ವಿಪಕ್ಷ ನಾಯಕನ ಸ್ಥಾನಕ್ಕೆ ವಿಶೇಷ ವ್ಯಕ್ತಿ ಬರ್ತಾರೆ; ಕುತೂಹಲ ಕೆರಳಿಸಿದ ಮುರುಗೇಶ್‌ ನಿರಾಣಿ ಎಚ್ಚರಿ ಹೇಳಿಕೆ | Special Person Will Come For Leader Of The Opposition Post Murugesh Nirani Said

Karnataka

oi-Reshma P

|

Google Oneindia Kannada News

ಬೆಳಗಾವಿ, ಜುಲೈ 08: ವಿಪಕ್ಷ ಸ್ಥಾನಕ್ಕೆ ವಿಶೇಷ ಅಭ್ಯರ್ಥಿ ಘೋಷಣೆಗೆ ವಿಪಕ್ಷ ನಾಯಕನ ಆಯ್ಕೆ ತಡವಾಡಗಿದೆ ಎಂದು ಮಾಜಿ ಸಚಿವ ಮುರುಗೇಶ‌ ನಿರಾಣಿ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸೇರಿ ಯಾರನ್ನೂ ಬೇಕಾದರೂ ವಿಪಕ್ಷ ನಾಯಕ ಘೋಷಣೆ ಮಾಡಿದರೂ ನಾನು ಸ್ವಾಗತ ಮಾಡುತ್ತೇನೆ. ವಿಶೇಷ ಅಭ್ಯರ್ಥಿ ಘೋಷಣೆಗೆ ವಿಪಕ್ಷ ನಾಯಕನ ಆಯ್ಕೆ ತಡವಾಡಗಿದೆ ಎಂದು ತಿಳಿಸಿದರು.

Special Person Will Come For Leader Of The Opposition Post Murugesh Nirani Said

ಇನ್ನೂ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನ್ನಲ್ಲ. ಬೆಳಗಾವಿ ವಿಭಾಗದಲ್ಲಿ ಯಾವುದೇ ಹುದ್ದೆ ತೆಗೆದುಕೊಳ್ಳದೇ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮುರುಗೇಶ‌ ನಿರಾಣಿ ಹೇಳಿದರು.

 Siddaramaiah: ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು-ಪೇರು! Siddaramaiah: ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು-ಪೇರು!

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಸಿದ್ದರಾಮಯ್ಯ 14 ನೇ ಬಜೆಟ್‌ ನ್ನ ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರ ಬಜೆಟ್‌ ರಾಜ್ಯದ ಅಭಿವೃದ್ಧಿ ಪೂರಕವಾಗಿಲ್ಲ. ಒಳ್ಳೆಯ ಬಜೆಟ್ ನಿರೀಕ್ಷೆ ಹುಸಿಯಾಗಿದೆ ಎಂದರು‌.

ಬಾಗಲಕೋಟ, ವಿಜಯಪುರ ಕೃಷ್ಣ ಮೇಲ್ದಂಡೆ ಅನುಷ್ಠಾನ ವಿಚಾರದಲ್ಲಿ ಮುಳುಗಡೆ ಜನರಿಗೆ ಪರಿಹಾರ ಕೊಡಲು ನಮ್ಮ ಸರಕಾರದಲ್ಲಿ 5 ಸಾವಿರ ಕೋಟಿ ಮೀಸಲು ಇಟ್ಟಿದ್ದೇವೆ. ಸಾಂಕೇತಿಕವಾಗಿ 10 ಜನರಿಗೆ ಪರಿಹಾರ ವಿತರಣೆ ಮಾಡಿದ್ದೇವು. ಇದನ್ನು ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಕೈ ಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಗೆ ಮುರುಗೇಶ್ ನಿರಾಣಿ ಸ್ಪರ್ಧೆ ಮಾಡುತ್ತಾರೆಯೇ ಎನ್ನುವ ‌ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ರಾಜ್ಯ ರಾಜಕಾರಣದಲ್ಲಿ ನನಗೆ ಆಸಕ್ತಿ ಇದೆ. ರಾಜ್ಯ, ರಾಷ್ಟ್ರ ನಾಯಕರು ಏನು ತೀರ್ಮಾನ ಮಾಡಿದರೂ ಅದಕ್ಕೆ ಬದ್ಧನಾಗಿರುತ್ತೇನೆ.ನನಗೆ ವೈಯಕ್ತಿಕವಾಗಿ ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಇದೆ. ಲೋಕಸಭಾ ಚುನಾವಣೆಗೆ ಬಾಗಲಕೋಟೆಯಲ್ಲಿ ವಿಶೇಷ ಅಭ್ಯರ್ಥಿ ಘೋಷಣೆ ಆಗಲಿದೆ ಕಾದು ನೋಡಿ. ಚುನಾವಣೆಯಲ್ಲಿ ಸೋಲು ಗೆಲವು ಸ್ವಾಭಾವಿಕ. ನನ್ನ ಸೋಲಿಗೆ ನಾನೇ ಕಾರಣ ಎಂದು ಹೇಳಿದರು.

ಗ್ಯಾರಂಟಿ ಘೋಷಣೆಯಲ್ಲಿ ಸುಳ್ಳು ಹೇಳಿದ್ದಾರೆ. ಕೃಷ್ಣೆಯ ಕಣ್ಣೀರು, ಬಳ್ಳಾರಿಯಿಂದ ಪಾದಯಾತ್ರೆ ಮಾಡಿದ್ದರು ಕಾಂಗ್ರೆಸ್ ನಾಯಕರು. ಕೃಷ್ಣ ತೀರದಲ್ಲಿ ಇರೋವರಿಗೆ ಅನ್ಯಾಯ ಆಗಿದೆ. ಎಲ್ಲಾ ರಂಗದಲ್ಲಿಯೂ ಸಹ ಸುಳ್ಳು ಭರವಸೆ ನೀಡಿದ್ದಾರೆ. ಗ್ಯಾರಂಟಿ ಘೋಷಣೆ ಮಾಡೋ ಸಂದರ್ಭದಲ್ಲಿ ಕಂಡಿಷನ್ ಹಾಕಿರಲಿಲ್ಲ. ಈಗ ಗ್ಯಾರಂಟಿಗೆ ಅನೇಕ ಕಂಡಿಷನ್ ಹಾಕಿದ್ದಾರೆ. ಕಂಡಿಷನ್ ಹಾಕಿದ್ದು ದುರದೃಷ್ಟ. ಬಿಜೆಪಿ ಅವಧಿಯಲ್ಲಿನ 20ಕ್ಕೂ ಹೆಚ್ಚು ಯೋಜನೆ ಕೈ ಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಬಜೆಟ್‌ ಕುರಿತು ವಾಗ್ದಾಳಿ ನಡೆಸಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಮಾಡಿದ ಯೋಜನೆ ಕೈಬಿಟ್ಟಿದು ರಾಜ್ಯದ ಜನರಿಗೆ ಮಾಡಿದ ಮೋಸ ಮಾಡಿದ ಹಾಗೆ. ಕಾಂಗ್ರೆಸ್‌ ಬಜೆಟ್‌ ಕೇವಲ ಒಂದೇ ಸಮುದಾಯದ ಓಲೈಕೆಯ ಬಜೆಟ್ ಇದಾಗಿದೆ ಎಂದು ಹರಿಹಾಯ್ದರು.

English summary

Murugesh Nirani Said That Special Person Will Come For Leader Of The Opposition Post,

Story first published: Saturday, July 8, 2023, 15:14 [IST]

Source link