ವಿಶ್ವಚಾಂಪಿಯನ್ ಅರ್ಜೆಂಟೀನಾಗೆ ಉರುಗ್ವೆ ಅಚ್ಚರಿಯ ಸೋಲುಣಿಸಿದೆ. ದಿಗ್ಗಜ ನಾಯಕ ಲಿಯೋನೆಲ್ ಮೆಸ್ಸಿ (Lionel Messi) ತಂಡದಲ್ಲಿದ್ದರೂ, ವಿಶ್ವಕಪ್ ಟ್ರೋಫಿ ಬಳಿಕ ಅಜೇಯವಾಗಿ ಮುನ್ನಡೆಯುತ್ತಿದ್ದ ಅರ್ಜೆಂಟೀನಾಗೆ ಉರುಗ್ವೆ ಶಾಕ್ ಕೊಟ್ಟಿದೆ. ಗೆಲುವಿನ ನಾಗಾಲೋಟದಲ್ಲಿದ್ದ ಅರ್ಜೆಂಟೀನಾದ ಅಜೇಯ ಓಟಕ್ಕೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ.