ವಿಶ್ವದ ಅತ್ಯಂತ ದುಬಾರಿ ಮಾವು ಬೆಳೆದ ರೈತ!, ಅದರ ಬೆಲೆ 3 ಲಕ್ಷ ರೂ. | An Odisha farmer grew the world’s most expensive mango, costing Rs 3 lakh

India

oi-Punith BU

|

Google Oneindia Kannada News

ಕಾಳಹಂದಿ, ಜುಲೈ 27: ಈಗ ದೇಶಾದ್ಯಂತ ದುಬಾರಿ ಎಂದರೆ ಟೊಮೇಟೊ ಎಂದು ಎಲ್ಲರು ಹೇಳುತ್ತಿದ್ದಾರೆ. ಆದರೆ ಇದಕ್ಕಿಂತಲೂ ದುಬಾರಿ ಹಣ್ಣು ಇಲ್ಲಿದೆ. ಅದನ್ನು ರೈತರೊಬ್ಬರು ಬೆಳೆದಿದ್ದಾರೆ. ಅದು ಏನು ಅದರ ಬಗ್ಗೆ ತಿಳಿಯೋಣ ಬನ್ನಿ.

ಒಡಿಶಾದ ಕಲಹಂಡಿ ಜಿಲ್ಲೆಯ ರೈತ ಮತ್ತು ಶಿಕ್ಷಕರೂ ಆಗಿರುವ ರಕ್ಷ್ಯಕರ್ ಭೋಯ್ ಅವರು ತಮ್ಮ ತೋಟದಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವಿನ ಮಿಯಾಜಾಕಿ ಅನ್ನು ಬೆಳೆದಿರುವುದಾಗಿ ಹೇಳಿದ್ದಾರೆ. ಮಿಯಾಝಾಕಿ ಮಾವಿನ ವಿಶಿಷ್ಟ ರುಚಿ ಮತ್ತು ಆಹಾರದ ಮೌಲ್ಯಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 2.5 ಲಕ್ಷದಿಂದ 3 ಲಕ್ಷ ರೂ. ಬೆಲೆ ಇದೆ.

An Odisha farmer grew the worlds most expensive mango, costing Rs 3 lakh

ಈ ದುಬಾರಿ ಮಾವನ್ನು ರೈತ ರಕ್ಷ್ಯಕರ್ ಭೋಯ್ ತಮ್ಮ ಜಮೀನಿನಲ್ಲಿ ವಿವಿಧ ತಳಿಯ ಮಾವನ್ನು ಬೆಳೆಯುತ್ತಿದ್ದಾರೆ. ರಾಜ್ಯ ತೋಟಗಾರಿಕಾ ಇಲಾಖೆ ಮೂಲಕ ಅದರ ಬೀಜವನ್ನು ಪಡೆದ ನಂತರ ಅವರು ತಮ್ಮ ತೋಟದಲ್ಲಿ ಮಿಯಾಜಾಕಿ ತಳಿಯನ್ನು ಬೆಳೆಯಲು ಆರಂಭಿಸಿದ್ದಾರೆ.

ಮಿಯಾಜಾಕಿ ಪ್ರಭೇದವು ಮೂಲತಃ ಜಪಾನಿನ ತಳಿಯಾಗಿದೆ. ಅದರ ವಿಶಿಷ್ಟ ಸುವಾಸನೆ ಮತ್ತು ಔಷಧೀಯ ಮೌಲ್ಯಕ್ಕಾಗಿ ಇದು ವಿದೇಶಗಳಲ್ಲಿ ಭಾರಿ ಬೇಡಿಕೆಯನ್ನು ಹೊಂದಿದೆ. ಈ ವಿಧದ ಮಾವು ಅದರ ನೋಟದಲ್ಲಿ ತುಂಬಾ ವರ್ಣರಂಜಿತವಾಗಿದೆ. ಮಾತ್ರವಲ್ಲದೇ ವಿಶಿಷ್ಟ ರುಚಿಯನ್ನು ಹೊಂದಿದೆ. ಇದು ಇತರ ಮಾವಿನ ತಳಿಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಏಕೆಂದರೆ ಇದರಲ್ಲಿ ವಿಟಮಿನ್ ಎ ಮತ್ತು ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿವೆ. ಇದು ದೇಹವನ್ನು ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರಲ್ಲಿ ಆಹಾರದ ನಾರು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕೂಡ ಇದೆ ಎಂದು ರಕ್ಷ್ಯಕರ್ ಭೋಯ್ ಹೇಳಿದರು.

ಕಲಹಂಡಿ ಸಹಾಯಕ ತೋಟಗಾರಿಕಾ ನಿರ್ದೇಶಕ ಟಂಕಧರ ಕಾಳೋ ಮಾತನಾಡಿ, ಈ ರೀತಿಯ ಮಾವುಗಳಿಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಮಿಯಾಝಾಕಿಯನ್ನು ‘ಕೆಂಪು ಸೂರ್ಯ’ ಮತ್ತು ಬಂಗಾಳಿಯಲ್ಲಿ ‘ಸುರ್ಜಾ ಡಿಮ್’ (ಕೆಂಪು ಮೊಟ್ಟೆ) ಎಂದೂ ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

English summary

Rakshyakar Bhoi, a farmer and teacher in Odisha’s Kalahandi district, claims to have grown the world’s most expensive mango, Miyazaki, in his garden.

Story first published: Thursday, July 27, 2023, 15:07 [IST]

Source link