Features
oi-Narayana M
ಪ್ರಭಾಸ್
ನಟನೆಯ
‘ಆದಿಪುರುಷ್’
ಸಿನಿಮಾ
ಭಾರೀ
ವಿವಾದ
ಸೃಷ್ಟಿಸಿದೆ.
ಅದರಲ್ಲೂ
ಓಂ
ರಾವುತ್
ರಾಮಾಯಣದ
ಪಾತ್ರಗಳನ್ನು
ಕಟ್ಟಿಕೊಟ್ಟಿರುವ
ಬಗ್ಗೆ
ಭಾರೀ
ಟೀಕೆ
ವ್ಯಕ್ತವಾಗುತ್ತಿದೆ.
ಮುಖ್ಯವಾಗಿ
ರಾವಣನ
ಕಾಸ್ಟ್ಯೂಮ್,
ಗೆಟಪ್,
ಲುಕ್ಸ್,
ಲಂಕೆಯ
ಚಿತ್ರಣದ
ಕುರಿತು
ಚರ್ಚೆ
ಆಗುತ್ತಿದೆ.
ಲಂಕಾಸುರನಾಗಿ
ಸೈಫ್
ಅಲಿಖಾನ್
ಅಬ್ಬರಿಸಿದ್ದಾರೆ.
ಸೈಫ್
ಮುಂದೆ
ಕೆಲ
ಸನ್ನಿವೇಶಗಳಲ್ಲಿ
ಪ್ರಭಾಸ್
ಕೂಡ
ಡಲ್ಲಾಗಿಬಿಟ್ಟಿದ್ದಾರೆ.
ರಾವಣನ
ಪಾತ್ರಕ್ಕೆ
ಸೈಫ್
ಉತ್ತಮ
ಆಯ್ಕೆ.
ಅದನ್ನು
ಅವರು
ಸಾಬೀತುಪಡಿಸಿದ್ದಾರೆ.
ಆದರೆ
ಕ್ರಿಯೇಟಿವ್
ರಿಬರ್ಟಿ
ಹೆಸರಿನಲ್ಲಿ
ಓಂ
ರಾವುತ್
ತಮಗೆ
ಇಷ್ಟಬಂದಂತೆ
ರಾಮಾಯಣದ
ಪಾತ್ರಗಳನ್ನು
ತೋರಿಸುವ
ಸಾಹಸ
ಮಾಡಿ
ಸೋತಿದ್ದಾರೆ.
ಸಿನಿಮಾ
ಚೆನ್ನಾಗಿದ್ದರೂ
ಇದೊಂದು
ಕಾರಣಕ್ಕೆ
ಭಾರೀ
ಟೀಕೆ
ವ್ಯಕ್ತವಾಗುತ್ತಿದೆ.
ಜನರ
ಮನಸ್ಸಿನಲ್ಲಿರುವ
ರಾಮಾಯಣದ
ಚಿತ್ರಣವನ್ನೇ
ತಿರುಚಿದಂತೆ
ಭಾಸವಾಗುತ್ತದೆ.
ಓಂ
ರಾವುತ್
ಸರಿಯಾದ
ರಿಸರ್ಚ್
ಮಾಡಿಲ್ಲ.
ಕೊನೆಪಕ್ಷ
ರಾಮಾಯಣ
ಕಾವ್ಯದಲ್ಲಿ
ಇದ್ದಿದ್ದನ್ನು
ತೆರೆಗೆ
ತಂದಿದ್ದರೂ
ಸಿನಿಮಾ
ಸೂಪರ್
ಹಿಟ್
ಆಗುತ್ತಿತ್ತು.
ಅಧಿಕ
ಪ್ರಸಂಗತನ
ಬೇಡವಾಗಿತ್ತು
ಎನ್ನುವ
ಮಾತುಗಳು
ಕೇಳಿಬರ್ತಿದೆ.
‘ಆದಿಪುರುಷ್’
ವಿವಾದದ
ನಡುವೆ
ಜ್ಯೂ.
ಎನ್‌ಟಿಆರ್
ರಾವಣದ
ಬಗ್ಗೆ
ಮಾತನಾಡಿರುವ
ಮಾತುಗಳು
ವೈರಲ್
ಆಗ್ತಿದೆ.
ಈ
ಹಿಂದೆ
ತಾರಕ್
‘ಜೈ
ಲವ
ಕುಶ’
ಸಿನಿಮಾದಲ್ಲಿ
ನಟಿಸಿದ್ದರು.
