Karnataka
oi-Naveen Kumar N
ಜುಲೈ 1ರಿಂದ ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ. ನೈಸ್ ರಸ್ತೆ, ತುಮಕೂರು-ಬೆಂಗಳೂರು, ನೆಲಮಂಗಲ-ಬೆಂಗಳೂರು ರಸ್ತೆಗಳಲ್ಲಿ ಇನ್ನು ಓಡಾಡಲು ಹೆಚ್ಚಿನ ಟೋಲ್ ದರ ಪಾವತಿಸಬೇಕಿದೆ. ಜುಲೈ 1ರಿಂದ ಈ ರಸ್ತೆಗಳ ಟೋಲ್ ದರ ಮತ್ತಷ್ಟು ಹೆಚ್ಚಾಗಲಿದೆ.
ನೈಸ್ ರಸ್ತೆಯ ಫೆರಿಫೆರಲ್ ಮತ್ತು ಲಿಂಕ್ ರಸ್ತೆಗಳ ಟೋಲ್ ಕಳೆದ ವರ್ಷಕ್ಕಿಂತ ಶೇ. 10-20 ರಷ್ಟು ಹೆಚ್ಚಾಗಲಿದ್ದು ಇಂದಿನಿಂದ ಜಾರಿಗೆ ಬರಲಿದೆ. ಈ ಬಗ್ಗೆ ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (NICE) ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಬಿಎಂಐಸಿ (ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್) ಯೋಜನೆಯ ಭಾಗವಾಗಿ ಪೆರಿಫೆರಲ್ ರಸ್ತೆಗಳು ಮತ್ತು ಸಂಪರ್ಕ ರಸ್ತೆಗಳ ಟೋಲ್ ಅನ್ನು ಕಾರುಗಳು, ಬಸ್‌ಗಳು, ಟ್ರಕ್‌ಗಳು, ಲಘು ವಾಣಿಜ್ಯ ವಾಹನಗಳು ಮತ್ತು ಬಹು-ಆಕ್ಸಲ್ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳಿಗೆ ಪರಿಷ್ಕರಿಸಲಾಗಿದೆ ಎಂದು ಸೂಚನೆ ನೀಡಿದೆ. 2022ರ ಜುಲೈ 1ರಂದು ಕೂಡ ನೈಸ್ ರಸ್ತೆಯ ಟೋಲ್ ದರ ಪರಿಷ್ಕರಣೆಯಾಗಿತ್ತು.
ನೆಲಮಂಗಲ-ಬೆಂಗಳೂರು ಟೋಲ್ ದರ ಹೆಚ್ಚಳ
ಬೆಂಗಳೂರು-ನೆಲಮಂಗಲ ರಸ್ತೆಯ ಟೋಲ್ ಪ್ಲಾಜಾದಲ್ಲಿಯೂ ದರ ಪರಿಷ್ಕರಿಸಲಾಗಿದೆ. ಜುಲೈ 1 ರಿಂದ ಕಾರು ಮತ್ತು ಜೀಪ್‌ಗಳು ಒಂದೇ ಪ್ರಯಾಣಕ್ಕೆ 30 ರುಪಾಯಿ ಮತ್ತು ಅದೇ ದಿನ ಹಿಂತಿರುಗಲು 40 ರೂಪಾಯಿ ನೀಡಬೇಕಾಗುತ್ತದೆ. 60 ಏಕ ಪ್ರಯಾಣಕ್ಕೆ ಸೀಮಿತವಾದ ಮಾಸಿಕ ಪಾಸ್ ದರವನ್ನು 845 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಲಘು ವಾಹನಗಳು ಮತ್ತು ಮಿನಿಬಸ್‌ಗಳು ಏಕಮುಖ ಪ್ರಯಾಣಕ್ಕೆ 45 ರುಪಾಯಿ ಮತ್ತು ಅದೇ ದಿನ ಹಿಂದಿರುಗುವ ಪ್ರಯಾಣಕ್ಕೆ 70 ರೂಪಾಯಿ ಪಾವತಿಸಬೇಕು, ಬಸ್‌ಗಳು ಮತ್ತು ಟ್ರಕ್‌ಗಳು ಕ್ರಮವಾಗಿ ಏಕಮುಖ ಪ್ರಯಾಣಕ್ಕೆ 95 ರೂಪಾಯಿ ಮತ್ತು ರಿಟರ್ನ್ ಪ್ರಯಾಣಕ್ಕೆ 145 ರುಪಾಯಿ ಪಾವತಿಸಬೇಕು.
ಅರ್ಥ ಮೂವರ್ ವಾಹನಗಳು ಮತ್ತು ಭಾರಿ ನಿರ್ಮಾಣ ಯಂತ್ರಗಳು ಒಂದು ಪ್ರಯಾಣಕ್ಕೆ 155 ರೂಪಾಯಿ ಮತ್ತು ಅದೇ ದಿನ ಹಿಂದಿರುಗುವ ಪ್ರಯಾಣಕ್ಕೆ 230 ರೂಪಾಯಿ ನೀಡಬೇಕಾಗುತ್ತದೆ. ಲಘು ವಾಹನಗಳಿಗೆ ಮಾಸಿಕ ಪಾಸ್ ದರ 1,405. ಬಸ್ ಮತ್ತು ಟ್ರಕ್‌ಗಳಿಗೆ 2885 ರೂಪಾಯಿ ಮತ್ತು ಭಾರಿ ವಾಹನಗಳಿಗೆ 4,640 ರೂಪಾಯಿ ನಿಗದಿಪಡಿಸಲಾಗಿದೆ.
ನೆಲಂಗಲ-ತುಮಕೂರು ಮಾರ್ಗದ ಟೋಲ್ ದರ ದುಬಾರಿ
ರಾಷ್ಟ್ರೀಯ ಹೆದ್ದಾರಿ -48 ರ ನೆಲಮಂಗಲ-ತುಮಕೂರು ಮಾರ್ಗದಲ್ಲಿ ಟೋಲ್ ದರಗಳನ್ನು ಸಹ ಪರಿಷ್ಕರಿಸಲಾಗಿದ್ದು, ಇಂದಿನಿಂದ ಜಾರಿಗೆ ಬರಲಿದೆ. ಎರಡೂ ಟೋಲ್‌ಗಳನ್ನು ದಾಟುವ ಕಾರುಗಳಿಗೆ 85 ರೂಪಾಯಿ, ಲಘು ಸರಕು ವಾಹಳಗಳಿಗೆ 80 ರೂಪಾಯಿ, ಟ್ರಕ್ ಮತ್ತು ಬಸ್‌ಗಳಿಗೆ 165 ರೂಪಾಯಿ ಪಾವತಿಸಬೇಕು. ಒಂದು ಟೋಲ್ ಪ್ಲಾಜಾವನ್ನು ಮಾತ್ರ ದಾಟುವ ವಾಹನಗಳಿಗೆ ಕಾರು-25, ಲಘು ಸರಕು ವಾಹನ 40, ಟ್ರಕ್ ಮತ್ತು ಬಸ್‌ಗಳಿಗೆ 80 ರೂಪಾಯಿ ನಿಗದಿಪಡಿಲಾಗಿದೆ.
English summary
Effective from July 1, there will be an increase of at least 10-20 per cent in the toll charges for the peripheral and link roads on NICE Road compared to last year. Additionally, the toll rates have been revised at the toll plaza on the Bengaluru-Nelamangala Road, as well as on the Nelamangala-Tumakuru stretch of the NH48.
Story first published: Saturday, July 1, 2023, 7:28 [IST]