ವಿದ್ಯುತ್ ದರ ಕಡಿಮೆ ಮಾಡಲು ಸಾಧ್ಯವಿಲ್ಲ: ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ | K. J George Clarifies That There Will Be No Reduction In Electricity Tariff

Bengaluru

oi-Naveen Kumar N

|

Google Oneindia Kannada News

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ವಿರುದ್ಧ ಭಾರಿ ಜನಾಕ್ರೋಶ ವ್ಯಕ್ತವಾಗಿದೆ. ವಿದ್ಯುತ್ ದರ ಏರಿಕೆ ನಿರ್ಧಾರ ವಾಪಸ್ ಪಡೆಯಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ವಿದ್ಯುತ್ ದರ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಕೆಇಆರ್‌ಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ) ಕೇಂದ್ರ ಕಾಯ್ದೆಯಡಿ ವಿದ್ಯುತ್‌ ದರ ಏರಿಕೆಯಾಗಿದೆ, ಇದನ್ನು ರಾಜ್ಯ ಸರ್ಕಾರ ಕಡಿಮೆ ಮಾಡಲು ಸಾಧ್ಯವಿಲ್ಲ, ಕೆಇಆರ್‌ಸಿ ಒಂದು ಬಾರಿಕೆ ಏರಿಕೆ ಮಾಡಿದರೆ ಅದಕ್ಕೆ ನಾವು ಬದ್ಧರಾಗಿ ಇರಬೇಕಾಗುತ್ತದೆ. ಕಾಂಗ್ರೆಸ್ ಬರುವ ಮುನ್ನವೇ ದರ ಏರಿಕೆ ಮಾಡಿದ್ದಾರೆ, ಈಗ ವಾಪಸ್ ಪಡೆಯಲು ಅವಕಾಶವೇ ಇಲ್ಲ ಎಂದು ಹೇಳಿದರು.

 Power Minister K. J George clarifies

“ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿದ್ಯುತ್ ದರ ಏರಿಕೆ ಮಾಡಿಲ್ಲ, ಬಿಜೆಪಿ ಸರ್ಕಾರದ ಅವಧಿಯಲ್ಲೇ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ಬೆಲೆ ಏರಿಕೆ ಪ್ರಕ್ರಿಯೆ 2022ರ ನವೆಂಬರ್ ತಿಂಗಳಿನಲ್ಲೇ ನಡೆದಿದೆ, ಏಪ್ರಿಲ್‌ನಲ್ಲೇ ಬೆಲೆ ಏರಿಕೆ ಮಾಡಬೇಕಿತ್ತು ಆದರೆ ಚುನಾವಣೆ ನೀತಿ ಸಂಹಿತ ಇದ್ದ ಕಾರಣ ಚುನಾವಣೆ ಬಳಿಕ ಮೇ 12ರಂದು ದರ ಏರಿಕೆ ಮಾಡಲಾಗಿದೆ. ಆಗ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮೇ 20ರಂದು ಎಂದು ಹೇಳಿದರು.

 Electricity Tarrif Hike: ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ಸಮಸ್ಯೆಗೆ ಪರಿಹಾರ : ಸಿಎಂ ಸಿದ್ದರಾಮಯ್ಯ Electricity Tarrif Hike: ಮುಂದಿನ ತಿಂಗಳಿನಿಂದ ವಿದ್ಯುತ್ ಬಿಲ್ ಸಮಸ್ಯೆಗೆ ಪರಿಹಾರ : ಸಿಎಂ ಸಿದ್ದರಾಮಯ್ಯ

ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ

ವಿದ್ಯುತ್ ಉತ್ಪಾದನೆ, ನಿರ್ವಹಣಾ ವೆಚ್ಚ ಅಧಿಕವಾದ ಕಾರಣ ಪ್ರತಿ ಯುನಿಟ್‌ಗೆ 1.50 ರುಪಾಯಿ ಹೆಚ್ಚಳ ಮಾಡಬೇಕು ಎಂದು ಸೆಸ್ಕಾಂ ಪ್ರಸ್ತಾವನೆ ಸಲ್ಲಿಸಿತ್ತು. ಎಲ್ಲಾ ಸಂಘ, ಸಂಸ್ಥೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿದ ಬಳಿಕ ಕೆಇಆರ್‌ಸಿ ಯೂನಿಟ್‌ಗೆ ಕೇವಲ 70 ಪೈಸೆ ಏರಿಕೆ ಮಾಡಲು ಒಪ್ಪಿಗೆ ನೀಡಿದೆ. ಇದರಿಂದ ಮನೆಯ ವಿದ್ಯುತ್ ಬಳಕೆದಾರರಿಗೆ ಸಮಸ್ಯೆಯಿಲ್ಲ, ಗೃಹ ಬಳಕೆದಾರರು ವಿದ್ಯುತ್ ಬಾಕಿಯನ್ನು ಪಾವತಿ ಮಾಡಿ, 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಲಾಭ ಪಡೆದುಕೊಳ್ಳಬಹುದು ಎಂದು ಹೇಳಿದರು.

 Power Minister K. J George clarifies

ರೈತರ ಪಂಪ್‌ಸೆಟ್‌ಗಳಿ ಸಂಪರ್ಕ ಕೊಡಲು ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಮಾತನಾಡ, ಈ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುವುದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಏನೇ ಸಮಸ್ಯೆಗಳಿದ್ದರೂ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಹೇಳಿದರು.

ಜೂನ್ 22ರಂದು ಬಂದ್‌ಗೆ ಕರೆ

ವಿದ್ಯುತ್ ದರ ಏರಿಕೆಯನ್ನು ಖಂಡಿಸಿರುವ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರಿ (KCC&I) ರಾಜ್ಯ ಬಂದ್​ಗೆ ಕರೆ ಕೊಟ್ಟಿದೆ. ಜೂನ್ 22ರಂದು ಕರ್ನಾಟಕ ಬಂದ್ ಮಾಡುವುದಾಗಿ ಹೇಳಿದೆ. ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು, ಉದ್ಯಮಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ, ಇದರಿಂದ ನಷ್ಟ ಹೊಂದಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿವೆ.

English summary

Amidst outrage against the electricity tariff hike in Karnataka, Power Minister K. J George clarifies that there will be no reduction in electricity tariff. He explains that once the Karnataka Electricity Regulatory Commission (KERC) has implemented the tariff hike, the government cannot reverse it.

Source link