ಆ
ಚಿತ್ರದಲ್ಲಿ
ತ್ರಿಬಲ್
ರೋಲ್
ಪ್ಲೇ
ಮಾಡಿದ್ದರು.
ರಾವಣಾಸುರ
ಗುಣಗಳಿರುವ
ಗ್ಯಾಂಗ್‌ಸ್ಟರ್
ಜೈಕುಮಾರ್
ಪಾತ್ರವೂ
ಅದರಲ್ಲಿತ್ತು.
ರಾವಣನನ್ನು
ಹೋಲುವ
ಪಾತ್ರ
ಎನ್ನುವ
ಕಾರಣಕ್ಕೆ
ತಾರಕ್
ರಾವಣಾಸುರನ
ಬಗ್ಗೆ
ಒಂದಷ್ಟು
ರೀಸರ್ಚ್
ಮಾಡಿದ್ದರು.
ಆ
ಬಗ್ಗೆ
ಸಂದರ್ಶನವೊಂದರಲ್ಲಿ
ಹೇಳಿದ್ದರು.
ರಾವಣನ
ಮಾಹಿತಿ
ಹಾಳು
ಮಾಡಬಾರದು
“ರಾವಣನ
ಬಗ್ಗೆ
ನಮ್ಮ
ಬಳಿ
ಯಾವುದೇ
ಮಾಹಿತಿ
ಇರುವ
ಅಗತ್ಯವಿಲ್ಲ.
ಆದರೆ
ನಮ್ಮ
ಬಳಿ
ಇರುವ
ಮಾಹಿತಿ
ಹಾಳು
ಮಾಡದಿದ್ದರೆ
ಸಾಕು.
ರಾಮಾಯಣದಲ್ಲಿ
ರಾವಣನ
ಬಗ್ಗೆ
ನಮಗಿರುವ
ಮಾಹಿತಿಯೇ
ಹೆಚ್ಚು.
ಆದರೆ
ನಾನು
ಈ
ಚಿತ್ರಕ್ಕಾಗಿ
ಆನಂದ
ನೀಲಕಂಠಿ
ಬರೆದ
‘ಅಸುರ’
ಪುಸ್ತಕ
ಒಮ್ಮೆ
ಓದಿದೆ.
ಯಾಕಂದರೆ
ನಾವು
ರಾಮನ
ದೃಷ್ಟಿಕೋನದಲ್ಲಿ
ರಾಮಾಯಣ
ನೋಡಿದ್ದೇವೆ.
ಆದರೆ
ಆ
ಪುಸ್ತಕದಲ್ಲಿ
ರಾವಣನ
ದೃಷ್ಟಿಕೋನದಲ್ಲಿ
ಬರೆಯಲಾಗಿದೆ”
18
ಲೋಕಗಳ
ಅಧಿಪತಿ
ರಾವಣಾಸುರ
“ಸುಮ್ಮನೆ
ನನ್ನ
ರೆಫರೆನ್ಸ್‌ಗಾಗಿ
ನಾನು
ಓದಿದೆ
ಅಷ್ಟೆ.
ಅದು
ನನಗೆ
ಬಹಳ
ಸಹಕಾರಿ
ಆಯಿತು.
ನನಗೆ
ಗೊತ್ತಾಗಿದ್ದು
ಏನು
ಅಂದರೆ
18
ಲೋಕಗಳಿಕೆ
ಅಧಿಪತಿ
ರಾವಣ.
ಅಸುರ
ಚಕ್ರವರ್ತಿ.
18
ಲೋಕಗಳ
ಅಧಿಪತಿ
ಅಂದರೆ
ಅವನು
ಎಷ್ಟು
ಕುಶಲ
ಮತ್ತು
ಎಷ್ಟು
ಗಂಭೀರ
ವ್ಯಕ್ತಿತ್ವದವ
ನಾಗಿರಬಹುದು.
ಅವನ
ಕಣ್ಣುಗಳು
ಎಷ್ಟು
ತೀಕ್ಷ್ಣವಾಗಿದ್ದವು
ಅಂದರೆ
ಯಾರನ್ನಾದರೂ
ಮೇಲಿನಿಂದ
ಕೆಳಕ್ಕೆ
ಸ್ಕ್ಯಾನ್
ಮಾಡಿ
ನೋಡುವಂತಿರುತ್ತದೆ.
