ವಿನಾಕಾರಣ ದೆಹಲಿ ವಿಮಾನ ರದ್ದು, ಚೆನ್ನೈ ವಿಮಾನ ನಿಲ್ದಾಣದಲ್ಲಿ 150 ಪ್ರಯಾಣಿಕರು ಪರದಾಟ | Delhi flight canceled for no reason, 150 passengers stranded at Chennai airport

India

oi-Sunitha B

|

Google Oneindia Kannada News

ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಖರೀದಿಸಿದೆ. ಆದರೆ ಅದು ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ದೂರಲಾಗುತ್ತಿದೆ. ಹೌದು.. ಯಾವುದೇ ಕಾರಣ ನೀಡದೆ ಕಂಪನಿಯು ವಿಮಾನವನ್ನು ರದ್ದುಗೊಳಿಸಿದ ಘಟನೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದಿದೆ. ಇದರಿಂದಾಗಿ 150 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಮಾಹಿತಿ ಪ್ರಕಾರ ಚೆನ್ನೈನಿಂದ ದೆಹಲಿಗೆ ಬೆಳಗ್ಗೆ 10.05ಕ್ಕೆ ವಿಮಾನದ ವೇಳಾಪಟ್ಟಿ ಇತ್ತು. ಇದಕ್ಕಾಗಿ ಸುಮಾರು 150 ಪ್ರಯಾಣಿಕರು ವಿಮಾನ ನಿಲ್ದಾಣವನ್ನು ತಲುಪಿದ್ದರು. ಆದರೆ ಯಾವುದೇ ಕಾರಣವನ್ನು ನೀಡದೆ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಯಾಣಿಕರು ಅಲ್ಲಿದ್ದ ಸಿಬ್ಬಂದಿಯನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ. ಇದನ್ನು ಹೊರತು ಪಡಿಸಿ ಬೇರೆ ಯಾವುದೇ ವಿಮಾನ ಕೂಡ ಅವರಿಗೆ ವ್ಯವಸ್ಥೆ ಮಾಡಲಾಗಿಲ್ಲ. ಇದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Delhi flight canceled for no reason, 150 passengers stranded at Chennai airport

ಶನಿವಾರವೂ ಇದೇ ರೀತಿ ಘಟನೆ

ಈ ರೀತಿ ನಡೆದಿರುವುದು ಇದೇ ಮೊದಲಲ್ಲ. ಮೊನ್ನೆ ಶನಿವಾರ ಇದೇ ಪ್ರಕರಣ ಬೆಳಕಿಗೆ ಬಂದಿತ್ತು. ಚೆನ್ನೈನಿಂದ ಪೋರ್ಟ್ ಬ್ಲೇರ್ ಗೆ ತೆರಳಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿತ್ತು. ಇದರಿಂದ 146 ಪ್ರಯಾಣಿಕರು ತೊಂದರೆ ಅನುಭವಿಸಿದರು. ಈ ವೇಳೆ ಹಲವು ಪ್ರಯಾಣಿಕರು ಗಲಾಟೆ ನಡೆಸಿ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು.

Go First: ಸಂಸ್ಥೆಗೆ 400 ಕೋಟಿ ರೂ. ನಿಧಿ ಅನುಮೋದನೆ, ಜುಲೈನಲ್ಲಿ ದೇಶಿ ವಿಮಾನ ಕಾರ್ಯಾಚರಣೆ ನಿರೀಕ್ಷೆGo First: ಸಂಸ್ಥೆಗೆ 400 ಕೋಟಿ ರೂ. ನಿಧಿ ಅನುಮೋದನೆ, ಜುಲೈನಲ್ಲಿ ದೇಶಿ ವಿಮಾನ ಕಾರ್ಯಾಚರಣೆ ನಿರೀಕ್ಷೆ

ಪ್ರಯಾಣಿಕರ ಪ್ರಕಾರ, ಭದ್ರತಾ ತಪಾಸಣೆ ಮುಗಿಸಿ 4 ಗಂಟೆಗೆ ವಿಮಾನ ಹತ್ತಲು ಎಲ್ಲರೂ ಸಿದ್ಧರಾಗಿದ್ದರು. ಆಗ ವಿಮಾನದಲ್ಲಿ ತಾಂತ್ರಿಕ ದೋಷವಿತ್ತು ಎಂದು ಪೈಲಟ್ ಎಟಿಸಿಗೆ ತಿಳಿಸಿದರು. 8 ಗಂಟೆಗೆ ಅದನ್ನು ಮರು ನಿಗದಿಪಡಿಸಲಾಯಿತು. ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದಾಗ ಪ್ರಯಾಣಿಕರು ಗಂಟೆಗಟ್ಟಲೆ ವಿಮಾನ ನಿಲ್ದಾಣದಲ್ಲಿ ಕಾದಿದ್ದಾರೆ.

ಪೈಲಟ್ ವಿಮಾನ ಹಾರಿಸಲು ನಿರಾಕಾರ

ಭಾನುವಾರವೂ ಏರ್ ಇಂಡಿಯಾದ ಪೈಲಟ್ ನಿಂದಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಅಂದು ಹವಾಮಾನ ವೈಪರೀತ್ಯದಿಂದಾಗಿ ಲಂಡನ್‌ನಿಂದ ದೆಹಲಿಗೆ ಹೊರಟಿದ್ದ ವಿಮಾನವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಸ್ವಲ್ಪ ಸಮಯದ ನಂತರ ಹವಾಮಾನ ಸರಿಯಾಯಿತು. ಆದರೆ ಪೈಲಟ್ ವಿಮಾನವನ್ನು ಹಾರಿಸಲು ನಿರಾಕರಿಸಿದರು.

ಮಾಧ್ಯಮ ವರದಿಗಳ ಪ್ರಕಾರ, ಪೈಲಟ್ ತನ್ನ ಶಿಫ್ಟ್ ಮುಗಿದಿದೆ. ಆದ್ದರಿಂದ ಇನ್ನು ಮುಂದೆ ವಿಮಾನವನ್ನು ದೆಹಲಿಗೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿದ್ದರು. ಆದರೆ, ನಂತರ ಬೇರೆ ಸಿಬ್ಬಂದಿಯನ್ನು ಏರ್ಪಡಿಸಿ ಪ್ರಯಾಣಿಕರನ್ನು ಅವರ ಸ್ಥಾನಕ್ಕೆ ಕರೆದೊಯ್ಯಲಾಯಿತು. ಈ ಪ್ರಕರಣದಲ್ಲೂ ಏರ್ ಇಂಡಿಯಾ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿತ್ತು.

English summary

Air India’s mishap: 150 passengers stranded at Chennai airport today due to cancellation of Delhi flight without reason.

Story first published: Monday, June 26, 2023, 18:03 [IST]

Source link