ಆಯ್ಕೆದಾರರು ಏನು ಕಲಿತರು?
ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿ ಎಷ್ಟು ದುರ್ಬಲವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ನೆದರ್ಲೆಂಡ್ಸ್, ಸ್ಕಾಟ್ಲೆಂಡ್ ವಿರುದ್ಧವೇ ಸೋತಿದೆ. ಅಂತಹ ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ ಮತ್ತು ಕೊಹ್ಲಿ ಗಳಿಸಿದ ರನ್ಗಳಿಂದ ಆಯ್ಕೆದಾರರು, ತಿಳಿದಿರದಿದ್ದನ್ನು ಏನು ಕಲಿತರು? ಯುವ ಆಟಗಾರರಿಗೆ ಅವಕಾಶ ನೀಡಿದರೆ, ಏನಾಗುತ್ತಿತ್ತು? ಸಾಕಷ್ಟು ಕಲಿಯಲು ಅವಕಾಶವಿತ್ತು. ವಿಂಡೀಸ್ನಂತಹ ದೇಶಗಳ ವಿರುದ್ಧದ ಸರಣಿಯು ಯುವ ಆಟಗಾರರನ್ನು ಪರೀಕ್ಷಿಸಲು ತುಂಬಾ ಉಪಯುಕ್ತ ಎಂದು ಹೇಳಿದ್ದಾರೆ.