ರಣರಂಗದಲ್ಲಿ
ರಾಮನೇ
ರಾವಣನನ್ನು
ನೋಡಿ
ಅಚ್ಚರಿಗೊಂಡ
ಎಂದರೆ
ರಾವಣ
ಹೇಗೆ
ಇದ್ದಿರಬಹುದು
ಊಹಿಸಿ”
ತನ್ನ
ಭಕ್ತಿಯಿಂದ
ಶಿವನನ್ನೇ
ನಡುಗಿಸಿದ್ದ
“ಇನ್ನು
ರಾವಣ
ಮಹಾನ್
ವಿದ್ವಾಂಸನಾಗಿದ್ದ.
ಸಾಕಷ್ಟು
ವಿಚಾರಗಳಲ್ಲಿ
ಪಾಂಡಿತ್ಯ
ಸಂಪಾದಿಸಿದ್ದ.
ಎಲ್ಲದರ
ಮೇಲೂ
ಅಷ್ಟೊಂದು
ಹಿಡಿತ
ಇದ್ದ
ರಾವಣಸುರ
ತನ್ನ
ಭಕ್ತಿಯಿಂದ
ಒಂದರ್ಥದಲ್ಲಿ
ಶಿವನನ್ನು
ಕೂಡ
ಗಡ
ಗಡ
ನಡುಗುವಂತೆ
ಮಾಡಿಬಿಟ್ಟಿದ್ದ.
ಅಂದರೆ
ರಾವಣದ
ಪಾಂಡಿತ್ಯ,
ಅಹಂಕಾರ,
ಸಾಹಸ,
ಸಾಧನೆ
ಎಂತದ್ದು
ಅನ್ನೋದು
ಅರ್ಥವಾಗುತ್ತದೆ”
ಎಂದು
ತಾರಕ್
ಆ
ಸಂದರ್ಶನದಲ್ಲಿ
ಹೇಳಿದ್ದರು.
Adipurush
Day
8
Box
Office
Collection:
ಏನು
ಉಪಯೋಗ
ಇಲ್ಲ..
8ನೇ
ದಿನದ
ಕಲೆಕ್ಷನ್
ಲೆಕ್ಕಕ್ಕುಂಟು
ಆಟಕ್ಕಿಲ್ಲ
ತಾರಕ್
ಹೇಳಿಕೆ
ವೈರಲ್
ಯಂಗ್
ಟೈಗರ್
ಬರೀ
ರಾವಣನನ್ನು
ಹೋಲುವ
ಪಾತ್ರಕ್ಕೆ
ಇಷ್ಟೆಲ್ಲಾ
ರೀಸರ್ಚ್
ಮಾಡಿ
ನಟಿಸಿದ್ದಾರೆ.
ಅಂತಾದ್ರಲ್ಲಿ
ರಾಮಾಯಣ
ಕಾವ್ಯವನ್ನೇ
ಸಿನಿಮಾ
ಮಾಡುವಾಗ
ಓಂ
ರಾವುತ್
ಅಂಡ್
ಟೀಮ್
ಎಷ್ಟು
ರೀಸರ್ಚ್
ಮಾಡಬೇಕಿತ್ತು.
ಎಲ್ಲಾ
ಪಾತ್ರಗಳನ್ನು
ಎಷ್ಟು
ಅದ್ಭುತವಾಗಿ,
ಪರಿಣಾಮಕಾರಿಯಾಗಿ
ಕಟ್ಟಿಕೊಡಬೇಕಿತ್ತು.
ಅದನ್ನು
ಬಿಟ್ಟು
ಮನಸ್ಸಿಗೆ
ಬಂದಂತೆ
ಸಿನಿಮಾ
ಮಾಡೋದು
ಎಷ್ಟು
ಸರಿ
ಎಂದು
ನೆಟ್ಟಿಗರು
ಕಾಮೆಂಟ್
ಮಾಡುತ್ತಿದ್ದಾರೆ.
ಒಟ್ಟಾರೆ
ತಾರಕ್
ಹಳೇ
ವಿಡಿಯೋ
ಈಗ
ವೈರಲ್
ಆಗ್ತಿದೆ.
English summary
Adipurush Controversy: An old video where Jr NTR talked about Ravan’s Character went viral. Saif Ali Khan’s look in ‘Adipurush’ is being slammed online. know more.
Saturday, June 24, 2023, 18:01