಲಿಫೈಯರ್‌ನಲ್ಲಿ ಸ್ಥಾನ ಪಡೆದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್, ತಮ್ಮ ಮೊದಲ ಪ್ರಯತ್ನದಲ್ಲೇ 88.77 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ಪಟ್ಟಿಯಲ್ಲಿ ಅಗ್ರಸ್ಥಾನಿಯಾದರು. ಫೈನಲ್‌ಗೆ ಅರ್ಹತೆ ಪಡೆಯಲು ಕನಿಷ್ಠ 83.00 ಮೀಟರ್‌ಗಳ ಗಡಿ ಇತ್ತು. ವಿಶ್ವದ ಅಗ್ರ ಶ್ರೇಯಾಂಕದ ಜಾವೆಲಿನ್ ಆಟಗಾರನಾಗಿ ಚಾಂಪಿಯನ್‌ಶಿಪ್‌ ಪ್ರವೇಶಿಸಿದ ನೀರಜ್, ಫೈಣಲ್‌ನಲ್ಲಿ ಸ್ಥಾನ ಪಡೆಯಲು ಎರಡನೇ ಮತ್ತು ಮೂರನೇ ಪ್ರಯತ್ನಗಳನ್ನು ತೆಗೆದುಕೊಳ್ಳುವ ಅಗತ್ಯವೇ ಬೀಳಲಿಲ್ಲ.

Source link