ರಾಹುಲ್ ಗಾಂಧಿಗೆ ಸಂಕಷ್ಟ ತಂದ ಕೆಜಿಎಫ್-2 ಹಾಡು: ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಕಾರ | Karnataka HC denies Rahul’s request to quash FIR in ‘KGF’ song copyright case

Karnataka

oi-Naveen Kumar N

By ಎಸ್‌ಎಸ್‌ಎಸ್‌

|

Google Oneindia Kannada News

ಬೆಂಗಳೂರು, ಜೂ. 28: ಕೆಜಿಎಫ್‌-2 ಚಿತ್ರದ ಹಾಡು ಈಗ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೇರಿ ಮೂವರು ಕಾಂಗ್ರೆಸ್ ನಾಯಕರಿಗೆ ಸಂಕಷ್ಟ ತಂದೊಡ್ಡಿದೆ. ಕೆಜಿಎಫ್‌-2 ಹಾಡಿನ ಹಕ್ಕು ಸ್ವಾಮ್ಯ ಉಲ್ಲಂಘಿಸಿದ ಆರೋಪದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿ ಮೂವರು ಕಾಂಗ್ರೆಸ್‌ ಮುಖಂಡರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಹೈಕೋರ್ಟ್‌ನ ನಿರ್ಧಾರದಿಂದ ರಾಹುಲ್‌ ಗಾಂಧಿಗೆ ಭಾರಿ ಹಿನ್ನಡೆಯಾಗಿದ್ದು, ವಿಚಾರಣೆಯನ್ನು ಎದುರಿಸಲೇಬೇಕಾದ ಪರಿಸ್ಥಿತಿಗೆ ಸಿಲುಕಿದ್ದಾರೆ. ಒಪ್ಪಿಗೆ ಪಡೆಯದೆ ಕೆಜಿಎಫ್-2 ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆ ದೂರು ನೀಡಿತ್ತು.

 KGF song copyright case

ಕೆಜಿಎಫ್‌ ಹಾಡುಗಳ ಹಕ್ಕು ಸ್ವಾಮ್ಯ ಹೊಂದಿರುವ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಯ ದೂರು ಆಧರಿಸಿ ಯಶವಂತಪುರ ಠಾಣೆ ಪೊಲೀಸರು ದಾಖಲಿಸಿರುವ ಪ್ರಕರಣ ರದ್ದುಕೋರಿ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಸಂವಹನ ಮತ್ತು ಪ್ರಚಾರ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಹಾಗೂ ಸಾಮಾಜಿಕ ಮತ್ತು ಡಿಜಿಟಲ್‌ ಮಾಧ್ಯಮದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಬುಧವಾರ ಪ್ರಕಟಿಸಿದೆ.

ಅರ್ಜಿದಾರರು ಸೋರ್ಸ್‌ ಕೋಡ್‌ ಅನ್ನು ತಿರುಚಿರುವುದು (ಟ್ಯಾಂಪರ್‌) ಕಂಡುಬಂದಿದ್ದು, ಅದನ್ನು ಬಳಕೆ ಮಾಡಿರುವುದು ಕೃತಿಸ್ವಾಮ್ಯದ ಉಲ್ಲಂಘನೆಯಾಗಲಿದೆ. ದೂರುದಾರರ (ಮ್ಯೂಸಿಕ್‌ ಸಂಸ್ಥೆ) ಕೃತಿಸ್ವಾಮ್ಯವನ್ನು ಲಘುವಾಗಿ ತೆಗೆದುಕೊಳ್ಳಲಾಗಿದೆ. ಈ ಎಲ್ಲ ವಿಚಾರಗಳು ತನಿಖೆಯಿಂದ ಹೊರಬರಬೇಕಿದ್ದು, ಈ ಹಂತದಲ್ಲಿಎಫ್‌ಐಆರ್‌ ರದ್ದುಪಡಿಸಲಾಗುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.

ಯಾವುದೇ ಜಾತಿಗೆ ಸೇರಿದವರಾದರೂ ದೇವಸ್ಥಾನದ ಅರ್ಚಕರಾಗಬಹುದು: ಮದ್ರಾಸ್ ಹೈಕೋರ್ಟ್ ತೀರ್ಪುಯಾವುದೇ ಜಾತಿಗೆ ಸೇರಿದವರಾದರೂ ದೇವಸ್ಥಾನದ ಅರ್ಚಕರಾಗಬಹುದು: ಮದ್ರಾಸ್ ಹೈಕೋರ್ಟ್ ತೀರ್ಪು

