ಕೆರಿಬಿಯನ್ನರ ವಿರುದ್ಧ ಟೀಂ ಇಂಡಿಯಾ ಸೋತರೂ ಬ್ಯಾಟರ್ ತಿಲಕ್ ವರ್ಮಾ (Tilak Varma) ಮಿಂಚಿದ್ದಾರೆ. ಎರಡನೇ ಟಿ20 ಪಂದ್ಯದಲ್ಲಿ ವರ್ಮಾ 41 ಎಸೆತಗಳಿಂದ 5 ಬೌಂಡರಿ 1 ಸಿಕ್ಸರ್ ಸೇರಿ 51 ರನ್‌ಗಳನ್ನು ಪೇರಿಸಿದ್ದಾರೆ. ವರ್ಮಾ ಅವರ ಈ ಉಪಯುಕ್ತ ಕಾಣಿಕೆ ಭಾರತ ತಂಡ 150ರ ಗಡಿ ದಾಟಲು ಸಾಧ್ಯವಾಗಿತ್ತು. ಅಲ್ಲದೆ, ಅಪರೂಪದ ದಾಖಲೆಗೆ ಸಾಕ್ಷಿಯಾಗಿದೆ.