ಆರ್ಥಿಕ ಲಾಭ ಪಡೆದಿಲ್ಲ ಎಂದು ವಾದ

ಅರ್ಜಿದಾರರ ಪರ ವಕೀಲರು, ಕೃತಿಸ್ವಾಮ್ಯ ಕಾಯ್ದೆಯ ಸೆಕ್ಷನ್‌ 63ರ ಅಡಿ ಅಪರಾಧವೆನಿಸಲು ಆರೋಪಿಯು ಉದ್ದೇಶಪೂರ್ವಕವಾಗಿ ಹಕ್ಕುಸ್ವಾಮ್ಯ ಉಲ್ಲಂಸಬೇಕು. ಆದರೆ, ಈ ಪ್ರಕರಣದಲ್ಲಿಅಂತಹ ಯಾವುದೇ ಉದ್ದೇಶವಿಲ್ಲ. ಜತೆಗೆ, ಹಕ್ಕುಸ್ವಾಮ್ಯ ಉಲ್ಲಂಘನೆಯಿಂದ ಅರ್ಜಿದಾರರು ಯಾವುದೇ ಆರ್ಥಿಕ ಲಾಭ ಪಡೆದಿಲ್ಲ ಎಂದು ವಾದಿಸಿದರು.

ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆಯಲ್ಲಿಭಾಗವಹಿಸಿದ್ದರು. ಅವರು ವಿಡಿಯೋವನ್ನು ಜಾಲತಾಣಗಳಲ್ಲಿಅಪ್‌ಲೋಡ್‌ ಮಾಡಿಲ್ಲ. ಜೈರಾಮ್‌ ರಮೇಶ್‌ ಅಥವಾ ಸುಪ್ರಿಯಾ ಅವರು ವಿಷಯ (ಕಂಟೆಂಟ್‌) ರೂಪಿಸಿಲ್ಲ. ಹೀಗಿರುವಾಗ, ಅವರು ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಸಿದ್ದಾರೆ ಎನ್ನಲಾಗದು ಎಂದು ಹೇಳಿದ್ದಾರೆ.

ದೂರುದಾರರ ವಾದವೇನು?

ದೂರುದಾರರ ಪರ ಹಿರಿಯ ವಕೀಲರು, ಅರ್ಜಿದಾರರು ಕೆಜಿಎಫ್‌ ಚಿತ್ರದ ಹಾಡು ಬಳಕೆ ಮಾಡುವ ಮೂಲಕ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಸಿದ್ದಾರೆ. ಆಡಿಯೋ ಸೋರ್ಸ್‌ಕೋಡ್‌ ಅನ್ನು ತೆಗೆದುಕೊಂಡು ಅದಕ್ಕೆ ವಿಡಿಯೋ ಸೂಪರ್‌ ಇಂಪೋಸ್‌ ಮಾಡಲಾಗಿದೆ. ಹಕ್ಕು ಸ್ವಾಮ್ಯ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಸಿವಿಲ್‌ ಮತ್ತು ಕ್ರಿಮಿನಲ್‌ ಎರಡೂ ರೂಪದಲ್ಲಿಪರಿಹಾರ ಪಡೆಯಲು ಅವಕಾಶವಿದೆ. ಈ ಸಂಬಂಧ ಈಗಾಗಲೇ ವಿಚಾರಣಾ ನ್ಯಾಯಾಲಯದಲ್ಲಿಸಿವಿಲ್‌ ದಾವೆ ಹೂಡಿ, ಪ್ರತಿಬಂಧಕಾದೇಶವನ್ನೂ ಪಡೆಯಲಾಗಿದೆ ಎಂದರು.

ಆಡಿಯೋ ಹಾಗೂ ವಿಡಿಯೋ ಬಳಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲಎನ್ನುವುದು ಅರ್ಜಿದಾರರ ವಾದವಾಗಿದೆ. ಇದನ್ನು ಅವರು ತನಿಖೆಯ ವೇಳೆ ಸಾಬೀತುಪಡಿಸಬೇಕಾಗುತ್ತದೆ. ಅರ್ಜಿದಾರರು ಯಾವುದೇ ಆರ್ಥಿಕ ಲಾಭಗಳಿಸದಿದ್ದರೂ ಇಡೀ ಪ್ರಕ್ರಿಯೆಯ ಮೂಲಕ ಜನಪ್ರಿಯತೆಗಳಿಸಿಕೊಂಡಿದ್ದಾರೆ. ಆದ್ದರಿಂದ, ಎಫ್‌ಐಆರ್‌ ರದ್ದುಪಡಿಸಬಾರದು ಎಂದು ಕೋರಿದ್ದರು.

English summary

The Karnataka High Court rejects Rahul Gandhi, Jairam Ramesh & Supriya Shrinate’s plea to quash FIR in KGF song copyright infringement case.

Source link